ಶಿರಾಡಿ ಹೆದ್ದಾರಿ: ತಾತ್ಕಾಲಿಕ ದುರಸ್ತಿ; ಸವಾರರ ಸಂಕಷ್ಟ
Team Udayavani, Aug 6, 2017, 7:55 AM IST
ನೆಲ್ಯಾಡಿ: ಶಿರಾಡಿ ಹೆದ್ದಾರಿಯ ಬೃಹತ್ ಹೊಂಡಗಳಿಗೆ ಜಲ್ಲಿ ಹಾಕಿ ಮುಚ್ಚು ವುದರ ಮೂಲಕ ಕಳೆದ ಕೆಲವು ತಿಂಗಳಿಂದ ವಾಹನ ಸವಾರರು ಅನುಭವಿಸುತ್ತಿದ್ದ ಸಂಕಷ್ಟವು ತಾತ್ಕಾಲಿಕವಾಗಿ ಪರಿಹಾರವಾಗಿದೆ.
ವಾರದ ಹಿಂದೆ ಉದಯವಾಣಿ ಸುದಿನದಲ್ಲಿ ಶಿರಾಡಿ ಹೆದ್ದಾರಿಯ ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿತ್ತು. ಇದೀಗ ಹೆದ್ದಾರಿ ಯಲ್ಲಿನ ಹೊಂಡಗಳಿಗೆ ಜಲ್ಲಿಯನ್ನು ಹಾಕಿ ಮುಚ್ಚುವ ಹಾಗೂ ಕೆಲವು ಕಡೆ ಪ್ಯಾಚ್ ವರ್ಕ್ ನಡೆಸುವುದರ ಮೂಲಕ ಸಮಸ್ಯೆ ಬಗೆಹರಿದಿದೆ.
ಕಳೆದೊಂದು ವಾರದಿಂದ ಈ ಭಾಗ ದಲ್ಲಿ ನಿರಂತರ ಮಳೆಯಾಗತ್ತಿರುವುದರಿಂದ ಡಾಮರ್ ಬಳಸಿ ದುರಸ್ತಿ ನಡೆಸಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಜಲ್ಲಿಯನ್ನು ಹೊಂಡಗಳಿಗೆ ತುಂಬಿಸು ವುದರ ಮೂಲಕ ಹೊಂಡಗಳಿಗೆ ಮುಕ್ತಿ ನೀಡಲಾಗಿದೆ.
ಹೆದ್ದಾರಿಯ ದುಃಸ್ಥಿತಿಯ ಬಗ್ಗೆ ಮಲೆನಾಡು ಹಿತರಕ್ಷಣಾ ವೇದಿಕೆಯು ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರೂ ದುರಸ್ತಿಯಾಗಿರಲಿಲ್ಲ. ಪ್ರತಿಭಟನೆ ನಡೆ ಸಲು ಸಿದ್ದವಾದ ಹಿನ್ನೆಲೆ ಯಲ್ಲಿ ಇದೀಗ ದುರಸ್ತಿ ಕಾರ್ಯ ನಡೆದು ವಾಹನ ಸವಾರರು ತಾತ್ಕಾಲಿಕವಾಗಿ ಯಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.