ನೈಜ ಸೇವೆಯಿಂದ ಆತ್ಮಸಂತೋಷ: ಜಗಜ್ಜೀವನ್‌ದಾಸ್
Team Udayavani, Jul 21, 2017, 5:30 AM IST
ಉಪ್ಪಿನಂಗಡಿ: ನೈಜ ಸೇವೆಯಿಂದ ಮಾತ್ರ ಆತ್ಮಸಂತೋಷ ಸಾಧ್ಯvಜಿದ್ದು, ಇದಕ್ಕೆ ಸಮಾಜವು ಮನ್ನಣೆ ನೀಡುತ್ತದೆ. ಆದ್ದರಿಂದ ರೋಟರಿ ಸದಸ್ಯರು ಪರೋಪಕಾರಿಯಾಗಿ ಚಿಂತಿಸಿ, ಈ ಸಮಾಜಕ್ಕೆ ಒಳಿತು ಮಾಡುವುದರೊಂದಿಗೆ ಯುವ ಜನರಲ್ಲಿಯೂ ಸೇವಾ ಮನೋಭಾವ ಬೆಳೆಸಬೇಕು ಎಂದು ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಜಗಜ್ಜೀವನ್‌ದಾಸ್ ರೈ ಎ. ಅವರು ತಿಳಿಸಿದರು.
ಉಪ್ಪಿನಂಗಡಿಯ ಸ.ಮಾ.ಹಿ.ಪ್ರಾ. ಶಾಲಾ ಸಭಾಂಗಣ ದಲ್ಲಿ ನಡೆದ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣಾಧಿಕಾರಿಯಾಗಿ ಭಾಗವಹಿಸಿ ಅವರು ಮಾತ ನಾಡಿದರು.
ಬೇಡಿಕೆ ಪೂರೈಸಿ
ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಎ.ಎಂ. ಕುಮಾರ್ ಮಾತನಾಡಿ, ರೋಟರಿ ಸದಸ್ಯರು ಕುಟುಂಬಕ್ಕೆ ಮೊದಲ ಒತ್ತು ನೀಡುವುದರೊಂದಿಗೆ, ಸೇವೆಯ ಮೂಲಕ ಸಮಾಜದ ಬೇಡಿಕೆಗಳನ್ನು ಪೂರೈಸಲು ಮುಂದಾಗಬೇಕು. ಸೇವೆಯಲ್ಲಿ ಪರಸ್ಪರ ಸ್ಪರ್ಧೆಯ ಬದಲು ಸಹಕಾರ ಮನೋಭಾವನೆಯಿಂದ ಸಮುದಾಯದ ಒಳಿತಿಗೆ ಚಿಂತಿಸಬೇಕು ಎಂದರು.
ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಅಬ್ದುರ್ರಹ್ಮಾನ್ ಯುನಿಕ್, ತನ್ನ ಅಧ್ಯûಾವಧಿಯಲ್ಲಿ ಸಮಾಜಕ್ಕೆ ಉತ್ತಮ ಸೇವೆ ನೀಡ ಬೇಕೆನ್ನುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಸರ್ವರೂ ಸಹಕಾರ ನೀಡ ಬೇಕೆಂದು ಕೋರಿದರು.
ಈ ಸಂದರ್ಭ ಉಪ್ಪಿನಂಗಡಿ ರೋಟರಿ ಕ್ಲಬ್ ವತಿಯಿಂದ ಮುಗ್ಗದ ಮೀನಾಕ್ಷಿ ಅವರ ಪುತ್ರಿಯರಿಗೆ ಶೈಕ್ಷಣಿಕ ನೆರವು ನೀಡಲಾಯಿತು.
ವಲಯ 4ರ ವಲಯ ಲೆಫ್ಟಿನೆಂಟ್ ಲಾರೆನ್ಸ್ ಗೋನ್ಸಾಲ್ವೆಸ್ ಶುಭ ಹಾರೈಸಿದರು. ಕೋಶಾಧಿಕಾರಿಯಾಗಿ ಇಸ್ಮಾಯೀಲ್ ಇಕ್ಬಾಲ್, ಸಹಕಾರ್ಯದರ್ಶಿಯಾಗಿ ಕೇಶವ ಮುಡಿಪು, ಉಪಾಧ್ಯಕ್ಷರಾಗಿ ಸುಧಾಕರ ಶೆಟ್ಟಿ ಕೋಟೆ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮನೋಹರ್ ಕುಮಾರ್, ವೊಕೇಶನಲ್ ಸರ್ವೀಸ್ ನಿರ್ದೇಶಕರಾಗಿ ಡಾ| ನಿರಂಜನ್ ರೈ, ಕಮ್ಯುನಿಟಿ ಸರ್ವೀಸ್ ನಿರ್ದೇಶಕರಾಗಿ ಶಿವಶಂಕರ ನಾಯಕ್, ಇಂಟರ್‌ನ್ಯಾಶನಲ್ ಸರ್ವೀಸ್ ನಿರ್ದೇಶಕರಾಗಿ ಅಜೀಜ್ ಬಸ್ತಿಕ್ಕಾರ್, ನ್ಯೂ ಜನರೇಶನ್ ಸರ್ವೀಸ್ ನಿರ್ದೇಶಕರಾಗಿ ಡಾ| ರಾಜಾರಾಂ ಕೆ.ಬಿ., ಬುಲೆಟಿನ್ ಎಡಿಟರ್ ಆಗಿ ರವೀಂದ್ರ ದರ್ಬೆ, ಸಾರ್ಜಂಟ್ ಎಟ್ ಆಮ್ಸ್ì ಆಗಿ ಗುಣಕರ ಅಗ್ನಾಡಿ, ಪಲ್ಸ್ ಪೋಲಿಯೋ ಚೇರ್‌ವೆುನ್ ಆಗಿ ಅಬೂಬಕ್ಕರ್ ಪುತ್ತ, ಟಿ.ಆರ್.ಎಫ್ ಚೇರ್‌ವೆುನ್ ಆಗಿ ಜಾರ್ಜ್ ನೋರೋನ್ಹೊ, ಟೀಚ್ ಚೇರ್‌ವೆುನ್ ಆಗಿ ದಿವಾಕರ ಆಚಾರ್ಯ, ಲಿಟ್‌ರೆಸಿ ಚೇರ್‌ವೆುನ್ ಆಗಿ ಅಬ್ದುಲ್ ಖಾದರ್ (ಬಶೀರ್) ಕೊಲ್ಲೆಜಾಲ್, ವೆಬ್‌ಸೈಟ್‌ಗೆ ನಿತೀಶ್ ಶೆಣೈ, ಇಂಟರ್ಯಾಕ್ಟ್ ಚೇರ್‌ವೆುನ್ ಆಗಿ ಅಬ್ದುಲ್ ಸಮದ್, ರೋಟರ್ಯಾಕ್ಟ್ ಚೇರ್‌ವೆುನ್ ಆಗಿ ಅಶ್ರಫ್ ಅಗ್ನಾಡಿ, ಆರ್.ಸಿ.ಸಿ. ಚೇರ್‌ವೆುನ್ ಆಗಿ ನಝೀರ್ ಬೆದ್ರೋಡಿ, ವಿನ್ಸ್ ಚೇರ್‌ವೆುನ್ ಆಗಿ ಸಿರಾಜ್ ಆರ್.ವೈ. ಅವರು ಪದಗ್ರಹಣ ಸ್ವೀಕರಿಸಿದರು.
ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ಟಾ , ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಅತ್ರಮಜಲು, ನ್ಯಾಯವಾದಿ ಅನಿಲ್ ಕುಮಾರ್ ಉಪ್ಪಿನಂಗಡಿ, ಜಗದೀಶ್ ಶೆಟ್ಟಿ, ಡಾ| ಗೋವಿಂದ ಪ್ರಸಾದ್ ಕಜೆ, ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೇಶವ ರಂಗಾಜೆ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಶಿಕ್ಷಕ ಶ್ರೀಧರ್ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಹರೀಶ್ ನಾಯಕ್ ನಟ್ಟಿಬೈಲ್ ವಂದಿಸಿದರು. ಉಪಪ್ರಾಚಾರ್ಯ ದಿವಾಕರ ಆಚಾರ್ಯ, ನ್ಯಾಯವಾದಿ ಮನೋಹರ್ ಕುಮಾರ್ ಜಾರ್ಜ್ ನೊರೋನ್ಹಾ, ಮುಹಮ್ಮದ್ ಆರೀಫ್ ಹಾಗೂ ಅಶ್ರಫ್ ಅಗ್ನಾಡಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ದೃಢ ಸಂಕಲ್ಪ ಅಗತ್ಯ
2019-20ರ ರೋಟರಿ ಜಿಲ್ಲಾ 3181 ಗವರ್ನರ್ ಜೋಸೆಫ್ ಮ್ಯಾಥ್ಯೂ ಮಾತನಾಡಿ, ಸಾಧಿಸಬೇಕೆಂಬ ದೃಢ ಸಂಕಲ್ಪವಿದ್ದಾಗ ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ. ಸಾಧನೆಯಿಂದ ಮಾತ್ರ ನಾವು ಗುರುತಿಸಿಕೊಳ್ಳಲು ಸಾಧ್ಯ. ಆದ್ದರಿಂದ ರೋಟರಿ ಸದಸ್ಯರು ನಾಯಕತ್ವ ಗುಣದೊಂದಿಗೆ ಜೀವನದಲ್ಲಿ ಸಾಧನೆಗೆ ಮುಂದಾಗಬೇಕು. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.