“ವಿದ್ಯಾಗಿರಿ’ಯಲ್ಲಿ “ಸಂಗೀತ ಗಾನ ವಿನೋದ’!
Team Udayavani, Dec 23, 2022, 6:17 AM IST
ಮೂಡುಬಿದಿರೆ : ಒಂದು ವೇದಿಕೆ ಯಲ್ಲಿ ಹಿಂದೂಸ್ತಾನಿ ಗಾಯನ, ಇನ್ನೊಂದರಲ್ಲಿ ನಾಟ್ಯ ವೈವಿಧ್ಯ; ಮತ್ತೂಂದರಲ್ಲಿ ಭಾವ ಗಾನ ಮಂಜರಿ, ಮಗದೊಂದು ಕಡೆ ರಸಸಂಜೆ! ವಿದ್ಯಾಗಿರಿ ಅಕ್ಷರಶಃ ಸಾಂಸ್ಕೃತಿಕ ಲೋಕವನ್ನೇ ಧರೆಗಿಳಿಸಿದಂತಿದೆ; ಎಲ್ಲವೂ ಭಿನ್ನ, ವಿಶೇಷ ಹಾಗೂ ಕುತೂಹಲಕಾರಿ. ಜಾಂಬೂರಿಯ 2ನೇ ದಿನ ಗುರುವಾರ ಬೆಳಗ್ಗೆ 9ರಿಂದ ರಾತ್ರಿಯವರೆಗೆ ಪಂಚ ವೇದಿಕೆಗಳಲ್ಲಿ ಸಾಂಸ್ಕೃತಿಕ ದಿಗªರ್ಶನದ ಹೊಸ ಅನುಭೂತಿ ಪಡಿಮೂಡಿತು.
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಶಂಕರ್ ಮಹಾದೇವನ್ ತಂಡದ ಸಂಗೀತ ರಸಸಂಜೆ ಹಾಗೂ ರಾತ್ರಿ ಆಳ್ವಾಸ್ ಸಾಂಸ್ಕೃತಿಕ ವೈಭವವು ಹೊಸ ಲೋಕವನ್ನು ತೆರೆಯಿತು.
ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ವಿನುಶ್ ಬಳಗದ ಲಘು ಸಂಗೀತ, ಕರ್ನಾಟಕ ಸಂಗೀತದ ಯುವಕಲಾವಿದರಿಂದ ಮಂಜು ನಾದ, ನೌಷಾದ್, ನಿಶಾದ್ ಸಹೋದರರಿಂದ ಹಿಂದೂಸ್ತಾನಿ ಗಾಯನ, ಸಂಜೆ ಶೇಷಗಿರಿದಾಸ್ ಬಳಗದಿಂದ ದಾಸರ ಪದಗಳು, ಸಫìರಾಜ್‌ಖಾನ್ ಅವರಿಂದ ಸಾರಂಗಿ, ವಿದುಷಿ ಪ್ರಮೀಳಾ ಲೋಕೇಶ್‌ರಿಂದ ನೃತ್ಯ ವೈವಿಧ್ಯ ಗಮನಸೆಳೆಯಿತು.
ನುಡಿಸಿರಿ ವೇದಿಕೆಯಲ್ಲಿ ವಿಘ್ನೇಶ್ವರ್ ಬಳಗದಿಂದ ಮ್ಯಾಂಡೋಲಿನ್, ಮಹಾಂತೇಶ್ ಹಡಪದ, ಸುನಿಲ್ ಅವರಿಂದ ಹಾಸ್ಯಲಹರಿ, ಕೃಷ್ಣಪವನ್ ಕುಮಾರ್ ಬಳಗದಿಂದ ಕೊಳಲು, ಡಾ| ಮೊಹಸಿನ್ ಖಾನ್ ಬಳಗದಿಂದ ಸಿತಾರ್ ಕೊಳಲು ಜುಗಲ್‌ಬಂದಿ, ವಿಜಯ್ ಕುಮಾರ್ ಪಾಟೀಲ್ ಬಳಗದಿಂದ ದಾಸವಾಣಿ, ಸಂಜೆ ತಾಳ-ಲಯ ವೈವಿಧ್ಯ, ರಾತ್ರಿ ಸಾಯಿ ಡ್ಯಾನ್ಸ್ ಇಂಟರ್‌ನ್ಯಾಶನಲ್ ಅವರಿಂದ ನಾಟ್ಯ ವೈವಿಧ್ಯ ಮನ ಸೆಳೆಯಿತು. ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಂಜೆ ನಾಡಿನ ಪ್ರಸಿದ್ಧ ಹಿನ್ನೆಲೆ ಗಾಯಕರಿಂದ ಭಾವಗಾನ ಮಂಜರಿ ಮೋಡಿ ಮಾಡಿತು.
ಕೃಷಿಸಿರಿ ವೇದಿಕೆಯಲ್ಲಿ ಶರಣಪ್ಪ ವಡಿಗೇರಿ ಬಳಗ ಮತ್ತು ಗೀತಾ ಬಳಗದಿಂದ ಜಾನಪದ ಗೀತೆ, ರಾಕೇಶ್ ರೈ ಅಡ್ಕ ಸಂಯೋಜನೆಯಲ್ಲಿ ಪುಂಡು ವೇಷ ವೈಭವ, ಬಸವರಾಜ ಶಿಗ್ಗಾಂವಿ ಬಳಗದಿಂದ ದೊಡ್ಡಾಟದ ಹಾಡು, ಉಮೇಶ್ ಮಿಜಾರು, ದೀಪಕ್ ರೈ ಹಾಸ್ಯ, ಜಗದೀಶ್ ಪುತ್ತೂರು ಬಳಗದ ರಸಸಂಜೆ, ಬಯಲು ರಂಗ ಮಂದಿರದಲ್ಲಿ ಶಂಕರ್ ಶಾನುಭೋಗ್ ಬಳಗದ
ಕನ್ನಡ ಡಿಂಡಿಮ ಆಕರ್ಷಿಸಿತು.
ಎಲ್ಲವೂ ಆಕರ್ಷಕ ಲೋಕ!
12 ಎಕರೆ ವಿಸ್ತಾರದ ಪಾರಂಪರಿಕ ತರ ಕಾರಿ ತೋಟವಿದೆ. 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟವಿದು. ವಿಶಾಲ ಪುಷ್ಪಾಲಂಕಾರವೂ ಗಮನ ಸೆಳೆಯುತ್ತಿದೆ. ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ವಿದೆ. ಅಸಂಖ್ಯ ಪುಸ್ತಕ ಪ್ರದರ್ಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.