ಸ್ವಾವಲಂಬಿ ಹೆಜ್ಜೆ: ಮಿತ್ತೂರು ಶಾಲೆಯ ಮಾದರಿ ತೋಟ


Team Udayavani, Dec 22, 2017, 3:57 PM IST

22-Dec-15.jpg

ಇಡ್ಕಿದು: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮಿತ್ತೂರು ಸರಕಾರಿ ಹಿ.ಪ್ರಾ. ಶಾಲೆ ಸ್ವಾವಲಂಬಿ ಹೆಜ್ಜೆಗಳ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಜನಪ್ರತಿನಿಧಿಗಳು, ಎಸ್‌ಡಿಎಂಸಿ ಹಾಗೂ ಶಿಕ್ಷಕರ ಒಮ್ಮತದ ಪರಿಕಲ್ಪನೆಯಿಂದಾಗಿ ಇಲ್ಲಿ ಸಮೃದ್ಧ ಶಾಲಾ ತೋಟ ಅರಳಿ ನಿಂತಿದೆ.

ಮೂರುವರೆ ಎಕ್ರೆ ಜಾಗ ಹೊಂದಿರುವ ಮಿತ್ತೂರು ಶಾಲೆಯ ಮಕ್ಕಳ ಪೋಷಕರು ರೈತರೇ ಆಗಿರುವುದರಿಂದ, ಶಾಲೆಯಲ್ಲೂ ತೋಟ ನಿರ್ಮಿಸಲು ಶಾಲಾಭಿವೃದ್ಧಿ ಸಮಿತಿ ನಿರ್ಧರಿಸಿತು. ಗ್ರಾ.ಪಂ. ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅದು ಸಾಕಾರಗೊಂಡಿತು. ಮಕ್ಕಳಲ್ಲಿ
ಪ್ರಾಥಮಿಕ ಹಂತದಲ್ಲೇ ಹಸಿರು ಕ್ರಾಂತಿಯ ಅರಿವು ಮೂಡಿತು. ಶಾಲೆ ಯಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಸುವ ಕೈತೋಟದಲ್ಲೀಗ 600 ಮಂಗಳ ಕಂಗಿನ ಗಿಡ, 30 ತೆಂಗಿನ ಗಿಡ, 350 ನೇಂದ್ರ, ಕದಳಿ ಬಾಳೆ, ಬದನೆ, ಬಸಳೆ, ಪಪ್ಪಾಯಿ, ಸೌತೆಕಾಯಿ, ಬೆಂಡೆ, ತೊಂಡೆ ಗಿಡ-ಬಳ್ಳಿಗಳಿವೆ. ತೋಟಗಾರಿಕೆ ಆರಂಭಿಸಿ 10 ತಿಂಗಳಾಗಿದ್ದು, ತರಕಾರಿ ಸಿಗುತ್ತಿದೆ. ಬಿಸಿಯೂಟಕ್ಕೆ ಬಳಸಿ, ಉಳಿದುದನ್ನು ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ರೈತ ಸುಧಾಕರ ಎಂಬವರು ತೋಟದ ಉಸ್ತುವಾರಿ ನೋಡಿಕೊಳ್ಳಲು ಎರಡು ವರ್ಷಗಳ ಅವಧಿಗೆ ನಿಯೋಜಿತರಾಗಿದ್ದಾರೆ.

ತೆಂಗು-ಕಂಗಿಗೆ ನೀರುಣಿಸುವ ಕೆಲಸವೂ ಅವರದೇ. 3 ವರ್ಷಗಳಲ್ಲಿ ಇವು ಫ‌ಲ ಬಿಡುವ ನಿರೀಕ್ಷೆಯಿದ್ದು, ಶಾಲೆಗೆ ವರ್ಷಕ್ಕೆ ಕನಿಷ್ಠ 2 ಲಕ್ಷ ರೂ. ಆದಾಯ ಬರಲಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಹಾಗೂ ಎಸ್‌ಡಿಎಂಸಿ ನಾಮ ನಿರ್ದೇಶಿತ ಸದಸ್ಯರಾದ ಸುಧೀರ್‌ ಕುಮಾರ್‌ ಶೆಟ್ಟಿ ಮಿತ್ತೂರು ಹೇಳುತ್ತಾರೆ.

ಇಲ್ಲಿನ ಕೊಳವೆ ಬಾವಿಯಲ್ಲಿ 3 ಇಂಚು ನೀರಿದ್ದು, 5 ಎಚ್‌ಪಿ ಮೋಟರ್‌ ಪಂಪ್‌ ಮೂಲಕ ಮೇಲೆತ್ತಿ, ಎಂಟು ಸ್ಪ್ರಿಂಕ್ಲರ್‌ಗಳ ಮೂಲಕ ತೋಟಕ್ಕೆ ಹಾಯಿಸಲಾಗುತ್ತದೆ. ಶಿಕ್ಷಕರು, ಮಕ್ಕಳ ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶ್ರಮದಾನದ ಮೂಲಕ ತೋಟ ಅಭಿವೃದ್ಧಿಪಡಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಬಳಸಲಾಗಿದೆ. ಸಹಶಿಕ್ಷಕ ಸುಬ್ರಾಯ ಅವರು ಈ ತೋಟದ ಕುರಿತಾಗಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಮುಖ್ಯಶಿಕ್ಷಕ ಮೋಹನ್‌ ಹಾಗೂ ಸಹ ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಿತ್ಯ ಪ್ರೀತಿಯಿಂದ ತೋಟದ ಆರೈಕೆ ಮಾಡುತ್ತಿದ್ದಾರೆ. ಜತೆಗೆ, ಪರಿಸರದ ಪಾಠವೂ ಆಗುತ್ತಿದೆ.

ಇಲ್ಲಿ ಒಂದರಿಂದ 8ನೇ ತರಗತಿ ವರೆಗೆ 112 ವಿದ್ಯಾರ್ಥಿಗಳಿದ್ದು, 7 ಕಾಯಂ ಅಧ್ಯಾಪಕರು ಹಾಗೂ ಒಬ್ಬರು ಗೌರವ ಶಿಕ್ಷಕರಿದ್ದಾರೆ. ಪರಿಸರ ಮಿತ್ರ ಶಾಲೆ ಹಾಗೂ ಸ್ವತ್ಛತೆಯಲ್ಲಿ ಈ ಶಾಲೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಶಾಲೆ ನನ್ನ ಕ್ಷೇತ್ರದಲ್ಲಿರುವುದು ಅಭಿಮಾನದ ಸಂಗತಿ ಎಂದಿದ್ದಾರೆ.

ಉಮರ್‌ ಕಬಕ

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.