ಎಂಆರ್‌ಪಿಎಲ್‌ ಕಂಪೆನಿಗೆ ಪ್ರತ್ಯೇಕ ರೈಲ್ವೆ ಹಳಿ ಸಂಪರ್ಕ


Team Udayavani, Nov 12, 2017, 3:53 PM IST

12-nOV-6.jpg

ಸುರತ್ಕಲ್‌: ಕೊಂಕಣ ರೈಲ್ವೆಯು ಎಂಆರ್‌ಪಿಎಲ್‌ ಕಂಪೆನಿಗೆ ಪ್ರತ್ಯೇಕ ರೈಲ್ವೆ ಹಳಿ ಸಂಪರ್ಕವನ್ನು ಮಾಡುತ್ತಿದ್ದು, ಭರದ ಕಾಮಗಾರಿ ನಡೆಯುತ್ತಿದೆ. ಎಂಆರ್‌ಪಿಎಲ್‌ ಸಂಸ್ಥೆಯು ತನ್ನ ಘಟಕವನ್ನು ವಿಸ್ತರಿಸಿ ಉತ್ಪಾದನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿರುವುದರಿಂದ ಸರಕು ಸಾಗಾಟವನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಮಾಡಲು ಕೊಂಕಣ ರೈಲ್ವೆಗೆ 80.16 ಕೋಟಿ ರೂ.ಗಳನ್ನು ಪಾವತಿಸಿದ್ದು, 2018ರಲ್ಲಿ ಕಾಮಗಾರಿ ಮುಗಿಯಲಿದೆ.

ತೋಕೂರು ಬಳಿಯಿಂದ ಎಂಆರ್‌ಪಿಎಲ್‌ ವರೆಗೆ ಒಟ್ಟು 3.52 ಕಿ.ಮೀ ಉದ್ದದ ರೈಲ್ವೆ ಹಳಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ 2016ರ ಅಕ್ಟೋಬರ್‌ನಲ್ಲಿ ಎಂಆರ್‌ಪಿಎಲ್‌ ಹಾಗೂ ಕೊಂಕಣ ರೈಲ್ವೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಪೆಟ್‌ ಕೋಕ್‌, ಪಾಲಿಪ್ರಾಪಿಲಿನ್‌, ಸಲ ರ್‌, ಬಿಟುಮಿನ್‌ ಸಾಗಾಟಕ್ಕೆ ಈ ಹೊಸ ರೈಲ್ವೆ ಸಂಪರ್ಕ ಸಹಕಾರಿಯಾಗಲಿದೆ. ಮಾಲಿನ್ಯಕಾರಕ ವಸ್ತುಗಳನ್ನು ಇನ್ನು ಗೂಡ್ಸ್‌ ರೈಲುಗಳ ಮೂಲಕ ಸಾಗಿಸುವುದರಿಂದ  ಬೃಹತ್‌ ಗಾತ್ರದ ಲಾರಿಗಳ ಓಡಾಟ ಕಡಿಮೆಯಾಗಲಿದೆ. ಎಂಆರ್‌ಪಿಎಲ್‌ ಹಳಿ ಸಂಪರ್ಕ ಭಾಗದಲ್ಲಿ ನೀರಿನ ಒರತೆಯನ್ನು ತಾಳಿಕೊಳ್ಳಬಲ್ಲ ಅಗಲವಾದ, ಅತ್ಯಾಧುನಿಕ ಮಾದರಿಯ ರಸ್ತೆ ನಿರ್ಮಾಣವಾಗಲಿದೆ. ನಾಲ್ಕು ಗ್ಯಾಸ್‌ ಪೈಪ್‌ಲೈನ್‌ ಸಾಗಾಟ ಸೇರಿದಂತೆ ಬಹೂಪಯೋಗಿ 10 ಕಿರು ಸೇತುವೆಗಳು ನಿರ್ಮಾಣವಾಗಲಿವೆ. ನೀರು ನಿಲ್ಲುವ ಪ್ರದೇಶವಾಗಿರುವುದರಿಂದ ರೈಲ್ವೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರೈಲ್ವೆ ಹಳಿ ಹಾಕಲು ಕ್ರಮ ಕೈಗೊಂಡಿದೆ.

ಗೂಡ್ಸ್‌ ಜಂಕ್ಷನ್‌ ನಿರ್ಮಾಣ
ನಷ್ಟದಲ್ಲಿರುವ ಕೊಂಕಣ ರೈಲ್ವೆಗೆ ಚೇತರಿಕೆ ನೀಡುವ ಸಲುವಾಗಿ ಗೂಡ್ಸ್‌ ರೈಲುಗಳನ್ನು ಓಡಿಸುವತ್ತ ಪ್ರಮುಖ ಹೆಜ್ಜೆ ಇಡಲಾಗಿದೆ. ಇದಕ್ಕಾಗಿ ತೋಕೂರು ಬಳಿ ಗೂಡ್ಸ್‌ ಸೈಡಿಂಗ್‌ ಮಾಡಲು ಯೋಜನೆ ಕಾರ್ಯಗತಗೊಳ್ಳುತ್ತಿದೆ. ಬಂದರಿನಲ್ಲಿ ರೈಲ್ವೆ ಸರಕು ಇಳಿಸುವ ವ್ಯವಸ್ಥೆ ಇದ್ದು, ಇದೀಗ ಕೊಂಕಣ ರೈಲ್ವೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ 1.75 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ನಿರ್ವಹಣೆ ಗುತ್ತಿಗೆಯನ್ನು ಆಳ್ವಾರಿಸ್‌ ಮತ್ತು ರಫ್ತಾರ್‌ ಕಂಪನಿ ಪಡೆದುಕೊಂಡಿವೆ. ಐದು ಸಾವಿರ ಚದರ ಅಡಿ ರೈಲ್ವೆ ಜಾಗದಲ್ಲಿ ಸುಸಜ್ಜಿತ ಗೋದಾಮು, ಸಾಗಾಟ ವ್ಯವಸ್ಥೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಿಂದ ಪಣಂಬೂರು, ಸುರತ್ಕಲ್‌, ಪಡುಬಿದ್ರಿ ಪ್ರದೇಶಗಳಿಗೆ ಸರಕನ್ನು ಕ್ಲಪ್ತ ಸಮಯಕ್ಕೆ ಸಾಗಿಸಲು ಸಾಧ್ಯವಿದೆ. ಇಲ್ಲಿನ ಕಂಪನಿಗಳು ಸದ್ಬಳಕೆ ಮಾಡಿಕೊಂಡರೆ ಕೊಂಕಣ ರೈಲ್ವೆಗೆ ಆದಾಯವೂ ಬರಲಿದೆ. ಎಪಿಎಂಸಿ ಸಹಿತ ಬೃಹತ್‌ ಮತ್ತು ಕಿರು ರಖಂ ವ್ಯಾಪರಸ್ಥರಿದ್ದು, ರೈಲ್ವೆಯ ಮೂಲಕ ಸರಕನ್ನು ಕಡಿಮೆ
ವೆಚ್ಚದಲ್ಲಿ ಸಾಗಿಸಬಹುದಾಗಿದೆ.

ಸುರಕ್ಷಿತ ಸಾಗಾಟ
ಎಂಆರ್‌ಪಿಎಲ್‌ಗೆ ಪ್ರತ್ಯೇಕ ರೈಲ್ವೆ ಹಳಿ ನಿರ್ಮಾಣವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ. ಸರಕನ್ನು ನೇರವಾಗಿ ಕಂಪನಿಯ ಒಳಭಾಗದಲ್ಲೇ ನಿರ್ವಹಿಸಿ ಲೋಡ್‌ ಮಾಡುವ ಮೂಲಕ ಬೇರೆಡೆ ಒಯ್ಯಲಾಗುತ್ತದೆ. ಇದರಿಂದ ಸಮಯ ಉಳಿತಾಯದ ಜತೆಗೆ ಸುರಕ್ಷಿತ ಸಾಗಾಟಕ್ಕೂ ಅನುಕೂಲವಾಗಲಿದೆ. 
ವಿಜಯ್‌ ಕುಮಾರ್‌, ಸಹಾಯಕ ಎಂಜಿನಿಯರ್‌,
  ಕೊಂಕಣ ರೈಲ್ವೆ 

ಜಿಲ್ಲೆಯಲ್ಲೇ ಮೊದಲು
ನಷ್ಟದಲ್ಲಿರುವ ಕೊಂಕಣ ರೈಲ್ವೆ ನಿಗಮಕ್ಕೆ ಪ್ರಯಾಣಿಕ ಆದಾಯದ ಜತೆಗೆ ಗೂಡ್ಸ್‌ ಸಾಗಾಟದಿಂದಲೂ ಹೆಚ್ಚಿನ ಆದಾಯ ಬಂದರೆ ನಷ್ಟದ ಪ್ರಮಾಣ ಕಡಿಮೆ ಮಾಡಿ ಲಾಭದತ್ತ ಸಾಗಲು ಸಾಧ್ಯವಾಗಲಿದೆ. ತೋಕೂರಿನಲ್ಲಿ ನಿರ್ಮಿಸುತ್ತಿರುವ ಗೂಡ್ಸ್‌ ಸೈಡಿಂಗ್‌ ಜಿಲ್ಲೆಯಲ್ಲೇ ಮೊದಲನೆಯದ್ದು. ಉಡುಪಿ ವಿಭಾಗದಲ್ಲೂ ನಿರ್ಮಾಣವಾಗುತ್ತಿದೆ. ಸ್ಥಳೀಯ ವ್ಯಾಪರಸ್ಥರಿಗೆ ಇದರಿಂದ ಪ್ರಯೋಜನವಾಗಲಿದ್ದು ಸರಕುಗಳನ್ನು ಸಾಗಿಸಲು ಸುಲಭವಾಗಲಿದೆ. ಇದರ ನಿರ್ವಹಣೆಗೆ ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುವುದು.
ಸುಧಾ ಕೃಷ್ಣ ಮೂರ್ತಿ,
  ಸಾರ್ವಜನಿಕ ಸಂಪರ್ಕಾ ಧಿಕಾರಿ,
  ಕೊಂಕಣ ರೈಲ್ವೆ ಉಡುಪಿ

 ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ

1-klr

Koteshwara: ಹುತಾತ್ಮ ಯೋಧ ಅನೂಪ್‌ ಪೂಜಾರಿ ಮನೆಗೆ ಖಾದರ್‌, ಸೊರಕೆ ಭೇಟಿ

1-busss

ನಾಡಿದ್ದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

29

Kabaddi: ಇಂದು ಸೀನಿಯರ್‌ ಕಬಡ್ಡಿ ತಂಡದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.