ಯರುಕೋಣೆ ಸೀಡ್ ಬಾಲ್ ತಯಾರಿಕೆ
Team Udayavani, Jun 5, 2018, 8:58 PM IST
ಬೈಂದೂರು: ದಿವಂಗತ ನೆಲ್ಯಾಡಿ ನಾರಾಯಣ ಶೆಟ್ಟಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಆರ್.ಜೆ.ನಯನಾ ಶೆಟ್ಟಿಯವರು ಯರುಕೋಣೆಯಲ್ಲಿ ಆಯೋಜಿಸಿದ ಸೀಡ್ ಬಾಲ್ ತಯಾರಿಕೆ ಮತ್ತು ಸೀಡ್ ಬಾಲ್ ವಿತರಣೆ ಕಾರ್ಯಕ್ರಮ ಜರಗಿತು.
ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಗಿಡವನ್ನು ನೆಟ್ಟರೆ ಸಾಲದು, ಅದನ್ನು ಸಂರಕ್ಷಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ನಮ್ಮ ಪರಿಸರದ ಸ್ವಚ್ಛತೆ ದಿನನಿತ್ಯದ ವಿಚಾರವಾಗಬೇಕು. ಹಸಿರಿನಿಂದ ಉಸಿರು ಎನ್ನುವುದನ್ನು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಗಿಡ ನೆಡುವುದು ಫ್ಯಾಶನ್ ಆಗಿದೆ. ಅದರ ಫೋಟೋ ಹಾಕಿ ಪ್ರಚಾರ ಪಡೆಯುವುದಷ್ಟೇ ಗುರಿಯಾಗಿದ್ದು ,ನೆಟ್ಟ ಮರುದಿನದಿಂದ ಆ ಗಿಡದ ಸಂರಕ್ಷಣೆಯ ಬಗ್ಗೆ ಯಾವುದೇ ಗಮನಹರಿಸುವುದಿಲ್ಲ .ನೆಡುವುದರ ಜೊತೆಗೆ ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.ನಮ್ಮ ಪಶ್ಚಿಮ ಘಟ್ಟಗಳ ಕಾಡುಗಳನ್ನು ನಾವು ಸಂರಕ್ಷಿಸಿದರೆ ಮಾತ್ರ ಅಲ್ಲಿ ಹುಟ್ಟುವ ನಮ್ಮ ನದಿ ಮೂಲಗಳು ಉಳಿಯಲು ಸಾಧ್ಯ ಆ ನಿಟ್ಟಿನಲ್ಲಿ ನಾವೆಲ್ಲರೂ ಅದರ ಸಂರಕ್ಷಣೆಯ ಹೊಣೆ ಹೊರುವುದರ ಜೊತೆಗೆ ಪರಿಸರಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಸಹ್ಯಾದ್ರಿ ಸಂರಕ್ಷಣಾ ಸಮಿತಿಯ ಸಂಚಾಲಕರು,ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಮಂಗಳೂರು ಹೇಳಿದರು.
ಈ ವೇಳೆ ಮಾತಾಡಿದ ಸಾಸ್ತಾನ ಮಿತ್ರರು ತಂಡದ ಸ್ಥಾಪಕ ಅಧ್ಯಕ್ಷ ಪರಿಸರ ಪ್ರೇಮಿ ವಿನಯಚಂದ್ರ ಸಾಸ್ತಾನ ಶಾಲಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ತಮ್ಮ ಜನುಮ ದಿನದಂದು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ನಾವು ಕಲಿತ ಶಾಲೆಯಲ್ಲಿ ಹಾಗೂ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ್ಣಿನ ಗಿಡಗಳು ಅಥವಾ ಔಷಧಿ ಗಿಡಗಳನ್ನು ನೆಟ್ಟರೆ ಅದು ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ ಎಂದರು. ಸೀಡ್ ಬಾಲ್ ತಯಾರಿಸುವುದರಿಂದ ಸಸಿ ಬೆಳೆಸಲು ಅನುಕೂಲವಾಗುತ್ತದೆ, ಅಲ್ಲದೇ ಸಸಿಗಳು ತಮ್ಮಷ್ಟಕ್ಕೆ ತಾವೇ ನೆಲ ಸೇರುವುದರಿಂದ ಸಸಿ ನೆಡುವ ಶ್ರಮ ಇಲ್ಲದಂತಾಗುತ್ತದೆ. ಹಾಗೆಯೇ ಉಂಡೆಗಳನ್ನು ಎಸೆದ ಸ್ಥಳದಲ್ಲಿ ಸ್ವಯಂ ಸಸ್ಯ ವಾಗುವ ಅದು ತನ್ನ ಬೆಳವಣಿಗೆಯ ದಾರಿಯನ್ನು ತಂತಾನೇ ಕಂಡುಕೊಳ್ಳುತ್ತದೆ.ಮುಂದಿನ ದಿನಗಳಲ್ಲಿ ಹೆಮ್ಮರಗಳಾಗಿ ಅವುಗಳೇ ನಮ್ಮ ರಕ್ಷಣೆ ನೀಡುತ್ತವೆ ಎಂದು ಹೇಳಿದರು.
ಊರಿನ ಜನ ಹಾಗೆ ಮಕ್ಕಳು ಬಹಳ ಪ್ರೀತಿಯಿಂದ ಸೇರಿಕೊಂಡು ಬೀಜದುಂಡೆಗಳನ್ನು ತಯಾರಿಸಿ ಖುಷಿ ಪಟ್ಟರು.ಈ ಸಂದರ್ಭದಲ್ಲಿ ಯರುಕೋಣೆ ಆಲಗದ್ದೆ ಕೇರಿ ಸ.ಕಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಯ ಅಣ್ಣು, ಯರುಕೋಣೆ ಭಾಗದ ಅರಣ್ಯ ರಕ್ಷಕ ಜನಾರ್ದನ ಬೈಂದೂರು ಉಪಸ್ಥಿತರಿದ್ದರು. ಯರುಕೊಣೆ ಆಲಗದ್ದೆ ಕೇರಿ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಅಣ್ಣು,ಅರಣ್ಯ ರಕ್ಷಕ ಜನಾರ್ದನ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. 98.3 ರೆಡ್ ಎಫ್ ಎಂ ಖ್ಯಾತಿಯ ನಿರೂಪಕಿ ಆರ್.ಜೆ. ನಯನಾ ಶೆಟ್ಟಿ ಯರುಕೋಣೆ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.