ಸೇವೆ, ಪ್ರೀತಿಯೇ ಧರ್ಮದ ನೈಜ ತಳಹದಿ
Team Udayavani, Oct 1, 2017, 8:00 AM IST
ಕಡಬ: ಪ್ರಭು ಯೇಸುಕ್ರಿಸ್ತರು ಸಾರಿದ ಸಂದೇಶವನ್ನು ಅನುಸರಿಸುವ ಮೂಲಕ ಸೇವೆ ಮತ್ತು ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪರೋಪಕಾರದ ಮೂಲಕ ಬದುಕನ್ನು ಕಟ್ಟಿಕೊಳ್ಳುವುದೇ ಧರ್ಮದ ನೈಜ ತಳಹದಿ ಎಂದು ಮಲಂಕರ ಸಿರಿಯನ್ ಕೆಥೋಲಿಕ್ ಧರ್ಮ ಸಭೆಯ ಪಿತಾಮಹ ಪರಮಪೂಜ್ಯ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾತೋಲೀಕೋಸ್ ಅಭಿಪ್ರಾಯಪಟ್ಟರು.
ಅವರು ಶನಿವಾರ ನೂಜಿಬಾಳ್ತಿಲದ ಸೈಂಟ್ ಮೇರಿಸ್ ಕೆಥೆಡ್ರಲ್ ಚರ್ಚ್‌ನಲ್ಲಿ ಜರಗಿದ ಮಲಂಕರ ಸಿರಿಯನ್ ಕೆಥೋಲಿಕ್ ಧರ್ಮ ಸಭೆಯ ಪುತ್ತೂರು ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿರುವ ರೈ|ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರ ಪೀಠಾರೋಹಣ ಹಾಗೂ ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೊಂದು ಚಾರಿತ್ರಿಕ ಕ್ಷಣವಾಗಿದ್ದು, ನೂತನ ಧರ್ಮಾಧ್ಯಕ್ಷರ ಆಡಳಿತಾವಧಿಯಲ್ಲಿ ಧರ್ಮಪ್ರಾಂತವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ|ರೆ|ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಅವರು ಮಾತನಾಡಿ, ಸ್ಥಳೀಯರೇ ಆಗಿರುವ ನೂತನ ಧರ್ಮಾಧ್ಯಕ್ಷರು ಧರ್ಮಸಭೆಯ ತತ್ತಾ$Ìದರ್ಶಗಳನ್ನು ಪ್ರಚುರಪಡಿಸುವುದರೊಂದಿಗೆ ದೇವರ ಆಶಯಗಳನ್ನು ಈಡೇರಿಸುವಲ್ಲಿ ಅವರಿಗೆ ಎಲ್ಲರ ಸಹಕಾರ ದೊರೆಯಲಿ ಎಂದು ಹಾರೈಸಿದರು.
ಮಾದರಿ ಕಾರ್ಯ
ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ ಮಾತನಾಡಿ, ದೇಶದಲ್ಲಿ ಕೇವಲ ಶೇ. 3ರಷ್ಟಿರುವ ಕ್ರೈಸ್ತ ಸಮುದಾಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶದ ನೆಲ, ಜಲ ಹಾಗೂ ಕಾನೂನನ್ನು ಗೌರವಿಸುವುದರೊಂದಿಗೆ ದೇಶದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿರುವ ಕ್ರೈಸ್ತ ಸಮುದಾಯ ಧಾರ್ಮಿಕವಾಗಿಯೂ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ ಎಂದರು.
ತಿರುವಲ್ಲ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಥಾಮಸ್ ಮಾರ್ ಕೂರಿಲೋಸ್, ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕುಝಿ, ಪುತ್ತೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್, ಬೆಥನಿ ಸನ್ಯಾಸ ಸಮೂಹದ ಸುಪೀರಿಯರ್ ಜನರಲ್ ಫಾ| ಜೋಸ್ ಕುರುವಿಳ, ದೀನ ಸೇವಾ ಸನ್ಯಾಸ ಸಮೂಹದ ಸುಪೀಯರ್ ಜನರಲ್ ಸಿ| ವಂದನಾ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಕೆಆರ್‌ಸಿಬಿ ಮಹಿಳಾ ಆಯೋಗದ ಪ್ರಾಂತೀಯ ಕಾರ್ಯದರ್ಶಿ ಡಾ| ಲೌಲಿ ಎಲೊªàಸ್ ಮಾತನಾಡಿದರು.
ಓಥೋìಡಕ್ಸ್ ಧರ್ಮ ಸಭೆಯ ಹಿರಿಯ ಧರ್ಮಗುರು ವಂ|ಮಾಣಿ ಚೆಮ್ಮನಂ ಎಪಿಸ್ಕೋಪಾ, ತಾ.ಪಂ. ಸದಸ್ಯ ಗಣೇಶ್ ಕೈಕುರೆ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಉಪಸ್ಥಿತರಿದ್ದರು. ನಿವೃತ್ತ ಧರ್ಮಾಧ್ಯಕ್ಷರಿಗೆ ಶಿವಮೊಗ್ಗ ವೈದಿಕ ಜಿಲ್ಲಾ ಪ್ರೋಟೋ ವಿಕಾರ್ ಡಾ| ಎಲೊªà ಪುತ್ತನ್ ಕಂಡತ್ತಿಲ್ ಗೌರವಾರ್ಪಣೆ ನಡೆಸಿದರು.
ದ.ಕ. ಜಿಲ್ಲಾ ಪ್ರೋಟೋ ವಿಕಾರ್ ವಂ| ಪೀಟರ್ ಜಾನ್ ಸ್ವಾಗತಿಸಿ, ಸಮಾರಂಭದ ಪ್ರಧಾನ ಸಂಯೋಜಕ ವಂ| ಫಿಲಿಪ್ ನೆಲ್ಲಿವಿಳ ವಂದಿಸಿದರು. ಪಿ.ಕೆ. ಚೆರಿಯನ್ ಹಾಗೂ ಸುಜಾ ಶಾಜಿ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಜರಗಿದ ದಿವ್ಯ ಬಲಿಪೂಜೆ ಹಾಗೂ ಸುವಾರ್ತ ಪ್ರವಚನವನ್ನು ಬೆಂಗಳೂರು ಮಹಾ ಧರ್ಮಪ್ರಾಂತದ ಮಹಾ ಧರ್ಮಾಧ್ಯಕ್ಷ ರೈ| ರೆ| ಡಾ| ಬರ್ನಾರ್ಡ್ ಮೋರಸ್ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.