Fraud Case: ಎಪಿಕೆ ಫೈಲ್ ಕಳುಹಿಸಿ 1.31 ಲ.ರೂ. ವಂಚನೆ
ಸಂಚಾರ ನಿಯಮ ಉಲ್ಲಂಘನೆಯ ನಕಲಿ ಲಿಂಕ್ ಕಳುಹಿಸಿ ಮೋಸ
Team Udayavani, Nov 27, 2024, 6:50 AM IST
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಗ್ಗೆ ಲಿಂಕ್ ಮೂಲಕ ನಕಲಿ ಇ-ಚಲನ್ ಕಳುಹಿಸಿ ವ್ಯಕ್ತಿಯೋರ್ವರ ಖಾತೆಯಿಂದ 1.31 ಲ.ರೂ. ಹಣವನ್ನು ವರ್ಗಾಯಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ನ. 24ರಂದು ವ್ಯಕ್ತಿಯೋರ್ವರಿಗೆ +917878422870 ನೇ ವಾಟ್ಸ್ ಆ್ಯಪ್ ನಂಬರ್‌ನಿಂದ ಮೆಸೇಜ್ ಬಂದಿದ್ದು, ಅದರಲ್ಲಿ VAHAN PARIVAHAN.apk ಫೈಲ್ ಇತ್ತು. ಅದನ್ನು ಡೌನ್‌ಲೋಡ್ ಮಾಡಿದಾಗ ಅವರ ಮೊಬೈಲ್‌ಗೆ 16 ಒಟಿಪಿಗಳು ಬಂದಿದ್ದವು. ಅವರು ಆ ಒಟಿಪಿಗಳನ್ನು ಯಾರಿಗೂ ಕಳಹಿಸಿರಲಿಲ್ಲ. ಅನಂತರ ಅವರ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ನಲ್ಲಿ ಅವರ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್‌ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು. ಕೂಡಲೇ ಅವರು ತನ್ನ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದ್ದರು.
ಯಾರೋ ಅಪರಿಚಿತರು ಎಪಿಕೆ ಫೈಲ್‌ನ ಮೂಲಕ ಅವರ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆದು ಫ್ಲಿಪ್‌ಕಾರ್ಟ್‌ನಲ್ಲಿ 39,398 ರೂ. ಮೌಲ್ಯದ ವನ್‌ಪ್ಲಸ್ ಮೊಬೈಲ್, 32,398 ರೂ. ಮೌಲ್ಯದ ಮೊಟೊರೊಲಾ ಎಜ್ ಮೊಬೈಲ್, 12,800 ರೂ. ಮೌಲ್ಯದ ಏರ್‌ಪೋಡ್, 14,700 ರೂ. ಹಾಗೂ 29,400 ರೂ. ಹಾಗೂ 3,000 ರೂ. ಮೌಲ್ಯದ ಫ್ಲಿಪ್‌ಕಾರ್ಟ್ ವೋಚರ್‌ಗಳನ್ನು ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್ ಮಾಡಿ ಒಟ್ಟು 1,31,396 ರೂ. ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿವಾಹನ್ ಚಲನ್ ನೆಪ!
ಸರಕಾರದ “ಪರಿವಾಹನ್’ ಆ್ಯಪ್‌ನ ಹೆಸರಿನಲ್ಲಿ ಈಗ ಸೈಬರ್ ವಂಚಕರು ಹಣ ದೋಚಲು ಆರಂಭಿಸಿದ್ದಾರೆ. ಪರಿವಾಹನ್‌ನಲ್ಲಿ ವಾಹನ ಮಾಲಕರ ವಿವರ ಪಡೆದುಕೊಳ್ಳಬಹುದು. ವಾಹನ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೂ ಅವಕಾಶವಿದೆ. ಕೆಲವು ರಾಜ್ಯಗಳಲ್ಲಿ ಪರಿವಾಹನ್ ಮೂಲಕವೇ ವಾಹನ ಚಾಲಕರ ಮೊಬೈಲ್‌ಗೆ ನೋಟಿಸ್, ಚಲನ್ ಕೂಡ ಬರುವ ವ್ಯವಸ್ಥೆ ಇದೆ. ಅದನ್ನೇ ಸೈಬರ್ ವಂಚಕರು ತಮ್ಮ ಕೃತ್ಯಕ್ಕೆ ಉಪಯೋಗಿಸುತ್ತಿರುವುದು ಕಂಡುಬರುತ್ತಿದೆ. ಈ ರೀತಿಯ ಪರಿವಾಹನ್ ಆ್ಯಪ್/ಲಿಂಕ್ ಅನ್ನು ಎಪಿಕೆ ಫೈಲ್ ಜತೆಗೆ ಕಳುಹಿಸುತ್ತಾರೆ. ನಂಬಿಕೆ ಬರುವಂತೆ ಮಾಡಲು ಅದರ ಜತೆಗೆ ಇ-ಚಲನ್(ನಕಲಿ) ಕೂಡ ಅಟ್ಯಾಚ್ ಮಾಡಿರುತ್ತಾರೆ. ಆ ರೀತಿಯ ಫೈಲ್ ತೆರೆದಾಗ ಎಪಿಕೆ ಫೈಲ್/ಆ್ಯಪ್ ಮೊಬೈಲ್‌ನಲ್ಲಿರುವ ಬ್ಯಾಂಕ್ ಸಹಿತ ಎಲ್ಲ ಮಾಹಿತಿಗಳನ್ನು ಕದಿಯುತ್ತದೆ. ಕ್ಷಣ ಮಾತ್ರದಲ್ಲಿಯೇ ವಂಚಕರು ಹಣ ವರ್ಗಾಯಿಸಿಕೊಳ್ಳುತ್ತಾರೆ.
ಏನಿದು .ಎಪಿಕೆ ಫೈಲ್?
ಎಪಿಕೆಯ ವಿಸ್ತೃತ ರೂಪ “ಆ್ಯಂಡ್ರಾಯ್ಡ ಪ್ಯಾಕೇಜ್ ಕಿಟ್’ .ಎಪಿಕೆ ಫೈಲ್‌ಗಳು ಭಾರೀ ಪವರ್‌ಫುಲ್. ಇವು ಮೊಬೈಲ್‌ನಲ್ಲಿರುವ ಗ್ಯಾಲರಿ, ಕೆಮರಾ ಮೊದಲಾದವುಗಳ ಆ್ಯಕ್ಸೆಸ್‌ಗೆ ಪರ್ಮಿಷನ್ ಕೇಳುವುದಿಲ್ಲ. ನೇರವಾಗಿ ಆ್ಯಕ್ಸೆಸ್ ಮಾಡಿಕೊಳ್ಳುತ್ತವೆ. ಹಾಗಾಗಿ ಇಂತಹ ಫೈಲ್‌ಗಳನ್ನು ತೆರೆಯಬಾರದು. ಡೌನ್‌ಲೋಡ್ ಮಾಡಬಾರದು. ಆ್ಯಪ್‌ಗ್ಳನ್ನು ಪ್ಲೇ ಸ್ಟೋರ್ ಮೂಲಕವೇ ಡೌನ್‌ಲೋಡ್ ಮಾಡಿಕೊಳ್ಳುವುದು ಸುರಕ್ಷಿತ. ಮೊಬೈಲ್‌ನ ಸೆಟ್ಟಿಂಗ್ಸ್‌ನಲ್ಲಿ “ಇನ್‌ಸ್ಟಾಲ್ ಅನ್‌ನೋನ್ ಆ್ಯಪ್ಸ್’ ಇರುವಲ್ಲಿ ಟಿಕ್ ಮಾರ್ಕ್ಸ್ ಹಾಕಬಾರದು. ಆಗ ಒಂದು ವೇಳೆ ಎಪಿಕೆ ಫೈಲ್ ನಮ್ಮ ಮೊಬೈಲ್‌ಗೆ ಬಂದರೂ ಅದನ್ನು ತೆರೆಯುವ ಮೊದಲು ನಮಗೆ ಎಚ್ಚರಿಕೆಯ ಸಂದೇಶ ತೋರುತ್ತದೆ ಎನ್ನುತ್ತಾರೆ ಸೈಬರ್ ತಂತ್ರಾಂಶಗಳ ತಜ್ಞ ಡಾ| ಅನಂತ ಪ್ರಭು ಗುರುಪುರ ಅವರು.
ರಕ್ಷಣೆ ಹೇಗೆ ?
ಮೊಬೈಲ್‌ಗೆ ಬರುವ ಫೈಲ್ ಎಪಿಕೆಯಾಗಿದ್ದರೆ ಆ ಫೈಲ್‌ನ ಕೊನೆಯಲ್ಲಿ.apk ಎಂಬುದಾಗಿ ಇರುತ್ತದೆ. ಒಂದು ವೇಳೆ ಫೈಲ್‌ನ ಬದಲು ಲಿಂಕ್ ಬಂದಿದ್ದರೆ ಆಗ ಅದರಲ್ಲಿ .apk ಎಂಬುದಾಗಿ ಇರುವುದಿಲ್ಲ. ಆದರೆ ಅದು ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿರುತ್ತದೆ. ಅನಂತರ ಆ ಫೈಲ್‌ನ ಕೊನೆಯಲ್ಲಿ.apk ಕಾಣುತ್ತದೆ. ಈ ರೀತಿ ಇರುವ ಫೈಲ್‌ಗಳನ್ನು ತೆರೆಯಬಾರದು ಎನ್ನುತ್ತಾರೆ ಡಾ| ಪ್ರಭು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್ ರಾಜ್ಯಭಾರ!
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್; ಸುಗಮ ಸಂಚಾರಕ್ಕೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.