ಶಿವಳ್ಳಿ ಸಂಪದ ನೆಲ್ಯಾಡಿ ವಲಯ: ಪ್ರತಿಭಾ ಪುರಸ್ಕಾರ
Team Udayavani, Jul 3, 2018, 2:25 AM IST
ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಪ್ರತಿಭಾ ಪುರಸ್ಕಾರ ಮತ್ತು ಸಾಮಾನ್ಯ ಸಭೆ ಕೊಕ್ಕಡ ರಾಧಾಕೃಷ್ಣ ಯಡಪಡಿತ್ತಾಯರ ಮನೆಯಲ್ಲಿ ನೆರವೇರಿತು. ವಲಯದ ಅಧ್ಯಕ್ಷ ಎನ್.ವಿ. ವ್ಯಾಸರು ಸಭಾಧ್ಯಕ್ಷತೆ ವಹಿಸಿ ಬ್ರಾಹ್ಮಣರು ಸರಕಾರದಿಂದ ಸಿಗುವ ಕೃಷಿ ಸೌಲಭ್ಯಗಳ ಮಾಹಿತಿ ಪಡೆದುಕೊಂಡು ತಮ್ಮ ಕೃಷಿ ಭೂಮಿ ಉಳಿಸಿಕೊಂಡು ಅಭಿವೃದ್ಧಿಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ಹರೀಶ್ ಪುತ್ತೂರಾಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬ್ರಾಹ್ಮಣ ಯುವಕ ಯುವತಿಯರ ಸುಂದರ ಭವಿಷ್ಯ ರೂಪಿಸಲು ಸಂಘಟನೆಯು ನೆರವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ನಿತ್ಯಶ್ರೀ ಇವರ ಪ್ರಾರ್ಥನೆಯ ಬಳಿಕ ಸರೋಜಕುಮಾರಿ ನೀತಿಸಂಹಿತೆ ಪಠಿಸಿದರು. ಆರ್. ವೆಂಕಟ್ರಮಣ ಅವರು ಅತಿಥಿಗಳನ್ನು ಪರಿಚಯಿಸಿದರು. ತಾ| ಅಧ್ಯಕ್ಷ ಹರೀಶ್ ಪುತ್ತೂರಾಯ, ವಲಯದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಯಡಪಡಿತ್ತಾಯ ಮತ್ತು ಆನಂದ ಉಡುಪರನ್ನು ರಾಮಕೃಷ್ಣ ಯಡಪಡಿತ್ತಾಯ, ರಾಜರಾಮ ಹೆಬ್ಟಾರ್, ಸತೀಶ್ ಮಡಂಬಡಿತ್ತಾಯ, ಸುಬ್ರಹ್ಮಣ್ಯ ಶಬರಾಯರು ಸನ್ಮಾನಿಸಿದರು. ಉದಯ ಕುಮಾರ್ ಆರ್ಥಿಕ ವರದಿ ಮಂಡಿಸಿದರು.
ವಲಯದಲ್ಲಿ ಅಂತಿಮ ವರ್ಷದ ಕಲಿಕೆಯಲ್ಲಿ ಡಿಸ್ಟಿಂಕ್ಷನ್ ಸಾಧಕರಾದ ನಿತ್ಯಶ್ರೀ ಹೆಬ್ಟಾರ್, ಭೂಮಿಕಾ ಸುಲ್ತಾಜೆ, ಅನಂತೇಶ ಕುಂಡಡ್ಕ, ಸಿದ್ಧಾರ್ಥ್ ಕಡಂಬಳಿತ್ತಾಯ, ಆದಿತ್ಯ ಹೆಬ್ಟಾರ್, ಆಕಾಶ್ ಜೋಗಿತ್ತಾಯ, ಅನುಷಾ ಸರಳಾಯ, ಅನುಷಾ ಪಾಂಗಣ್ಣಾಯ, ರೇಶ್ಮಾ ನೆಕ್ಕರ್ಲ ಅವರನ್ನು ನಗದು ಬಹುಮಾನ ನಿಡಿ ಸಮ್ಮಾನಿಸಲಾಯಿತು. ಮಹಿಳಾ ಸಂಪದದ ಅಧ್ಯಕ್ಷೆ ವನಿತಾ ಬಾಲಚಂದ್ರ, ಗುರುಪ್ರಸಾದ್ ಆಚಾರ್ ಉಪಸ್ಥಿತರಿದ್ದರು. ರವೀಂದ್ರ ಟಿ. ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಹೆಬ್ಟಾರ್ ಮತ್ತು ಸುಬ್ರಹ್ಮಣ್ಯ ಶಬರಾಯ ಕಾರ್ಯಕ್ರಮ ಸಂಘಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.