ಶಿರಾಡಿ: ಮಣ್ಣು ತೆರವು ಸ್ಥಗಿತ; ಆ. 23ರ ವರೆಗೆ ರೈಲು ರದ್ದು
Team Udayavani, Aug 11, 2019, 5:32 AM IST
ಮಂಗಳೂರು: ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ಭೂಕುಸಿತ ಮುಂದುವರಿದಿದ್ದು, ಪ್ರತಿಕೂಲ ಹವಾಮಾನದಿಂದ ಹಳಿಗಳ ಮೇಲೆ ಬಿದ್ದಿರುವ ಮಣ್ಣು – ಕಲ್ಲುಗಳ ತೆರವು ಸ್ಥಗಿತಗೊಳಿಸಲಾಗಿದೆ.
ಸ್ಥಳದಿಂದ ಎಲ್ಲ ರೈಲ್ವೇ ಸಿಬಂದಿ ಮತ್ತು ಕಾರ್ಮಿಕರನ್ನು ತೆರವುಗೊಳಿಸಲಾಗಿದ್ದು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಎಲ್ಲ ರೈಲುಗಳ ಸಂಚಾರವನ್ನು ಆ. 23ರ ವರೆಗೆ ರದ್ದುಗೊಳಿಸಲಾಗಿದೆ.
ಹವಾಮಾನ ಇಲಾಖೆಯಿಂದ ಮುಂದಿನ ಸೂಚನೆ ಬಂದ ಬಳಿಕ ಕಾರ್ಯಾಚರಣೆ ಮರಳಿ ಪ್ರಾರಂಭಿಸಲಾಗುವುದು ಎಂದು ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಪ್ರಕಟನೆ ತಿಳಿಸಿದೆ.
ರೈಲು ಸಂಚಾರ ರದ್ದು ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರಾತ್ರಿ ರೈಲುಗಳ ಸಂಚಾರವನ್ನು ಆ. 22ರ ವರೆಗೆ ಮತ್ತು ಹಗಲು ರೈಲು ಗಳ ಸಂಚಾರವನ್ನು ಆ. 23ರ ವರೆಗೆ ರದ್ದುಗೊಳಿಸಲಾಗಿದೆ.
ಮಂಗಳೂರು- ಚೆನ್ನೈ
ಮಂಗಳೂರು- ಚೆನ್ನೈ ಮತ್ತು ತಿರುವನಂತ ಪುರ-ಮಂಗಳೂರು ನಡುವೆ ಕೆಲವು ರೈಲು ಸಂಚಾರವನ್ನು ಆ. 10ರಂದು ರದ್ದುಗೊಳಿಸಲಾ ಗಿತ್ತು ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.
ಕೊಂಕಣ ರೈಲು ಮಾರ್ಗ
ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಆ. 12ರ ರೈಲು ನಂ.22660 ಡೆಹ್ರಾಡೂನ್- ಕೊಚ್ಚುವೇಲಿ ಎಕ್ಸ್‌ಪ್ರೆಸ್, ಆ. 13 ಮತ್ತು ಆ. 16ರ ರೈಲು ನಂ. 22149 ಪುಣೆ-ಎರ್ನಾಕುಳಂ ಪೂರ್ಣ ಎಕ್ಸ್‌ಪ್ರೆಸ್, ಆ.14ರ ರೈಲು ನಂ. 22150 ಪುಣೆ-ಎರ್ನಾಕುಲಂ ಎಕ್ಸ್‌ಪ್ರೆಸ್, ಆ.14ರ ರೈಲು ನಂ. 12218 ಚಂಡೀಗಢ-ಕೊಚ್ಚುವೇಲಿ ರೈಲು, ಆ. 12ರ ಕುರ್ಲಾ-ತಿರುವನಂತಪುರ ನಂ. 16345 ನೇತ್ರಾವತಿ ಎಕ್ಸ್‌ಪ್ರೆಸ್, ಆ. 12ರ ರೈಲು ನಂ. 12618 ನಿಜಾಮುದ್ದೀನ್- ಎರ್ನಾಕುಳಂ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.
ವಿಮಾನ ಸಂಚಾರ ವಿಳಂಬ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವು ವಿಮಾನಗಳು ವಿಳಂಬ ವಾಗಿ ಸಂಚರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.