ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕ ವಾರ್ ರೂಂ
ಕೋವಿಡ್ ಲಸಿಕೆ ಪಡೆಯದವರ ಮನವೊಲಿಕೆ
Team Udayavani, Nov 10, 2021, 5:07 AM IST
ಮಹಾನಗರ: ಪಾಲಿಕೆ ವ್ಯಾಪ್ತಿಯ ಎಲ್ಲರೂ ಕೋವಿಡ್ ರೋಗ ನಿರೋಧಕ ಲಸಿಕೆ ಪಡೆಯಲು ಪ್ರೇರೇಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯಲ್ಲಿ ಇದೀಗ ಪ್ರತ್ಯೇಕ ವಾರ್ ರೂಂ ತೆರೆಯಲಾಗಿದೆ.
ಪಾಲಿಕೆಯ ಸ್ಮಾರ್ಟ್‌ಸಿಟಿ ಕಮಾಂಡ್ ಕಂಟ್ರೋಲ್ ರೂಂ ಪಕ್ಕದಲ್ಲಿಯೇ ಕೋವಿಡ್ ವಾರ್ ರೂಂ ತೆರೆಯಲಾಗಿದೆ. ಮಂಗಳೂರಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಯಾರೆಲ್ಲ ಮೊದಲ ಡೋಸ್ ಲಸಿಕೆ ಪಡೆಯಲಿಲ್ಲ, ಎರಡನೇ ಡೋಸ್ ಲಸಿಕೆಗೆ ಬಾಕಿ ಇರುವವರ ಮಾಹಿತಿಯನ್ನು ತೆಗೆದುಕೊಂಡು ಅಂತಹವರಿಗೆ ವಾರ್ ರೂಂನಿಂದ ಕರೆ ಮಾಡಲಾಗುತ್ತದೆ. ಲಸಿಕೆ ಪಡೆದುಕೊಳ್ಳದಿರಲು ಸಮರ್ಪಕ ಕಾರಣ ಪಡೆದು, ಲಸಿಕೆ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿ ನೀಡಲಾಗುತ್ತದೆ. ಲಸಿಕೆ ಪಡೆಯಲು ಇಷ್ಟ ಇಲ್ಲ ಎಂಬವರಿಗೆ ಕೌನ್ಸಿಲಿಂಗ್ ಮಾಡಲಾಗುತ್ತದೆ.
ಈ ಕೆಲಸಕ್ಕೆಂದು ಎನ್ನೆಸ್ಸೆಸ್ ವಿದ್ಯಾರ್ಥಿ ಗಳನ್ನು ನಿಯೋಜನೆ ಮಾಡಲಾಗಿದೆ. ಪಾಲಿಕೆ ಯಲ್ಲಿ ಸ್ಥಾಪಿಸಲಾದ ವಾರ್ ರೂಂನಲ್ಲಿ ರಥಬೀದಿಯ ದಯಾನಂದ ಪೈ, ಸತೀಶ್ ಪೈ ಕಾಲೇಜಿನಲ್ಲಿ 30 ಮಂದಿ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು, ನಗರದ 20 ಕಾಲೇಜುಗಳಿಂದ ಮೂರು ದಿನಗಳಿಗೊಮ್ಮೆ 10 ಮಂದಿ ವಿದ್ಯಾರ್ಥಿಗಳು ಕೆಲಸ ನಿರ್ವಹಿಸಲಿದ್ದಾರೆ.
ಮನಪಾ ಕೋವಿಡ್ ಮೇಲ್ವಿಚಾರಕ ಡಾ| ಅಣ್ಯಯ್ಯ ಕುಲಾಲ್ ಅವರು “ಉದಯ ವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಲಸಿಕೆ ಪಡೆಯದವರ ಮಾಹಿತಿಯನ್ನು ಕಲೆ ಹಾಕಿ, ಯಾರೆಲ್ಲ ಲಸಿಕೆ ಪಡೆದುಕೊಳ್ಳಲಿಲ್ಲವೋ ಅದಕ್ಕೆ ಕಾರಣವೇನು ಎಂಬ ಬಗ್ಗೆ ಈ ತಂಡ ಪೂರಕ ಮಾಹಿತಿ ಪಡೆಯಲಿದೆ. ಅವರಿಗೆ ಲಸಿಕೆ ಪಡೆಯಲು ಮನವೊಲಿಸಿ ಮನೆಗೆ ಬಂದು ಲಸಿಕೆ ನೀಡಲು ಆರೋಗ್ಯ ಇಲಾಖೆ ತಂಡ ಸಿದ್ಧವಾಗಿದೆ. ಒಂದು ವೇಳೆ ಲಸಿಕೆ ಪಡೆದುಕೊಂಡಿದ್ದರೆ ಅವರ ಬಳಿ ಲಸಿಕೆ ಪಡೆದ ಐಡಿ ಸಂಖ್ಯೆಯನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ.ಮನೆ ಮನೆಗೂ ಭೇಟಿ ನೀಡಲಿದ್ದಾರೆ ಲಸಿಕ ಮಿತ್ರರುದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಲಸಿಕ ಅಭಿಯಾನಕ್ಕೆ ತುಸು ಹಿನ್ನಡೆ ಉಂಟಾಗಿದೆ.
ಇದನ್ನೂ ಓದಿ:ಜಿಲ್ಲಾಡಳಿತ ಭವನ ಶೀಘ್ರ ನಿರ್ಮಾಣಕ್ಕೆ ಸೂಚನೆ
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಜತೆ ಜಿಲ್ಲೆಯ ವಿವಿಧ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೂಡ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ.
ಜಿಲ್ಲೆಗೆ ಸಮರ್ಪಕವಾಗಿ ಲಸಿಕೆ ಸರಬ ರಾಜು ಆಗುತ್ತಿದ್ದರೂ ಇನ್ನೂ ಸುಮಾರು ಶೇ. 10ರಷ್ಟು ಮಂದಿ ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಅವರು ಲಸಿಕೆ ಪಡೆದುಕೊಳ್ಳಲು ಪ್ರೇರೇಪಿಸಲು, ಅವರ ಮನೆಗೆ ಲಸಿಕ ಮಿತ್ರರನ್ನು ಕಳುಹಿಸಿಕೊಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದಕ್ಕೆಂದು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಅಲ್ಲಿನ ಹತ್ತಿರದ ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ವಸತಿ ಸಮುಚ್ಚಯಗಳಿಗೆ ಪ್ರತ್ಯೇಕ ಫಾರ್ಮೆಟ್
ಜಿಲ್ಲೆಯ ಕಾಲೇಜು, ವಸತಿ ಸಮು ಚ್ಚಯ ಅಸೋಸಿಯೇಶನ್‌ಗೆ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ನಮೂನೆ ನೀಡಲಾಗುತ್ತದೆ. ಎಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ, ಎಷ್ಟು ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಭರ್ತಿ ಮಾಡಿ ನೀಡಬೇಕು. ಲಸಿಕೆ ಪಡೆಯಲು ಬಾಕಿ ಇದ್ದರೆ ಅಲ್ಲಿಗೆ ಆರೋಗ್ಯ ಇಲಾಖೆ ತಂಡ ಆಗಮಿಸಿ ಲಸಿಕೆ ನೀಡಲಿದೆ. ಇನ್ನು, ಈ ಕುರಿತಂತೆ ಜಿಲ್ಲೆಯ ಪ್ರಮುಖ ಸೆಲೆಬ್ರಿಟಿ ಗಳಿಂದಲೂ ಅಭಿಯಾನ ನಡೆಸಲು ಆರೋಗ್ಯ ಇಲಾಖೆ ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜಾಗೃತಿಯಿಂದ ಪ್ರಗತಿ ಸಾಧ್ಯ
ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು ಎಂಬ ಉದ್ದೇಶ ದಿಂದ ಜಾಗೃತಿ ಮೂಡಿಸಲು ಲಸಿಕ ಮಿತ್ರರು ಎಂಬ ಅಭಿಯಾನ ಆರಂಭಿಸಲಿದ್ದೇವೆ. ಜಾಗೃತಿಯಿಂದ ಮಾತ್ರವೇ ಲಸಿಕೆ ನೀಡಿಕೆಯಲ್ಲಿ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಲಸಿಕಾ ಮಿತ್ರರು ಸಾರ್ವಜನಿಕರಿಗೆ ಕರೆ ಮಾಡಿದಾಗ ಸಮರ್ಪಕ ಉತ್ತರ ನೀಡಿ ಸಹಕಾರ ನೀಡಬೇಕಿದೆ. ಒಂದು ವೇಳೆ ಲಸಿಕೆ ಪಡೆದುಕೊಂಡಿದ್ದರೆ ಅವರು ಐಡಿ ಹೇಳಬೇಕು.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.