ಸೆ.25: ಮಂಗಳೂರು ವಿಶ್ವವಿದ್ಯಾನಿಲಯ ಸಂಸ್ಥಾಪನ ದಿನ

Team Udayavani, Sep 24, 2024, 6:20 AM IST

ಸೆ.25: ಮಂಗಳೂರು ವಿಶ್ವವಿದ್ಯಾನಿಲಯ ಸಂಸ್ಥಾಪನ ದಿನ

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ 45ನೇ ಸಂಸ್ಥಾಪನ ದಿನಾಚರಣೆ ಸೆ. 25ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಮಂಗಳಾ ಸಭಾಂಗಣದಲ್ಲಿ ಜರಗಲಿದೆ ಎಂದು ಕುಲಪತಿ ಪ್ರೊ| ಪಿ.ಎಲ್‌. ಧರ್ಮ ಹೇಳಿದರು.

ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಹೆಗ್ಡೆ ಮುಖ್ಯ ಅತಿಥಿಯಾಗಿರುವರು ಎಂದರು.

ಅನುದಾನ ಕೊರತೆ
ವಿವಿಗೆ ಆಂತರಿಕ ಅನುದಾನದ ಕೊರತೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್‌ ಬಳಿಕ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ವಿವಿಗೆ ಆಂತರಿಕ ಮೂಲಗಳು ಕಡಿಮೆಯಾಗುತ್ತಿವೆ. ಕಾಲೇಜುಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಸಂಯೋಜಿತ ಕಾಲೇಜುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೇವಲ ಪರೀಕ್ಷಾ ಶುಲ್ಕಗಳಿಂದಷ್ಟೇ ಹೊಂದಿಸಿಕೊಳ್ಳು ತ್ತಿದ್ದೇವೆ. ವಿವಿ ಯನ್ನು ಸಂಕಷ್ಟದಿಂದ ಪಾರು ಮಾಡಲು ಕ್ರಮ ಕೈಗೊಳ್ಳು ತ್ತೇವೆ ಎಂದರು.

ಪಿಂಚಣಿ ಪಾವತಿಗೆ ಕ್ರಮ
ಮಂಗಳೂರು ವಿವಿ ನಿವೃತ್ತ ಅಧ್ಯಾಪಕರಿಗೆ ಕೋಟಿಗಟ್ಟಲೆ ಪಿಂಚಣಿ ಪಾವತಿ ಬಾಕಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 45 ನಿವೃತ್ತ ಪ್ರೊಫೆಸರ್‌ಗಳಿಗೆ 21ರಿಂದ 23 ಕೋಟಿ ರೂ.ವರೆಗೆ ಪಾವತಿ ಬಾಕಿ ಯಿದೆ. ಆ ಮೊತ್ತವನ್ನು ಸರಕಾರ ನೀಡಿದರೆ ಉಪಯೋಗವಾಗುತ್ತದೆ. ಆ ಪ್ರಾಧ್ಯಾಪಕರಿಂದ ನಮ್ಮ ವಿವಿಗೆ ದೊಡ್ಡ ಹೆಸರು ಬಂದಿದೆ. ಅವರ ಪಿಂಚಣಿ ಪಾವತಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

ಸ್ನಾತಕೋತ್ತರ ಶಿಕ್ಷಣ ಯಾರಿಗೂ ಬೇಡವಾಗಿರುವುದು ನೋವಿನ ಸಂಗತಿ. ಈಗಿನ ಅಗತ್ಯಕ್ಕೆ ಅನುಗುಣವಾಗಿ ಸಿಲೆಬಸ್‌ ಬದಲಾವಣೆ ಮಾಡಲು ಹೇಳಿದ್ದೇವೆ.

ಭೌತಿಕ ಅಂಕಪಟ್ಟಿ: ಲಿಖಿತ ಆದೇಶ ಬಂದಿಲ್ಲ
ವಿವಿ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್‌ ಅಂಕಪಟ್ಟಿಯಿಂದ ಸಮಸ್ಯೆ ಸದ್ಯ ಬಗೆಹರಿದಿದೆ. ಭೌತಿಕ ಅಂಕಪಟ್ಟಿ ನೀಡಬೇಕು ಎಂದು ಸರಕಾರ ತಿಳಿಸಿದ್ದು, ನಾವು ಲಿಖಿತ ಆದೇಶಕ್ಕೆ ಕಾಯುತ್ತಿದ್ದೇವೆ ಎಂದರು. ರಿಜಿಸ್ಟ್ರಾರ್‌ ಪ್ರೊ| ದೇವೇಂದ್ರಪ್ಪ, ಕಾರ್ಯಕ್ರಮ ಸಂಯೋಜಕ ಪ್ರೊ| ಎ.ಎಂ. ಖಾನ್‌, ಪ್ರಮುಖರಾದ ಸಂಗಪ್ಪ, ಪ್ರೊ| ಪುಟ್ಟಣ್ಣ ಉಪಸ್ಥಿತರಿದ್ದರು.

ವಿವಿಯಲ್ಲಿ ಆರ್ಥಿಕ ಸಂಕಷ್ಟ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರೊ| ಪಿ. ಎಲ್‌. ಧರ್ಮ ಅವರು, ಈ ಹಿಂದೆ ಮಾಡಲಾಗುತ್ತಿದ್ದ ಅನಾವಶ್ಯಕವಾಗಿ ಖರ್ಚುಗಳಿಗೆ ನಿಯಂತ್ರಣ ವಿಧಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ವಿವಿಗೆ ಸುಮಾರು 3 ಕೋ. ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಅತಿಯಾದ ಮೊಬೈಲ್‌ ಬಳಕೆಯಿಂದ ಸುಮಾರು 45 ಸಾ. ರೂ. ಹೆಚ್ಚುವರಿ ಖರ್ಚು ಆಗುತ್ತಿತ್ತು. ಅದನ್ನೀಗ ನಿಯಂತ್ರಿಸಲಾಗಿದೆ. ಪೇಪರ್‌ ಬಳಕೆ ಕಡಿಮೆ ಮಾಡಲಾಗಿದೆ. ನೀರು, ವಿದ್ಯುತ್‌ ಪೋಲಾಗದಂತೆ ವಿಶೇಷ ನಿಗಾ ವಹಿಸಿದ್ದೇವೆ ಎಂದರು.

ಟಾಪ್ ನ್ಯೂಸ್

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Garlic2

Smuggling Garlic: ಭಾರತಕ್ಕೆ ನಿಷೇಧಿತ ಚೀನಿ ಬೆಳ್ಳುಳ್ಳಿ ಪ್ರವೇಶ!

Munirathna

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

BJP-Meeting

By Election: ಚನ್ನಪಟ್ಟಣ ಬಿಜೆಪಿಗೆ ಕೇಳಲು ಕೋರ್‌ಕಮಿಟಿ ಸೂತ್ರ!

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Murder-Represent

Bengaluru: ಅಕ್ರಮ ಸಂಬಂಧವೇ ನೇಪಾಲಿ ಮಹಿಳೆಯ ಕೊಲೆಗೆ ಕಾರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಮಂಗಳೂರು-ಸುಬ್ರಹ್ಮಣ್ಯ “ಮೆಮು’ ರೈಲು ಪುನರಾರಂಭ?

Train: ಮಂಗಳೂರು-ಸುಬ್ರಹ್ಮಣ್ಯ “ಮೆಮು’ ರೈಲು ಪುನರಾರಂಭ?

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

“ಕಾರಿನಲ್ಲಿ ಬೆಂಕಿ ಬರುತ್ತಿದೆ’ ಎಂದು ನಂಬಿಸಿ ದೋಚುವ ತಂಡ

Mangalore-Bangalore Highway:”ಕಾರಿನಲ್ಲಿ ಬೆಂಕಿ ಬರುತ್ತಿದೆ’ ಎಂದು ನಂಬಿಸಿ ದೋಚುವ ತಂಡ

Smoor- Hongyo ಐಸ್‌ಕ್ರೀಂ ಸಹಭಾಗಿತ್ವ ಘೋಷಣೆ

Smoor- Hongyo ಐಸ್‌ಕ್ರೀಂ ಸಹಭಾಗಿತ್ವ ಘೋಷಣೆ

Commonwealth ಕಾರ್ಯಕಾರಿ ಸಭೆಯಲ್ಲಿ ಸ್ಪೀಕರ್‌ ಖಾದರ್‌ ಭಾಗಿ

Commonwealth ಕಾರ್ಯಕಾರಿ ಸಭೆಯಲ್ಲಿ ಸ್ಪೀಕರ್‌ ಖಾದರ್‌ ಭಾಗಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Garlic2

Smuggling Garlic: ಭಾರತಕ್ಕೆ ನಿಷೇಧಿತ ಚೀನಿ ಬೆಳ್ಳುಳ್ಳಿ ಪ್ರವೇಶ!

Munirathna

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

BJP-Meeting

By Election: ಚನ್ನಪಟ್ಟಣ ಬಿಜೆಪಿಗೆ ಕೇಳಲು ಕೋರ್‌ಕಮಿಟಿ ಸೂತ್ರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.