ಉದ್ಘಾಟನೆಗೆ ಮುನ್ನವೇ ಶಾಂತಿಮೊಗರು ಸೇತುವೆ ಸಂಚಾರಕ್ಕೆ ಮುಕ್ತ


Team Udayavani, Jul 14, 2017, 2:45 AM IST

1307svnr1aph.jpg

ಸವಣೂರು : ಕುದ್ಮಾರು ಗ್ರಾಮದ ಬರೆಪ್ಪಾಡಿ ಹಾಗೂ ಆಲಂಕಾರು ಗ್ರಾಮದ ಶರವೂರು ಮಧ್ಯೆ ಶಾಂತಿಮೊಗರು ಕುಮಾರಧಾರಾ ನದಿಗೆ ಅಡ್ಡಲಾಗಿ 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಸಾರ್ವಜನಿಕರ ಆಗ್ರಹದ ಮೇರೆಗೆ ಉದ್ಘಾಟನೆಗೂ ಮುನ್ನ ಸಂಚಾರಕ್ಕೆ ಮುಕ್ತಗೊಂಡಿದೆ.

ಸುಮಾರು 14 ಕೋಟಿ ರೂ. ವೆಚ್ಚದಲ್ಲಿ 9 ಪಿಲ್ಲರ್‌ಗಳಿರುವ ಈ ಸೇತುವೆ ಸುಮಾರು 220 ಮೀ. ಉದ್ದ, 12 ಮೀ. ಅಗಲ, 18 ಮೀ. ಎತ್ತರವಿದೆ. 1 ಮೀ. ಅಗಲದ ಫ‌ುಟ್‌ಪಾತ್‌ನ್ನು ಹೊಂದಿದೆ. ಕುದ್ಮಾರು ಗ್ರಾಮದ ಬರೆಪ್ಪಾಡಿ ಹಾಗೂ ಆಲಂಕಾರು ಗ್ರಾಮದ ಶರವೂರನ್ನು ಸಂಪರ್ಕಿಸುವ ಈ ಸೇತುವೆಗಾಗಿ ಗ್ರಾಮಸ್ಥರು ಎರಡೂವರೆ ದಶಕಗಳಿಂದ ಇಲಾಖಾಧಿ ಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಬಂದಿದ್ದರು. ಅನಂತರ ಸೇತುವೆ ನಿರ್ಮಾಣಕ್ಕೆ ಅನು ದಾನ ಮಂಜೂರಾದರೂ ಸೇತುವೆಯ ಪರಿಣತಿ ಆವಶ್ಯಕತೆಗಳ ನಿಯಾಮವಳಿಗಳಲ್ಲಿ ಬದಲಾವಣೆ ಯಾಗದ ಹಿನ್ನೆಲೆಯಲ್ಲಿ ಏಳು ಬಾರಿ ಟೆಂಡರ್‌ ಕರೆದರೂ ಆದು ಖಾಯಂ ಆಗಿರಲಿಲ್ಲ. ಅನಂತರ ನಿಯಾಮವಳಿಗಳಿಗೆ ಬದಲಾವಣೆ ಮಾಡಿದ ಬಳಿಕ ರಘುರಾಮ ಭಟ್‌ ಉಪ್ಪಂಗಳ ಅವರು ಟೆಂಡರ್‌ ಪಡೆದು ಕಾಮಗಾರಿ ಆರಂಭಿಸಿದ್ದರು.

ಸೇತುವೆ ನಿರ್ಮಾಣದ ಹಿಂದಿನ 
ರೂವಾರಿ ರಮೇಶ್‌ ಭಟ್‌

ಈ ಸೇತುವೆ ನಿರ್ಮಾಣಕ್ಕೆ ಅನುದಾನ ದೊರಕುವಲ್ಲಿ ಶಾಸಕರು,ಸಚಿವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಬೆನ್ನು ಬಿದ್ದವರು ರಮೇಶ್‌ ಭಟ್‌ ಉಪ್ಪಂಗಳ. ಹದಿನಾರು ವರ್ಷಗಳಿಂದ ಸೇತುವೆ ನಿರ್ಮಾಣದ ಕನಸು ಹೊತ್ತು ಸುಳ್ಯ ಶಾಸಕ ಎಸ್‌.ಅಂಗಾರರ ಮುಂದಾಳತ್ವದಲ್ಲಿ ನಿರಂತರವಾಗಿ ಅಧಿಕಾರಿಗಳು ಮತ್ತು ಸರಕಾರದ ಸಂಪರ್ಕ ಸಾಧಿಸಿ ಅನುದಾನ ಬಿಡುಗಡೆಗೊಳ್ಳುವಂತೆ ಮಾಡಲು ಪ್ರಯತ್ನಪಟ್ಟವರು. ಅಂದಿನ ಲೋಕೋಪ ಯೋಗಿ ಸಚಿವರಾದ ಸಿ.ಎಂ.ಉದಾಸಿ ಅವರನ್ನು ಶಾಂತಿ ಮೊಗರಿಗೆ ಕರೆಸಿ ಸ್ಥಳ ಪರಿಶೀಲನೆ ನಡೆಸಿ ಸೇತುವೆಯ ಭರವಸೆಯನ್ನೂ ಪಡೆಯಲೂ ಶ್ರಮಿಸಿದ್ದರು. ಅವರ ಪರಿಶ್ರಮಕ್ಕೆ ಕೊನೆಗೂ ಪ್ರತಿಫ‌ಲ ದೊರಕಿದೆ.

ಸಂಚಾರಕ್ಕೆ ಅವಕಾಶ
ಈ ಕುರಿತು ಸುಳ್ಯ ಶಾಸಕ ಎಸ್‌.ಅಂಗಾರ ಅವರನ್ನು ಸಂಪರ್ಕಿಸಿದಾಗ, ಸರಕಾರದ ಕಡೆಯಿಂದ ಉದ್ಘಾಟನೆಗೆ ದಿನ ಇನ್ನೂ ನಿಗದಿಯಾಗಿಲ್ಲ. ನಿರಂತರವಾಗಿ ಮಳೆ ಬರುತ್ತಿರುವುದರಿಂದ ಜನರ ಅನುಕೂಲಕ್ಕಾಗಿ ಸೇತುವೆಯನ್ನು ಸಂಚಾರ ಮುಕ್ತ ಗೊಳಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸ ಲಾಗಿತ್ತು.ಆದರೆ ಉದ್ಘಾಟನೆಯಾಗದೇ ಸಂಚಾರಕ್ಕೆ ಅವಕಾಶ ಬೇಡ ಎಂಬ ಒತ್ತಡವೂ ಇಲಾಖೆಯ ಮೇಲಿತ್ತು. ಆಡಳಿತಾತ್ಮಕ ಕಾರಣದಿಂದ ಸೇತುವೆ ಉದ್ಘಾಟನೆಯಾಗದಿರುವುದನ್ನು ಮನಗಂಡು ಊರವರು ಪ್ರತಿಭಟನೆಗೆ ಸಿದ್ದರಾಗಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ರವಾನಿಸಿದ್ದು, ಇದರಿಂದಾಗಿ ಜು. 12ರಂದು ರಾತ್ರಿಯಿಂದ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

2011ರ ಡಿಸೆಂಬರ್‌ ನಲ್ಲಿ ಸವಣೂರು ವಿದ್ಯುತ್‌ ಸಬ್‌ಸ್ಟೇಷನ್‌ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಯಾಗಿರಲಿಲ್ಲ. ಆದರೆ ವಿದ್ಯುತ್‌ ಪೂರೈಕೆ ಆರಂಭಿಸಲಾಗಿತ್ತು. ಬಳಿಕ ಸಬ್‌ಸ್ಟೇಷನ್‌ ಅಧಿಕೃತ ವಾಗಿ ಉದ್ಘಾಟನೆಗೊಂಡಿದ್ದು, 2012 ಸೆಪ್ಟಂಬರ್‌ನಲ್ಲಿ. ಅದೇ ರೀತಿಯ ವಿದ್ಯಮಾನ ಸೇತುವೆ ಉದ್ಘಾಟನೆಯ ವಿಷಯದಲ್ಲೂ ಆಗಿದೆ.

ಹತ್ತಿರ ಇನ್ನೂ ಹತ್ತಿರ
ಮೈಸೂರು, ಮಡಿಕೇರಿ, ಸುಳ್ಯ, ಬೆಳ್ಳಾರೆ, ಸವಣೂರು, ಕಾಣಿಯೂರು ಭಾಗದ ಜನರಿಗೆ ಪುಣ್ಯಕ್ಷೇತ್ರ ಧರ್ಮಸ್ಥಳ, ಉಜಿರೆ ಕನ್ಯಾಡಿ ಶ್ರೀ ರಾಮಮಂದಿರ, ಉಪ್ಪಿನಂಗಡಿ, ಕೊಟ್ಟಿಗೆಹಾರ, ಮೂಡಿಗೆರೆ ಸಂಪರ್ಕಿಸಲು ಬಹಳ ಹತ್ತಿರವಾಗಲಿದೆ. ಕುದ್ಮಾರು, ಕಾಣಿಯೂರು, ಸವಣೂರು ಭಾಗದ ಜನರು ನಾಡಕಚೇರಿ ಕಡಬವನ್ನು ಸಂಪರ್ಕಿಸಲು ಹಾಗೂ ಕಡಬ, ಆಲಂಕಾರು, ಶರವೂರು ಭಾಗದ ಜನರು ಸವಣೂರು, ಪುತ್ತೂರು ಸಂಪರ್ಕಿಸಲು ಅನುಕೂಲವಾಗಲಿದೆ. ಸೇತುವೆಯಿಂದ ಆಲಂಕಾರು, ಶರವೂರು ಭಾಗದ ವಿದ್ಯಾರ್ಥಿಗಳು, ಕೃಷಿಕರು ಸುತ್ತು ಬಳಸಿ ತಾಲೂಕು ಕೇಂದ್ರ ಪುತ್ತೂರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ತಪ್ಪಲಿದೆ. ಕುದ್ಮಾರು, ಆಲಂಕಾರು ಭಾಗದ ಸರ್ವತೋಮುಖ ಬೆಳವಣಿಗೆಗೆ ಸೇತುವೆ ಪೂರಕವಾಗಲಿದೆ. 

ಪರಿಹಾರ ಶೀಘ್ರ
ಸೇತುವೆ ನಿರ್ಮಾಣಕ್ಕಾಗಿ ಕೃಷಿಕರಾದ ಬಾಲಚಂದ್ರ ನೂಜಿ, ಮೋಹಿನಿ ಪಿ. ಶೇಣವ, ದಿನೇಶ್‌ ಶರವೂರು, ವಿಜಯ ರಾಮಣ್ಣ ಗೌಡ ಅವರು ತಮ್ಮ ಕೃಷಿಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಕೆಲವು ತಾಂತ್ರಿಕ ತೊಂದರೆಯಿಂದ ಪರಿಹಾರ ವಿಳಂಬವಾಗಿದ್ದು, ಸರಿಪಡಿಸುವುದಾಗಿ ಅವರು ತಿಳಿಸಿದ್ದಾರೆ.

ಉದ್ಘಾಟನೆಗೆ ಇನ್ನೂ  
ದಿನಾಂಕ ನಿಗದಿಯಾಗಿಲ್ಲ

ಸೇತುವೆಯ ಕಾಮಗಾರಿ 2018 ಮಾರ್ಚ್‌ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ, 2017 ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಲೋಕೋಪಯೋಗಿ ಸಚಿವರಿಂದಲೇ ಸೇತುವೆ ಉದ್ಘಾಟನೆ ಮಾಡಬೇಕೆಂಬ ಇರಾದೆಯೂ ಇರುವುದರಿಂದ ಅವರ ಸಮಯ ಇನ್ನೂ ದೊರೆಯಬೇಕಿದೆ. 

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.