ಡೋರ್-ಟು-ಡೋರ್ ತ್ಯಾಜ್ಯ ಸಂಗ್ರಹಕ್ಕೂ ಹಿನ್ನಡೆ
Team Udayavani, May 26, 2018, 5:30 AM IST
ನಗರ : ತ್ಯಾಜ್ಯ ಸಂಗ್ರಹದ ಹೊಸ ಪದ್ಧತಿಯೂ ಹಳ್ಳ ಹಿಡಿಯುವ ಲಕ್ಷಣ ಗೋಚರವಾಗುತ್ತಿದೆ. 2018ರ ಮೇ 24ರಂದು ಜಾರಿಗೆ ಬಂದ ಈ ಹೊಸ ಪದ್ಧತಿಗೆ ಇದೀಗ ಪೌರಕಾರ್ಮಿಕರ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ವಿಲೇವಾರಿ ಪುತ್ತೂರು ನಗರಸಭೆಗೆ ದೊಡ್ಡ ತಲೆನೋವು. ಹಾಗೆಂದು ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಹಿಂದೆ ಸ್ವಸಹಾಯ ಸಂಘಗಳ ಮೂಲಕ ಡೋರ್ – ಟು – ಡೋರ್ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿತ್ತು. ಇದು ಪುತ್ತೂರು ಪೇಟೆಯ ಎರಡು ರಸ್ತೆಗಷ್ಟೇ ಸೀಮಿತವಾಗಿತ್ತು. ಇದನ್ನು ತೆಗೆದುಹಾಕಿ, ಇದೀಗ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. 7 ಲಾರಿಗಳನ್ನು ಟೆಂಡರ್ ಗೆ ತೆಗೆದುಕೊಂಡು, ನಗರಸಭೆಯ ಪೌರಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯ ಸಂಗ್ರಹ ಮಾಡುವುದು ಇದರ ಉದ್ದೇಶ.
700 ಮನೆಗಳಿಂದ ಸಂಗ್ರಹ
ಪುತ್ತೂರು ನಗರಸಭೆಯಲ್ಲಿ ಸದ್ಯ 14 ಪೌರಕಾರ್ಮಿಕರಿದ್ದಾರೆ. ಎರಡು 407 ವಾಹನಕ್ಕೆ ತಲಾ ಇಬ್ಬರಂತೆ ಹಾಗೂ ಐದು ಪಿಕಪ್ ವಾಹನಗಳಿಗೆ 10 ಮಂದಿಯನ್ನು ಹಂಚಿ ಹಾಕಲಾಗಿದೆ. ಚಾಲಕ ಹೊರತು ಪಡಿಸಿ ಒಂದು ವಾಹನದಲ್ಲಿ 2 ಕಾರ್ಮಿಕರು ತೆರಳಬೇಕು. ಸರಕಾರದ ಆದೇಶ ಪ್ರಕಾರ ದಿನಕ್ಕೆ 1,800 ಮನೆ ಅಥವಾ ಅಂಗಡಿ ಬಾಗಿಲುಗಳಿಂದ ತ್ಯಾಜ್ಯ ಸಂಗ್ರಹ ಮಾಡಬೇಕು. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಮಾತು. ದಿನಕ್ಕೆ ಹೆಚ್ಚೆಂದರೆ 700ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹವಷ್ಟೇ ಸಾಧ್ಯ ಎನ್ನುತ್ತಾರೆ ಪೌರಕಾರ್ಮಿಕರು.
ಪೌರಕಾರ್ಮಿಕರು ಹೇಳುವಂತೆ ಪುತ್ತೂರು ನಗರಸಭೆಯ 27 ವಾರ್ಡ್‌ಗಳ 14,948 ಮನೆ, 5,136 ವಾಣಿಜ್ಯ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಬೇಕಾದರೆ ಕನಿಷ್ಠ 12 ವಾಹನ ಬೇಕು. ಇದಕ್ಕೆ ತಲಾ ಮೂವರಂತೆ ಒಟ್ಟು 36 ಪೌರಕಾರ್ಮಿಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರ ಹೊಸ ನೇಮಕಾತಿ ಮಾಡದಂತೆ ಸರಕಾರ ಆದೇಶ ಹೊರಡಿಸಿದೆ. ಇರುವ ಪೌರಕಾರ್ಮಿಕರನ್ನೇ ಬಳಸಿಕೊಳ್ಳುವಂತೆ ಸೂಚಿಸಿದೆ. ಇದು ಪುತ್ತೂರು ನಗರಸಭೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ತೆರಿಗೆಯಲ್ಲೇ ಹಣ ಸಂಗ್ರಹ
ತ್ಯಾಜ್ಯ ಸಂಗ್ರಹದ ಹಣವನ್ನು ಈ ಮೊದಲು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿತ್ತು. ಕೆಲವು ಮನೆ, ಅಂಗಡಿಗಳ ಮಂದಿ ಶುಲ್ಕ ನೀಡಲು ಹಿಂದೇಟು ಹಾಕುತ್ತಿದ್ದರು. ಇದು ವ್ಯವಸ್ಥೆಗೆ ಪೆಟ್ಟು ನೀಡಿತು. ಆದ್ದರಿಂದ ಇದೀಗ ತೆರಿಗೆಯ ಜತೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. 500 ಚದರ ಅಡಿಯ ಮನೆಗೆ ವಾರ್ಷಿಕ 180 ರೂ., 1,000 ಚ.ಅ. ಮನೆಗೆ 360 ರೂ., 1,000-1,500 ಚ.ಅ. ಮನೆಗೆ 540 ರೂ., 2,000 ವರೆಗಿನ ಚ.ಅ. ಮನೆಗೆ 720 ರೂ., 2,000 ಚ.ಅ.ಗಿಂತ ಹೆಚ್ಚಿನ ಮನೆಗಳಿಗೆ 900 ರೂ. ಸಂಗ್ರಹ ಮಾಡಲಾಗುತ್ತಿದೆ. ವಾಣಿಜ್ಯ ಅಂಗಡಿಗಳಿಗೆ ಬೇರೆಯೇ ಮಾನದಂಡದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ತಿಂಗಳಿಗೆ ಟ್ರೇಡ್ ಲೈಸನ್ಸ್‌ನ ಶೇ. 10ರಷ್ಟು ಮೊತ್ತು. ಅಂದರೆ 1 ಸಾವಿರ ರೂ. ಟ್ರೇಡ್ ಲೈಸನ್ಸ್‌ಗೆ ಪಾವತಿ ಮಾಡುತ್ತಿದ್ದರೆ, ತಿಂಗಳಿಗೆ 100 ರೂ. ವಾರ್ಷಿಕ 1,200 ರೂ. ಪಾವತಿ ಮಾಡಬೇಕು.
ಕೈಮೀರಿದೆ
ಒಂದು ತಿಂಗಳಿನಿಂದ ತ್ಯಾಜ್ಯ ಸಂಗ್ರಹದ ಸಮಸ್ಯೆ ಕೈಮೀರಿ ಹೋಗಿದೆ. ನಗರಸಭೆ ಮೂಲಗಳ ಪ್ರಕಾರ 25 ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಆದರೆ ಪೇಟೆಯ ಪರಿಸ್ಥಿತಿ ನೋಡಿದರೆ, 10 ದಿನಗಳಿಂದ ತ್ಯಾಜ್ಯ ಸಂಗ್ರಹ ಆದಂತೆ ಕಾಣುತ್ತಿಲ್ಲ. ಶುಕ್ರವಾರ ಪುತ್ತೂರು ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಪಿಕಪ್ ವಾಹನದ ಮೇಲೆ ವಿಪರೀತ ತ್ಯಾಜ್ಯ ಹೇರಲಾಗಿತ್ತು. ಇಷ್ಟಿದ್ದರೂ, ಕೆಲ ಅಂಗಡಿಗಳ ಮಂದಿ ಹೊರಗೆ ಬಂದು, ತ್ಯಾಜ್ಯ ಕೊಂಡೊಯ್ಯುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು.
ಕಸ ನೀಡದವರಿಗೆ ನೋಟಿಸ್
ತ್ಯಾಜ್ಯ ಸಂಗ್ರಹ ದೊಡ್ಡ ಸಮಸ್ಯೆ ಆಗುತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ತ್ಯಾಜ್ಯ ಸಂಗ್ರಹ ಮಾಡುವವರ ಜತೆಗೆ ಹೋಗಿದ್ದೆ. ಕೂರ್ನಡ್ಕದ ಒಂದು ಮನೆಯವರು ತ್ಯಾಜ್ಯ ನೀಡುತ್ತಿರಲಿಲ್ಲ. ವಿಚಾರಿಸಿದಾಗ ಹಸಿ ಕಸವನ್ನು ಗಿಡದ ಬುಡಕ್ಕೆ ಹಾಕುತ್ತಿದ್ದರಂತೆ. ಪ್ಲಾಸ್ಟಿಕ್ ಮೊದಲಾದ ಒಣ ಕಸವನ್ನು ಉರಿಸುತ್ತಾರಂತೆ. ಇದರ ದುಷ್ಪರಿಣಾಮದ ಬಗ್ಗೆ ತಿಳಿಸಿದರೂ ತ್ಯಾಜ್ಯ ನೀಡಲು ಒಪ್ಪಿಕೊಂಡಿಲ್ಲ. ಇವರಿಗೆ ನಗರಸಭೆಯಿಂದ ನೋಟಿಸ್ ನೀಡಲಾಗುವುದು. ಎಲ್ಲ ಮನೆ, ಅಂಗಡಿಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹವಾದರೆ, ತ್ಯಾಜ್ಯ ವಿಲೇವಾರಿ ನಗರಸಭೆಗೆ ಹೊರೆ ಆಗದು. ಇದರ ಜತೆಗೆ ಪೌರಕಾರ್ಮಿಕರು ಅಗತ್ಯದಷ್ಟು ಬೇಕು.
– ಶ್ವೇತಾ ಕಿರಣ್, ಆರೋಗ್ಯ ನಿರೀಕ್ಷಕಿ, ಪುತ್ತೂರು ನಗರಸಭೆ
ಹಿಂದಿನ ತಂಡ ಬಳಕೆ
ಹಿಂದಿನ ಸ್ವಸಹಾಯ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸೀತಾ, ಸರಸ್ವತಿ, ಅಣ್ಣಪ್ಪ ಅವರನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಕೆ ಮಾಡಲು ನಗರಸಭೆ ಮುಂದಾಗಿದೆ. ಹೆಚ್ಚು ಕಡಿಮೆ ತ್ಯಾಜ್ಯ ಸಂಗ್ರಹದ ಮಾಹಿತಿ ಇರುವುದರಿಂದ, ಹೊಸ ತಂಡಕ್ಕೂ ಸುಲಭವಾಗಲಿದೆ ಎನ್ನುವುದು ಚಿಂತನೆ. ಈ ಮೂವರಿಗೆ ಒಂದೊಂದು ರಸ್ತೆಗಳನ್ನು ನೀಡಲಾಗಿದೆ.
— ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.