“ವಿವಾದಕ್ಕೆ ಕೊಲೆ ಪರಿಹಾರವಲ್ಲ’
ಯುವಕರ ಸರಣಿ ಹತ್ಯೆನಿಲ್ಲಿಸುವಂತೆ ಮನವಿ
Team Udayavani, Oct 29, 2020, 1:35 AM IST
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಯುವಕರ ಸರಣಿ ಹತ್ಯೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕು ಎಂದು ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಾಂದ ಸ್ವಾಮೀಜಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ವೈಯಕ್ತಿಕ ದ್ವೇಷ, ಹಣಕಾಸು ವಿಚಾರ ಹಾಗೂ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ನಿರಂತರವಾಗಿ ಕೊಲೆ, ಕೊಲೆಯತ್ನ, ಜೀವ ಬೆದರಿಕೆ ಮೊದಲಾದ ಅಹಿತಕರ ಘಟನೆಗಳು ನಡೆಯುತ್ತಿವೆ. ಇದು ತುಂಬಾ ನೋವಿನ ಸಂಗತಿ. ಮಾತುಕತೆ, ಸಂಧಾನದ ಮೂಲಕ ಇಂಥಹ ವಿವಾದ ಸರಿಪಡಿಸಲು ಸಾಧ್ಯ. ಕೊಲೆ ಪರಿಹಾರವಲ್ಲ. ಕರಾವಳಿಯ ಎಷ್ಟೋ ಹಿಂದೂ ಯುವಕರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಹೀಗಿರುವಾಗ ನಾನಾ ಕಾರಣಗಳಿಗೆ ದ್ವೇಷ ಸಾಧನೆಯೊಂದಿಗೆ ಪರಸ್ಪರ ಹೊಡೆದಾಡುವ ಬದಲು ನಮ್ಮ ಸಮಾಜವನ್ನು ಕಾಪಾಡುವ ಕರ್ತವ್ಯ ಎಲ್ಲರ ಮೇಲಿದೆ. ಮುಂದೆ ಇಂತಹ ಅಪರಾಧ ಕೃತ್ಯಗಳು ನಡೆಯದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಜಾಗೃತಿ ಕಾರ್ಯ
ಸರಣಿ ಕೊಲೆಗಳ ಬಗ್ಗೆ ವಿಶ್ವಹಿಂದೂ ಪರಿಷತ್ ಈಗಾಗಲೇ ಅವಲೋಕನ ಸಭೆ ನಡೆಸಿದೆ. ಎಲ್ಲ ಊರಿನ ಯುವಕರಲ್ಲಿಯೂ ಜಾಗೃತಿ ಮಾಡಿಸಲಾಗುವುದು. ಈ ಹಿಂದೆ ಡ್ರಗ್ಸ್ ವಿರುದ್ಧ ಹೋರಾಟ ಮಾಡಲಾಗಿತ್ತು. ಅಲ್ಲದೆ ಡ್ರಗ್ಸ್ ಸೇವಿಸಿ ತೊಂದರೆಗೊಳಗಾದವರಿಗೆ ಆಶ್ರಯ ಒದಗಿಸಿ ಅವರನ್ನು ಸರಿಪಡಿಸಿದ್ದು, ಅವರು ಉತ್ತಮ ಜೀವನ ನಡೆಸುತ್ತಿದ್ದಾರೆ. ಯುವಕರು ತಮ್ಮ ಶಕ್ತಿಯನ್ನು ಸಮಾಜದ ಏಳಿಗೆಗೆ ವಿನಿಯೋಗಿಸಬೇಕು ಎಂದರು.
ಸಂಘಟನೆಯಲ್ಲಿ ಅವಕಾಶವಿಲ್ಲ
ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ವಿಹಿಂಪ, ಬಜರಂಗದಳ ಶಿಸ್ತಿನ ಸಂಘಟನೆಗಳು. ಅವುಗಳಿಗೆ ಚೌಕಟ್ಟು ಇದೆ. ಸಂಘಟನೆಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವಿಲ್ಲ ಎಂದರು.
ಯುವತಿ ಕೊಲೆಗೆ ಖಂಡನೆ
ಫರಿದಾಬಾದ್‌ನಲ್ಲಿ ಯುವಕನೋರ್ವ ಯುವತಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ತೀವ್ರ ಖಂಡನೀಯ. ಕೇಂದ್ರ ಸರಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದರು. ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.