ಸಚ್ಚತೆ: ಅಗ್ರಸ್ಥಾನಕ್ಕೇರಲು ಮನಪಾ ಸಿದ್ಧತೆ
Team Udayavani, Jan 4, 2018, 9:36 AM IST
ಮಹಾನಗರ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ ಭಾರತ ಮಿಷನ್’ ಅಡಿಯಲ್ಲಿ ಸ್ವಚ್ಛ ತೆಗಾಗಿ ನಗರಗಳಿಗೆ ನೀಡುವ ರೇಟಿಂಗ್‌ನಲ್ಲಿ ಮಹಾನಗರ ಪಾಲಿಕೆಯು ಅಗ್ರಸ್ಥಾನ ಪಡೆಯುವ ಸಂಬಂಧ ವ್ಯಾಪಕ ಸಿದ್ಧತೆಯನ್ನು ಕೈಗೊಂಡಿದೆ. ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಲು ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ವಾರದ ಒಳಗೆ ಮಂಗಳೂರಿಗೆ ಆಗಮಿಸಲಿದೆ.
ಸುಮಾರು ಎರಡು ದಿನಗಳ ಕಾಲ ಮಂಗಳೂರು ಪಾಲಿಕೆಯಲ್ಲಿ ಕೇಂದ್ರ ತಂಡದಿಂದ ನೇರ ಸಮೀಕ್ಷೆ ನಡೆಯಲಿದ್ದು, ಪಾಲಿಕೆಯು ಈಗಾಗಲೇ ಸ್ವಚ್ಛತೆ ಬಗ್ಗೆ ಕೇಂದ್ರಕ್ಕೆ ಕಳುಹಿಸಿದ ಮಾಹಿತಿಯು ನೈಜವಾಗಿದೆಯೇ? ಹಾಗೂ ಇಲ್ಲಿನ ಒಟ್ಟು ಪರಿಸ್ಥಿತಿ ಹೇಗಿದೆ ಎಂಬುದನ್ನು ತಂಡ ಪರಿಶೀಲಿಸಿ ಅಂಕಗಳನ್ನು ನೀಡಲಿದೆ.
ಕಳೆದ ಬಾರಿ ನಡೆದ ಸ್ವಚ್ಛ ಸರ್ವೇ ಕ್ಷಣದಲ್ಲಿ ರಾಜ್ಯದ 27 ನಗರಗಳು ಪಾಲ್ಗೊಂಡಿತ್ತು. ಅವುಗಳ ಪೈಕಿ ಮಂಗಳೂರು ಪಾಲಿಕೆಯು ದೇಶದಲ್ಲಿಯೇ 63ನೇ ಸ್ಥಾನ ಗಳಿಸಿದೆ. ಸ್ವಚ್ಛ ಸರ್ವೇಕ್ಷಣ- 2016ರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. 2017ರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರ ಗಳನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ದೇಶದ ಎಲ್ಲ ನಗರಗಳನ್ನು ಆಯ್ಕೆ ಮಾಡಲಾಗಿರುವುದರಿಂದ ಇನ್ನಷ್ಟು ಸವಾಲಿನ ಸ್ಪರ್ಧೆಯನ್ನು ಮಂಗಳೂರು ಎದುರಿಸಬೇಕಾಗಿದೆ.
ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ
ಮಂಗಳೂರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪಾಲಿಕೆ ಅಥವಾ ಯಾವುದೇ ಸಂಘ-ಸಂಸ್ಥೆಗಳಿಗೆ ಸೀಮಿತವಾದ ವಿಚಾರವಲ್ಲ. ಸಾರ್ವಜನಿಕ ಪಾಲ್ಗೊಳ್ಳುವಿಕೆಯೇ ಇದರಲ್ಲಿ ಪ್ರಾಧಾನ್ಯ. ಈ ನಿಟ್ಟಿನಲ್ಲಿ ಆಯಾಯ ವ್ಯಾಪ್ತಿಯಲ್ಲಿ ಸ್ವಚ್ಛ ಜಾಗೃತಿಯ ಪರಿಕಲ್ಪನೆ ಮನೆಯಿಂದಲೇ ಆರಂಭವಾಗಬೇಕು ಎಂಬ ನೆಲೆಯಲ್ಲಿ ಪಾಲಿಕೆ ವತಿಯಿಂದ ಈಗಾಗಲೇ ಮಂಗಳೂರು ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಂಗಳೂರಿನ ಶ್ರೀ ರಾಮಕೃಷ್ಣ ಮಿಷನ್ ಅಡಿಯಲ್ಲಿ ಸುದೀರ್ಘ ಕಾಲದಿಂದ ‘ಸ್ವಚ್ಛ ಮಂಗಳೂರು’ ಅಭಿಯಾನ ನಗರದ ಮೂಲೆ ಮೂಲೆಯಲ್ಲಿ ನಡೆದ ಪರಿಣಾಮ ಅಭೂತಪೂರ್ವ ಬದಲಾವಣೆಯನ್ನು ಮಂಗಳೂರು ಕಂಡಿದೆ. ಸಹಸ್ರ ಸಂಖ್ಯೆಯ ಜನರು ಇದರಲ್ಲಿ ಪಾಲ್ಗೊಂಡು ಸ್ವಚ್ಛ ಮಂಗಳೂರಿಗೆ ಕೈಜೋಡಿಸಿದ್ದಾರೆ. ಪ್ರತೀ ರವಿವಾರ ಸ್ವಚ್ಛತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸುತ್ತಿರುವುದು ಮಾದರಿಯ ಕೆಲಸವಾಗಿ ಮೂಡಿಬಂದಿದೆ. ಜತೆಗೆ, ಮಾತಾ ಅಮೃತಾನಂದಮಯಿ ಬಳಗ ಹಾಗೂ ಸ್ವಚ್ಛ ಚಿಲಿಂಬಿ ಎಂಬ ಪರಿಕಲ್ಪನೆಯಂತಹ ಸ್ವಚ್ಛ ಮಂಗಳೂರು ಯೋಜನೆಗೆ ಹಲವು ಸಾರ್ವಜನಿಕರು, ಸಂಘ-ಸಂಸ್ಥೆಗಳು ನಿರಂತರವಾಗಿ ಕೈಜೋಡಿಸಿದ್ದಾರೆ. ಇದು ‘ಸ್ವಚ್ಛ ಮಂಗಳೂರು’ ಪರಿಕಲ್ಪನೆಗೆ ಇನ್ನಷ್ಟು ಪೂರಕವಾಗಿ ಅಂಕ ಒದಗಿಸಲು ಸಹಾಯವಾಗಬಹುದು.
ತೆರಿಗೆ ರಿಯಾಯಿತಿ; ಸ್ವಚ್ಛತೆ ಕಾಪಾಡಿದರೆ ಶ್ರೇಯಾಂಕ!
ಮನಪಾ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್, ಮನೆಗಳು, ವಸತಿ ನಿಲಯಗಳು, ಹೊಟೇಲ್ ಹಾಗೂ ಇತರೇ ಸಂಸ್ಥೆಗಳು ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಬೇಕು. ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಣೆ (ಕಾಂಪೋಸ್ಟ್ ಅಥವಾ ಇತರೆ ವೈಜ್ಞಾನಿಕ ವಿಧಾನ) ಮಾಡುವವರಿಗೆ ಮನಪಾ ಘನತ್ಯಾಜ್ಯ ವಿಲೇವಾರಿ ಕರದಲ್ಲಿ ವಿನಾಯಿತಿಯನ್ನು ನೀಡಲು ಪಾಲಿಕೆ ಕ್ರಮ ವಹಿಸಿದೆ. ಜತೆಗೆ ಮನಪಾ ವ್ಯಾಪ್ತಿಯಲ್ಲಿ ಬರುವ ಶಾಲೆಗಳು, ಹೊಟೇಲ್‌ಗಳು, ಆಸ್ಪತ್ರೆಗಳು, ಮಾರುಕಟ್ಟೆ, ವಾರ್ಡ್‌ಗಳಿಗೆ ಸ್ವಚ್ಛತೆಯ ಗುಣಮಟ್ಟತೆಗೆ ಶ್ರೇಯಾಂಕ ನೀಡಲು ಕ್ರಮ ವಹಿಸಲಾಗುತ್ತಿದೆ. ಮನಪಾ ಹಾಗೂ ಸರಕಾರೇತರ ಸಂಸ್ಥೆಗಳ ಮುಖಾಂತರ ಸಮೀಕ್ಷೆ ನಡೆಸಿ, ಉತ್ತಮ ಸ್ವಚ್ಛತೆ ಕಾಪಾಡುವ ಮತ್ತು ವೈಜ್ಞಾನಿಕ ತ್ಯಾಜ್ಯ ಸಂಗ್ರಹಣೆ ಮಾಡುವ ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ಮಂಗಳೂರು ಪಾಲಿಕೆ ನಿರ್ಧರಿಸಿದೆ.
ಸಾರ್ವಜನಿಕ ಶೌಚಾಲಯಕ್ಕೆ ಆದ್ಯತೆ ನೀಡಿ
ಸ್ವಚ್ಛ ಸರ್ವೆಕ್ಷಣಾ ರ‍್ಯಾಂಕ್ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣ, ಸರಕಾರಿ ಕಚೇರಿಗಳು, ಎಲ್ಲ ಮಾಲ್‌ಗಳು, ಎಲ್ಲ ಪೆಟ್ರೋಲ್ ಬಂಕ್‌ಗಳು, ಮಾರುಕಟ್ಟೆಗಳು, ವಾಣಿಜ್ಯ ಸಂಕಿರಣಗಳು ಹಾಗೂ ಇತರೇ ಪ್ರದೇಶಗಳಲ್ಲಿ ಇರುವ ಶೌಚಾಲಯಗಳನ್ನು ಸಾರ್ವಜನಿಕರು ಉಪಯೋಗಿಸುವಂತೆ
ಪಾಲಿಕೆ ವಿಶೇಷ ಸೂಚನೆಯನ್ನು ನೀಡಿದೆ. ಲಭ್ಯವಿರುವ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯಗಳನ್ನು ಉಪಯೋಗಿಸುವಂತೆ ಪಾಲಿಕೆ ಕೋರಿದೆ.
ಪ್ರತ್ಯೇಕ ಕಸ ವಿಂಗಡನೆ
ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ನೀಡದೆ ಮನೆಯ ಡಸ್ಟ್ ಬಿನ್‌ಗಳ ಮುಖಾಂತರ ನೇರವಾಗಿ ಪಾಲಿಕೆಯ ವತಿಯಿಂದ ಬರುವ ವಾಹನಗಳಿಗೆ ನೀಡಬಹುದು. ಹಸಿಕಸ-ಅಡುಗೆ ಮನೆ ತ್ಯಾಜ್ಯ, ತರಕಾರಿ, ಹಣ್ಣು, ಆಹಾರ, ಸಿದ್ಧಾಹಾರ, ಕೋಳಿ, ಮೀನು, ಕೊಳೆತ ತರಕಾರಿ- ಹಣ್ಣು, ಟಿಶ್ಶಿ ಪೇಪರ್, ಬಾಳೆ ಎಲೆ ಇತ್ಯಾದಿ. ಇವುಗಳನ್ನು ಯಾವುದೇ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸದೆ ನೇರವಾಗಿ ಬಕೆಟಿಗೆ ಹಾಕಬೇಕು. ಒಣಕಸ- ಪ್ಲಾಸ್ಟಿಕ್ ಕವರ್, ಹಾಲಿನ ಕವರ್, ಚಾಕಲೇಟ್ ಕವರ್, ಕಾಗದ ವಸ್ತುಗಳು, ಲೋಹ ಮತ್ತು ಗಾಜು, ಡಬ್ಬಿ, ರಬ್ಬರ್, ಕಟ್ಟಿಗೆ ತುಂಡು, ತೆಂಗಿನ ಕಾಯಿ ಗೆರಟೆ, ಹಳೆ ಬಟ್ಟೆ, ಗುಡಿಸಿದ ಧೂಳು, ಶೃಂಗಾರ ಸಾಮಗ್ರಿಗಳು, ಪಿಂಗಾಣಿ ವಸ್ತುಗಳು
ಇತ್ಯಾದಿಗಳಾಗಿವೆ. ಹಸಿಕಸವನ್ನು ಹಾಗೂ ಒಣಕಸವನ್ನು ಸಂಗ್ರಹಿಸಲು ದಿನನಿತ್ಯ ಬರುತ್ತಿರುವ ವಾಹನಗಳಿಗೆ ಪ್ರತ್ಯೇಕವಾಗಿ ನೀಡಬೇಕಿದೆ ಎಂದು ಮನಪಾ ಕೋರಿದೆ.
ಪ್ರಶ್ನೆಗೆ ಉತ್ತರಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ
ಸ್ವಚ್ಛ ಸರ್ವೇಕ್ಷಣಾ 2018 ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಾಮುಖ್ಯವನ್ನು ಹೊಂದಿದೆ. ಹೀಗಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸಾರ್ವಜನಿಕರಿಗೆ ಕೇಳಲಾಗುವ/ ಆನ್‌ಲೈನ್- ಆ್ಯಪ್(ಸ್ವಚ್ಛತಾ ಆ್ಯಪ್) ಮುಖಾಂತರ ನಡೆಸಲಾಗುವ ಸಮೀಕ್ಷೆಯಲ್ಲಿ ಬರುವ ಪ್ರಶ್ನೆಗಳು ಹೀಗಿವೆ.
.ನಿಮ್ಮ ನಗರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸುತ್ತಿರುವುದು ನಿಮಗೆ ಗೊತ್ತೆ?
.ನಿಮ್ಮ ಪ್ರದೇಶ ಕಳೆದ ವರ್ಷಕ್ಕಿಂತ ಸ್ವಚ್ಛವಾಗಿದೆಯೇ ?
.ಸಾರ್ವಜನಿಕ ಪ್ರದೇಶದಲ್ಲಿರುವ ಬಿನ್‌ಗಳನ್ನು ಈ ವರ್ಷ ಬಳಸಲು ಪ್ರಾರಂಭಿಸಿದ್ದೀರಾ?
.ಮನೆಮನೆಯಿಂದ ಬೇರ್ಪಡಿಸಿದ ತ್ಯಾಜ್ಯ ಸಂಗ್ರಹಣೆ ಈ ವರ್ಷ ಉತ್ತಮವಾಗಿದೆಯೇ?
.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂತ್ರಾಲಯ ಮತ್ತು ಶೌಚಾಲಯಗಳ ಬಳಕೆ ಹೆಚ್ಚಿದೆಯೇ ?
.ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳು, ಈಗ ಸ್ವತ್ಛ ಹಾಗೂ ಉಪಯೋಗ ಯೋಗ್ಯವೇ ?
ಈ ಎಲ್ಲ ಪ್ರಶ್ನೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ, ಉತ್ತಮ ಅಂಕ ಗಳಿಸಬಹುದು ಎನ್ನುವುದು ಪಾಲಿಕೆ ಅಭಿಪ್ರಾಯ.
ಅಂಕಗಳ ಹಂಚಿಕೆ ಹೀಗಿದೆ
. ಸ್ವಚ್ಛ ಸರ್ವೇಕ್ಷಣ- 2018ನ್ನು ಎಲ್ಲ ನಗರಗಳಿಗೆ 4 ಹಂತಗಳಲ್ಲಿ ಅಂಕಗಳನ್ನು ನಿಗದಿಪಡಿಸಲಾಗಿದೆ.
.ನಗರ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳು: +1,400 ಅಂಕ
.ಸಾರ್ವಜನಿಕ ಅಭಿಪ್ರಾಯ: + 1,400 ಅಂಕ
.ಕೇಂದ್ರ ತಂಡದಿಂದ ನೇರ ಸಮೀಕ್ಷೆ: + 1,200 ಅಂಕ
.ಸ್ವಂತ ದೃಢೀಕರಣ: – 440
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.