ಗುಂಡ್ಯದಲ್ಲಿ ಮತ್ತೆ ಲಾರಿಗಳ ಪರದಾಟ
Team Udayavani, Nov 13, 2018, 10:20 AM IST
ನೆಲ್ಯಾಡಿ: ಶಿರಾಡಿ ಘಾಟಿಯಲ್ಲಿ ನ. 12ರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಜಿಲ್ಲಾಧಿಕಾರಿಗಳ ಹೇಳಿಕೆಗಳನ್ನು ನಂಬಿ ಬಂದ ಲಾರಿ, ಟ್ಯಾಂಕರ್ ಇತ್ಯಾದಿ ಘನ ವಾಹನಗಳು ಗುಂಡ್ಯದಲ್ಲಿ ಸೋಮವಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದವು.
ಸೋಮವಾರ ಬೆಳಗ್ಗಿನಿಂದಲೇ ಹಾಸನ, ಸಕಲೇಶಪುರ ಕಡೆಯಿಂದ ಘನ ವಾಹನಗಳು ಘಾಟಿ ಇಳಿದು ಬಂದವು. ಅವುಗಳನ್ನು ಗುಂಡ್ಯದಲ್ಲಿ ತಡೆಯಲಾಯಿತು. ಅದೇ ರೀತಿ ಮಂಗಳೂರು ಕಡೆಯಿಂದ ಬಂದ ಲಾರಿಗಳನ್ನು ಮುಂದುವರಿಯಲು ಉಪ್ಪಿನಂಗಡಿ ಪೊಲೀಸರು ಬಿಡಲಿಲ್ಲ. ಸಂಜೆವರೆಗೂ ದ.ಕ. ಜಿಲ್ಲಾಧಿಕಾರಿ ಕಚೇರಿಯಿಂದ ಸ್ಪಷ್ಟ ಆದೇಶ ಬಾರದ ಕಾರಣ ಸ್ಥಳದಲ್ಲಿ ಗೊಂದಲ ಏರ್ಪಟ್ಟಿತು. ಟನ್‌ಗಟ್ಟಲೆ ಭಾರ ಹೇರಿಕೊಂಡು
ಘಾಟಿ ಇಳಿದು ಬಂದ ಕೆಲವು ಲಾರಿಗಳು ಅಪರಾಹ್ನ 3 ಗಂಟೆಯ ತನಕ ಕಾದು ಮರಳಿ ಘಾಟಿ ಮೂಲಕವೇ ಸಕಲೇಶಪುರದ ಕಡೆಗೆ ಸಾಗಿದ ಘಟನೆಯೂ ನಡೆಯಿತು.
ಜಿಲ್ಲಾಡಳಿತ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇರುವುದರಿಂದ ಲಾರಿ ಚಾಲಕರು ದಿನಂಪ್ರತಿ ಸುತ್ತುಬಳಸಿ ಸಾಗುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಗುಂಡ್ಯದ ಗೇಟ್‌ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಲಾರಿಗಳನ್ನು ಮುಂದುವರಿಯಲು ಬಿಡಲಾರದೆ; ಚಾಲಕರ ಪ್ರಶ್ನೆಗಳಿಗೂ ಉತ್ತರಿಸಲಾಗದೆ ಹೈರಾಣಾಗಿದ್ದಾರೆ.
ಹಾಸನ ಜಿಲ್ಲಾಡಳಿತ ಶಿರಾಡಿ ಘಾಟಿ ರಸ್ತೆಯನ್ನು ಘನ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವೂ ಆದೇಶ ಹೊರಡಿಸಿಲ್ಲ. ಘನ ವಾಹನ ಸಂಚಾರಕ್ಕೆ ಉಭಯ ಜಿಲ್ಲಾಡಳಿತಗಳು ಕೆಲವೇ ದಿನಗಳಲ್ಲಿ ಏಕಕಾಲಕ್ಕೆ ಆದೇಶ ಹೊರಡಿಸಲಿವೆ. ಹಾಗಿದ್ದೂ ಕೆಲವು ಲಾರಿಗಳು ಘಾಟಿ ಇಳಿದಿರುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಕುಮಾರ್, ಅಪರ ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.