ಸ್ವಯಂ ರಕ್ಷಣಾ ಪರಿವರ್ತಕ ಅಳವಡಿಕೆ: ಮೆಸ್ಕಾಂ ಪ್ರಯೋಗ


Team Udayavani, Oct 26, 2018, 9:58 AM IST

26-october-1.gif

ಪುತ್ತೂರು: ಜಿಲ್ಲೆಯಲ್ಲಿ ವಿವಿಧ ಅನಾಹುತ, ಅವಘಡಗಳ ಸಂದರ್ಭದಲ್ಲಿ ವಿದ್ಯುತ್‌ ತಂತಿ ಮತ್ತು ಪರಿವರ್ತಕಗಳಿಗೆ ಉಂಟಾಗುವ ನಷ್ಟವನ್ನು ನಿಭಾಯಿಸುವ ನಿಟ್ಟಿನಲ್ಲಿ ಸ್ವಯಂ ರಕ್ಷಣಾ ಪರಿವರ್ತಕ (ಸೆಲ್ಫ್ ಪ್ರೊಟೆಕ್ಟೆಡ್‌ ಟಿಸಿ)ವನ್ನು ಬಳಕೆ ಮಾಡಲು ಮೆಸ್ಕಾಂ ನಿರ್ಧರಿಸಿದೆ.

ಗಾಳಿ ಮಳೆ ಸಹಿತ ವಿವಿಧ ಕಾರಣಗಳಿಗೆ ವಿದ್ಯುತ್‌ ಪರಿವರ್ತಕಗಳಿಗೆ ನಿರಂತರ ಹಾನಿ ಹಾಗೂ ನಷ್ಟ ಉಂಟಾಗುತ್ತದೆ. ಎಚ್‌.ಟಿ. ಲೈನ್‌ನಲ್ಲಿ ಉಂಟಾಗುವ ವ್ಯತ್ಯಯವನ್ನು ತಪ್ಪಿಸಲು ವಿದ್ಯುತ್‌ ಪರಿವರ್ತಕದಲ್ಲಿ ಸ್ವಿಚ್‌ ಅಳವಡಿಸಲಾಗುತ್ತದೆ. ಯಾವುದೇ ರೀತಿಯ ಒತ್ತಡ ಉಂಟಾದ ಸಂದರ್ಭದಲ್ಲಿ ವಿದ್ಯುತ್‌ ಪರಿವರ್ತಕದಲ್ಲಿ ತತ್‌ಕ್ಷಣ ಸ್ವಯಂ ಆಫ್‌ ಆಗುತ್ತದೆ. ಪರಿವರ್ತಕದಲ್ಲಿ ಆಫ್‌ ಮಾಡಲು ಯಾವುದೇ ಸಿಬಂದಿ ಹೋಗಬೇಕಾದ ಆವಶ್ಯಕತೆ ಇಲ್ಲ. ಆದರೆ ಮರುಪೂರಣಕ್ಕೆ ಹೋಗಬೇಕಾಗುತ್ತದೆ.

ಪ್ರಾಯೋಗಿಕ ಅಳವಡಿಕೆ
ಕರ್ನಾಟಕ ವಿದ್ಯುತ್‌ ಕಾರ್ಖಾನೆ ಸೆಲ್ಫ್ಪ್ರೊ ಟೆಕ್ಟೆಡ್‌ ಟಿಸಿಯನ್ನು ತಯಾರಿಸುತ್ತಿದ್ದು, ಮೆಸ್ಕಾಂ ಮಂಗಳೂರು ವಿಭಾಗಕ್ಕೆ 25 ಪರಿವರ್ತಕಗಳನ್ನು ತರಿಸಲಾಗಿದೆ. ಪ್ರಾಯೋಗಿಕವಾಗಿ ಮಂಗಳೂರು ವ್ಯಾಪ್ತಿಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕು ವ್ಯಾಪ್ತಿಯಲ್ಲೂ ತಲಾ 2ರಂತೆ ಪ್ರಾಯೋಗಿಕ ಅಳವಡಿಕೆಗೆ ನೀಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ತಂತಿ ಸಮಸ್ಯೆ ಪರಿಹಾರ
ಮೆಸ್ಕಾಂನಲ್ಲಿ ವಿದ್ಯುತ್‌ ವ್ಯವಸ್ಥೆಗೆ ಸಂಬಂಧಪಟ್ಟಂತೆ ವಿದ್ಯುತ್‌ ಕಂಬದ ಪೂರೈಕೆ ಸಮರ್ಪಕವಾಗಿದ್ದರೂ ಕೆಲವು ಸಮಯ ಗಳಿಂದ ತಂತಿಯ ಕೊರತೆಯಿಂದ ಕೆಲಸಗಳಿಗೆ ತೊಂದರೆಯಾಗಿತ್ತು. ತಂತಿ ಪೂರೈಕೆಯ ನಿಟ್ಟಿನಲ್ಲಿ ಜನವರಿ ತಿಂಗಳಲ್ಲೇ ಟೆಂಡರ್‌ ಕರೆಯಲಾಗಿದ್ದರೂ ಚುನಾವಣ ನೀತಿಸಂಹಿತೆ ಹಾಗೂ ಆಡಳಿತಾತ್ಮಕ ಸಮಸ್ಯೆಯಿಂದ ಟೆಂಡರ್‌ ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿರಲಿಲ್ಲ.

ಈ ಕಾರಣದಿಂದ ವಿದ್ಯುತ್‌ ತಂತಿಗೆ ಸಂಬಂಧಪಟ್ಟಂತೆ 5-6 ತಿಂಗಳಿಂದ ಕೆಲಸಗಳು ಸ್ಥಗಿತಗೊಂಡಿದ್ದವು. ಈಗ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡಿದೆ. ಜಿಲ್ಲೆಗೆ 10 ಸಾವಿರ ಕಿ.ಮೀ. ವಿದ್ಯುತ್‌ ತಂತಿಗಳ ಪೂರೈಕೆ ಆಗಲಿದ್ದು, ಪ್ರತಿ ತಿಂಗಳಿಗೆ 1 ಸಾವಿರ ಕಿ.ಮೀ.ನಂತೆ ಲಭಿಸಲಿದೆ. ಈಗಾಗಲೇ 3 ಸಾವಿರ ಕಿ.ಮೀ. ತಂತಿಗಳು ನಿಗಮಕ್ಕೆ ಲಭಿಸಿವೆ.

ನಗರಕ್ಕೆ ಮಾತ್ರ
ಸ್ವಯಂ ರಕ್ಷಣಾ ಪರಿವರ್ತಕವನ್ನು ನಗರ ವ್ಯಾಪ್ತಿಯಲ್ಲಿ ಮಾತ್ರ ಅಳವಡಿಸಲಾಗುತ್ತದೆ. ಗ್ರಾಮಾಂತರ ಭಾಗಗಳಲ್ಲಿ ಇಂತಹ ಪರಿವರ್ತಕವನ್ನು ಅಳವಡಿಸಲು ಮತ್ತು ಪರಿಪೂರಣಕ್ಕೆ ಕಷ್ಟವಾಗುವುದರಿಂದ ನಗರ ಪ್ರದೇಶಗಳಲ್ಲಿ ಮಾತ್ರ ಅಳವಡಿಸಲು ತೀರ್ಮಾನಿಸಲಾಗಿದೆ. ನಗರದಲ್ಲಿ ಕಚೇರಿಗೆ ಸಮೀಪದಲ್ಲಿ ಕೆಲವೇ ಪರಿವರ್ತಕಗಳಿರುವುದರಿಂದ ನಿಭಾಯಿಸಲು ಸುಲಭವಾಗುವುದರಿಂದ ನಗರದಲ್ಲಿ ಅಳವಡಿಸಲಾಗುತ್ತದೆ.

ಮಂಗಳೂರಿಗೆ ಆದ್ಯತೆ
ಹಾಲಿ ಟಿಸಿಗಳಲ್ಲಿ ಉಂಟಾಗುತ್ತಿರುವ ಒತ್ತಡವನ್ನು ನಿಭಾಯಿಸಲು ಸೆಲ್ಫ್ ಪ್ರೊಟೆಕ್ಟೆಡ್‌ ಟಿಸಿಯನ್ನು ಪ್ರಾಯೋಗಿಕವಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಸಾಧಕ -ಬಾಧಕಗಳ ಅರಿವಿಲ್ಲದಿರುವುದರಿಂದ ಉಪವಿಭಾಗಗಳಲ್ಲಿ ಅಳವಡಿಸಲು ಎಂಜಿನಿಯರ್‌ಗಳು ಆರಂಭದಲ್ಲಿ ಹಿಂದೇಟು ಹಾಕಿದರೂ ಅವರಿಗೂ ಅಳವಡಿಸಲು ನೀಡಲಾಗುತ್ತದೆ. ಮಂಗಳೂರನ್ನು ಆದ್ಯತೆಯಾಗಿ ಪರಿಗಣಿಸಿದ್ದೇವೆ.
ಮಂಜಪ್ಪ ಅಧೀಕ್ಷಕ ಎಂಜಿನಿಯರ್‌, ಮೆಸ್ಕಾಂ
   ಮಂಗಳೂರು ವೃತ್ತ ಕಚೇರಿ

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

Ramalinga-reddy

Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ

R-Ashok

C.T.Ravi Case: ನಕ್ಸಲರು ರವಿಗೆ ಗುಂಡು ಹೊಡೆಯಲಿ ಎಂದು ಕರೆದೊಯ್ದರೇ?: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.