ಶಿರ್ತಾಡಿ ಹೌದಾಲ್: ಮೊಬೈಲ್ ಟವರ್ ವಿರುದ್ಧ ಪ್ರತಿಭಟನೆ
Team Udayavani, Mar 31, 2017, 3:02 PM IST
ಮೂಡಬಿದಿರೆ: ಶಿರ್ತಾಡಿ ಗ್ರಾ.ಪಂ. ವ್ಯಾಪ್ತಿಯ ಹೌದಾಲ್‌ನ ಅಂಗನವಾಡಿ ಬಳಿಯೇ ಖಾಸಗಿ ಜಾಗದಲ್ಲಿ ಪರಿಸರದಲ್ಲಿ ಮೊಬೈಲ್ ಟವರ್ ಸ್ಥಾಪಿಸುವುದರ ವಿರುದ್ಧ ಶಿರ್ತಾಡಿ ಗ್ರಾ. ಪಂ. ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾ. ಪಂ. ಅಧ್ಯಕ್ಷೆ ಹಾಗೂ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಟವರ್ ಅನ್ನು ಜನವಸತಿ ಇಲ್ಲದೆಡೆಗೆ ಸ್ಥಳಾಂತರಿಸಲು ಎಂದು ಆಗ್ರಹಿಸಿದರು.
ಪರೀಕ್ಷಾ ಹಾಲ್ ಬಳಿ ಮೈಕ್ ಗದ್ದಲ: ಗೊಂದಲ
ಪ್ರತಿಭಟನಕಾರರು ಪಂಚಾಯತ್ ಆವರಣದೊಳಕ್ಕೆ ಪ್ರವೇಶಿಸದಂತೆ ಗೇಟು ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮೈಕ್‌ನಲ್ಲಿ ಘೋಷಣೆಗಳನ್ನು ಕೂಗುವುದಕ್ಕೆ ಆರಂಭಿಸಿದ ಕೂಡಲೇ ಸ್ಥಳಕ್ಕೆ ಬಂದ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ, ಹತ್ತಿರದಲ್ಲಿರುವ ಖಾಸಗಿ ಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಮೈಕ್ ಬಂದ್ ಮಾಡಲು ಸೂಚಿಸುವಂತೆ ಪೊಲೀಸರಿಗೆ ತಿಳಿಸಿದರು.
ಇದರಿಂದ ಉದ್ರಿಕ್ತಗೊಂಡ ಪ್ರತಿಭಟನಕಾರರು “ನಿಮಗೆ ಅನಧಿಕೃತವಾಗಿ, ಲಂಚದ ಆಮಿಷದಿಂದ ಅಂಗನವಾಡಿಯ ಬಳಿಯೇ ಮೊಬೈಲ್ ಟವರ್‌ಗೆ ಅನುಮತಿ ನೀಡಲಿಕ್ಕಾಗುತ್ತದೆ. ಆಗ ಇಲ್ಲದ ಮಕ್ಕಳ ಮೇಲಿನ ಮಮಕಾರ ಈಗೆಲ್ಲಿಂದ ಬಂತು?’ ಎಂದು ಪ್ರಶ್ನಿಸಿದರು. ಇದಕ್ಕೆ ನಿರ್ದಿಷ್ಟ ಉತ್ತರ ನೀಡದ ಅಧ್ಯಕ್ಷೆ ತನ್ನ ಕಚೇರಿಗೆ ಮರಳಿದರು.
ಜಿಲ್ಲಾ ರೈತ ಪ್ರಾಂತದ ಕಾರ್ಯದರ್ಶಿ ಯಾದವ ಶೆಟ್ಟಿ, ಹೋರಾಟಗಾರ್ತಿ ರಮಣಿ, “ಒಂದು ವಾರದೊಳಗೆ ಟವರ್ ಅನುಮತಿಯನ್ನು ರದ್ದುಗೊಳಿಸದಿದ್ದಲ್ಲಿ ಪಂಚಾಯತ್ ಆವರಣದೊಳಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರುತ್ತೇವೆ’ ಎಂದು ಹೇಳಿದರು.
ಪ್ರತಿಭಟನೆಗೂ ಪಂಚಾಯತ್ ಅನುಮತಿ ಅಗತ್ಯ!
ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡುವರು ಪಂಚಾಯತ್‌ನಲ್ಲಿ ಅನುಮತಿ ಪಡೆಯಬೇಕು ಎಂದು ಶಿರ್ತಾಡಿ ಗ್ರಾ.ಪಂ.ನಲ್ಲಿ ತೀರ್ಮಾನಿಸಿ ಜಾರಿಗೆ ತರಲಾಗಿದೆ. ಎಲ್ಲೂ ಇಲ್ಲದ ಈ ರೀತಿಯ ನಿಯಮದಿಂದಾಗಿ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತವಾಯಿತು. ಈ ನಿರ್ಣಯದ ವಿರುದ್ಧ ಪಂಚಾಯತ್ ಆವರಣದೊಳಗೆ ಕಾರ್ಮಿಕ ಹೋರಾಟಗಾರ ಸುದತ್ತ ಜೈನ್ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಮನವಿ ಸ್ವೀಕರಿಸುವುದಕ್ಕಾಗಿ ಅಧ್ಯಕ್ಷೆಯನ್ನು ಸ್ಥಳಕ್ಕೆ ಕರೆಯುವಂತೆ ಪ್ರತಿಭಟನಕಾರರು ಎಎಸ್‌ಐ ಮೂಲಕವಾಗಿ ಕೇಳಿಕೊಂಡಾಗ ಅದಕ್ಕೊಪ್ಪದ ಅಧ್ಯಕ್ಷೆ ಲತಾ ಹೆಗ್ಡೆ, ಈಗ ಮೀಟಿಂಗ್ ಇದ್ದು, ಅದು ಮುಗಿದ ಮೇಲೆ ಬರುವುದಾಗಿ ತಿಳಿಸಿದರು. ಸಭೆ ಮುಗಿದ ಬಳಿಕ ಉಪಾಧ್ಯಕ್ಷ ರಾಜೇಶ್ ಸುವರ್ಣ ಅವರನ್ನು ಪ್ರತಿಭಟನಕಾರರ ಬಳಿಗೆ ಕಳುಹಿಸಿದ ಅಧ್ಯಕ್ಷೆ, ತಾನು ಮನವಿ ಸ್ವೀಕರಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.