ಸೀಡ್ ಪೆನ್ : ಶಾಲಾ ಮಕ್ಕಳ ಪರಿಸರ ಸ್ನೇಹಿ ಅನ್ವೇಷಣೆ
Team Udayavani, Aug 27, 2017, 7:55 AM IST
ಬೆಳ್ತಂಗಡಿ: ಇದು ಪರಿಸರ ಸ್ನೇಹಿ ಪೆನ್ನು.ಬಳಸಿ ಎಸೆಯಿರಿ (ಯೂಸ್ ಆ್ಯಂಡ್ ಥ್ರೋ) ಎಂಬ ಘೋಷ ವಾಕ್ಯಕ್ಕೆ ವಿರುದ್ಧವಾಗಿ ಬಿಸಾಡಿದ ಮೇಲೂ ಪ್ರಯೋಜನಕ್ಕೆ ಬರುವಂಥದ್ದೇ ಈ ಲೇಖನಿ. ಇತ್ತೀಚಿನ ಪ್ರಚಾರಕ್ಕೆ ಬಂದ ಸೀಡ್ ಬಾಲ್‌ನಂತೆಯೇ ಇದು ಸೀಡ್ ಪೆನ್.
ನಿತ್ಯವೂ ಉಪಯೋಗಿಸುವ ಪ್ಲಾಸ್ಟಿಕ್ ನಿರ್ಮಿತ ಪೆನ್ನಿನ ಬದಲು ಕೇವಲ ರೀಫಿಲ್ ಮಾತ್ರ ಬಳಸಿ, ಅದಕ್ಕೆ ಬಣ್ಣ, ಬಣ್ಣದ ಕಾಗದವನ್ನು ಸುತ್ತಿ ಪೆನ್ನಿನ ಶರೀರವನ್ನು ರೂಪಿಸಲಾಗುತ್ತದೆ. ಹೀಗೆ ತಯಾರಿಸುವಾಗ ಕಾಗದವನ್ನು ಸುತ್ತುವಾಗ ಅದರೊಳಗೆ ಹರಿವೆ ಸೊಪ್ಪಿನ ಬೀಜ, ಮೆಣಸು, ಬೆಂಡೆ, ಹೂವಿನ ಹಾಗೂ ಇತರೆ ತರಕಾರಿ ಬೀಜಗಳನ್ನು ಸೇರಿಸಲಾಗುತ್ತದೆ. ರೀಫಿಲ್ ಮುಗಿದ ಮೇಲೆ ನೀವು ಪೆನ್ನನ್ನು ಹಿತ್ತಲಲ್ಲಿ ಬಿಸಾಡುತ್ತೀರಿ ಎಂದುಕೊಳ್ಳಿ. ಆಗ ಅದರ ಕಾಗದವೆಲ್ಲಾ ಮಣ್ಣಿ ನೊಂದಿಗೆ ಬೆರೆತು, ಅದರೊಳಗಿನ ಬೀಜಗಳು ಮೊಳಕೆಯೊಡೆದು ಹಸಿರು ಕಂಗೊಳಿಸುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆಯ ಆಲೋಚನೆ ಇದನ್ನು ತಯಾರಿಸಿರುವ ಧರ್ಮಸ್ಥಳ ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯ ಮಕ್ಕಳದ್ದು.
ಸೀಡ್‌ಬಾಲ್‌ನಂತೆಯೇ ಸೀಡ್ ಪೆನ್
ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ತಿಳಿವಳಿಕೆ ಬರಬೇಕು ಎಂಬ ನಿಟ್ಟಿನಲ್ಲಿ ಸೀಡ್ ಪೆನ್‌ಗಳ ತಯಾರಿಕೆ ಮಾಡಿ ಬಳಸಲು ಯೋಚಿಸಿದ್ದೇವೆ. ಪೆನ್ನಿನೊಳಗೆ ತರಕಾರಿ ಬೀಜಗಳನ್ನು ಇಡಲಾಗುತ್ತಿದೆ. ಪೆನ್ನನ್ನು ಬಳಸಿ ಹೂವಿನ ಕುಂಡದಲ್ಲಿ, ಹಿತ್ತಲಲ್ಲಿ ಎಸೆದರೆ ಹೂವು- ತರಕಾರಿಗಳನ್ನು ಬೆಳೆಯಬಹುದು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು, ಹೊಸ ಹೊಸ ಪರಿಸರ ಸ್ನೇಹಿ ಆವಿಷ್ಕಾರಗಳು ಆಗಬೇಕು ಎಂದರು.
ಪರಿಸರ ಸಂಘದ ಸಂಯೋಜಕ ಶಿಕ್ಷಕಿಯರಾದ ಪೂರ್ಣಿಮಾ, ದೀಪಾ ಹಾಗೂ ಸೌಮ್ಯಾ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಅವಿನಾಭಾವ ಸಂಬಂಧ
ಪ್ರಕೃತಿ ಮತ್ತು ಮಾನವರ ಮಧ್ಯೆ ಅವಿನಾಭಾವ ಸಂಬಂಧವಿದೆ. ಪ್ರಕೃತಿ ಉಳಿದರೆ ಮಾನವ ಉಳಿಯುತ್ತಾನೆ. ಅದನ್ನು ಅಳಿಸಿದರೆ ನಮ್ಮ ಮುಂದಿನ ಜನಾಂಗ ಜೀವಿಸಲು ಕಷ್ಟ. ಅದಕ್ಕಾಗಿ ಪರಿಸರ ಸ್ನೇಹಿ ಯೋಜನೆಯನ್ನು ಹಾಕಿಕೊಳ್ಳಲಾಗುತ್ತಿದೆ ಎನ್ನುತ್ತಾರೆ.
-ಸುಪ್ರಿಯಾ ಹಷೇìಂದ್ರ ಕುಮಾರ್, ಎಸ್‌ಡಿಎಂ ಶಾಲಾ ಸಲಹಾ ಸಮಿತಿಯ ಅಧ್ಯಕ್ಷೆ
ಮಾರ್ಗದರ್ಶನ
ಇಂಥ ಪರಿಸರ ಸ್ನೇಹಿ ಚಿಂತನೆಯನ್ನು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹಷೇìಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
-ಎಂ.ವಿ. ಪರಿಮಳಾ, ಮುಖ್ಯಶಿಕ್ಷಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.