ಕಾರಂತರು ಚೈತನ್ಯ ತುಂಬಿದ ಮಹಾತ್ಮರು: ಪೇಜಾವರ ಶ್ರೀ
ಡಾ| ಸಂಧ್ಯಾ ಎಸ್. ಪೈ ಅವರಿಗೆ "ಕಾರಂತ ಪ್ರಶಸ್ತಿ' ಪ್ರದಾನ
Team Udayavani, Oct 11, 2021, 6:05 AM IST
ಮಂಗಳೂರು: ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ಬದುಕಿಗೆ ಚೈತನ್ಯ ತುಂಬುತ್ತದೆ. ಯಾರು ತಮ್ಮ ಬದುಕಿಗೆ ಮಾತ್ರವಲ್ಲದೆ ನಾಡಿಗೆ, ಸಮಾಜಕ್ಕೆ ಚೈತನ್ಯ ತುಂಬುತ್ತಾರೋ ಅವರು ಮಹಾತ್ಮರೆನಿಸಿಕೊಳ್ಳುತ್ತಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಕೋಟ ಶಿವರಾಮ ಕಾರಂತರು ಈ ರೀತಿ ಚೈತನ್ಯವನ್ನು ತುಂಬಿದ್ದಾರೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟಹಬ್ಬದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮಂಗಳೂರಿನಲ್ಲಿ ರವಿವಾರ ಜರಗಿದ ಸಮಾರಂಭದಲ್ಲಿ ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರಿಗೆ “ಕಾರಂತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಅಶೀರ್ವಚನ ನೀಡಿದರು.
ಬದುಕು ನಿಂತ ನೀರಾಗದೆ ಸದಾ ಕ್ರಿಯಾಶೀಲತೆಯಿಂದ ಕೂಡಿರಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಬದುಕಿಗೆ ಚೈತನ್ಯ ತುಂಬುತ್ತದೆ. ತಮ್ಮ ಬರೆಹಗಳ ಮೂಲಕ ಸಮಾಜದಲ್ಲಿ ಸಾಹಿತ್ಯ ಮತ್ತು ಮೌಲ್ಯಗಳನ್ನು ತುಂಬುತ್ತಿರುವ ಡಾ| ಸಂಧ್ಯಾ ಪೈ ಅವರಿಗೆ “ಕಾರಂತ ಪ್ರಶಸ್ತಿ’ ಸಂದಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಅಭಿನಂದಿಸಿದರು.
ಸಂಸ್ಕೃತಿ, ನೈತಿಕ ಮೌಲ್ಯಗಳ ಉದ್ದೀಪನೆ: ಡಾ| ಸಂಧ್ಯಾ ಪೈ
ಪ್ರಶಸ್ತಿ ಸ್ವೀಕರಿಸಿದ ಡಾ| ಸಂಧ್ಯಾ ಪೈ ಅವರು ಮಾತನಾಡಿ, ನಾವು ಎಳೆ ಯರಾಗಿದ್ದಾಗ ಹಿರಿಯರು ಕಥೆಗಳ ಮೂಲಕ ಮಕ್ಕಳಲ್ಲಿ ಪರಂಪರೆ, ಸಂಸ್ಕೃತಿಯ ಅರಿವು ಮೂಡಿ ಸುತ್ತಿ ದ್ದರು ಮತ್ತು ನೈತಿಕ ಮೌಲ್ಯಗಳನ್ನು ತುಂಬು ತ್ತಿದ್ದರು. ಆದರೆ ಪ್ರಸ್ತುತ ಅದು ಮರೆಯಾಗುತ್ತಿದೆ. ಬದುಕನ್ನು ಬದಲಾಯಿಸಲು ಸಾಧ್ಯವಿರುವುದು ಜೀವನದ ಮೌಲ್ಯಗಳನ್ನು ಅರ್ಥೈಸಿ ಕೊಂಡಾಗ. ಇಂತಹ ಉತ್ತಮ ಪರಂಪರೆಯನ್ನು ತರಂಗದ ಮೂಲಕ ಯಾಕೆ ಮರು ಆರಂಭಿಸಬಾರದು ಎಂಬ ಚಿಂತನೆ ನನ್ನಲ್ಲಿ ಮೂಡಿತು ಮತ್ತು ಆ ಪ್ರಯತ್ನ ಜನಮಾನಸವನ್ನು ಮುಟ್ಟಿತು ಎಂದು ಹೇಳಿದರು.
ಇದನ್ನೂ ಓದಿ:ಪ್ರತಿ ಜಿಲ್ಲೆಯಲ್ಲಿ ಮಾದರಿ ಕೋವಿಡ್‌ಫೀಲ್ಡ್ ಆಸ್ಪತ್ರೆ ತೆರೆಯಲು ಸರ್ಕಾರ ಸಿದ್ಧವಿದೆ
ತರಂಗ ವಾರಪತ್ರಿಕೆಗೆ ಮುಂದಿನ ಜನವರಿಗೆ 40 ವರ್ಷಗಳ ಸಂಭ್ರಮ. ತರಂಗದ ವ್ಯವಸ್ಥಾಪಕ ಸಂಪಾದಕಿ ಯಾಗಿ 25 ವರ್ಷಗಳನ್ನು ಪೂರೈಸುತ್ತಿ ದ್ದೇನೆ. ಸಂತೃಪ್ತ ಗೃಹಿಣಿಯಾಗಿದ್ದ ನನ್ನ ಬದುಕಿನಲ್ಲಿ ತರಂಗ ಹೊಸ ಚಿಂತನೆಯ ತರಂಗಗಳನ್ನು ಸೃಷ್ಟಿಸಿತು. ನಾನು ಇಂದು ಮಾಡಿರುವ ಸಾಧನೆ, ದೊರಕಿರುವ ಸಮ್ಮಾನಗಳಲ್ಲಿ ತರಂಗ ವಾರಪತ್ರಿಕೆಯ ಪಾತ್ರ ಮಹತ್ತರವಾ ದುದು ಎಂದ ಅವರು ಮಹಾನ್ ಸಾಹಿತಿ, ಸಾಧಕ ಡಾ| ಶಿವರಾಮ ಕಾರಂತರು ಒಂದು ಪಠ್ಯವಿದ್ದಂತೆ.ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಯನ್ನು ಸ್ವೀಕರಿಸುತ್ತಿರುವುದು ನನ್ನಲ್ಲಿ ಧನ್ಯತೆಯನ್ನು ಮೂಡಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಮಾತ ನಾಡಿ, ಡಾ| ಶಿವರಾಮ ಕಾರಂತರ ನಡೆ, ನುಡಿ, ಬದುಕು ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.
ಸಾಹಿತಿ ನಿತ್ಯಾನಂದ ಕಾರಂತ ಪೊಳಲಿ, ಶಾಸಕ ವೇದವ್ಯಾಸ ಕಾಮತ್, ಕರ್ಣಾಟಕ ಬ್ಯಾಂಕಿನ ಮಹಾ ಪ್ರಬಂಧಕ ನಾಗರಾಜ ರಾವ್ ಅವರು ಕಾರಂತರ ಸ್ಮರಣೆಗೈದರು.
ಮೇಯರ್ ಪ್ರೇಮಾನಂದ ಶೆಟ್ಟಿ ಅವರು ದೀಪ ಬೆಳಗಿದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಕಾರಂತ ಪ್ರಶಸ್ತಿ ಪುರಸ್ಕೃತರಾದ ಡಾ| ಸಂಧ್ಯಾ ಎಸ್. ಪೈ ಅವರನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ ಕಾರಂತ ಹುಟ್ಟುಹಬ್ಬ ಮತ್ತು ಕಾರಂತ ಪ್ರಶಸ್ತಿ ಬಗ್ಗೆ ವಿವರಿಸಿದರು.
ಕೆ. ಮೋಹನ್ ರಾವ್ ಮೊಡಂಕಾಪು, ಡಾ| ಮಂಜುಳಾ ಶೆಟ್ಟಿ ಹಾಗೂ ಅಚ್ಯುತ ಚೇವಾರು ಅವರಿಗೆ ಕಲ್ಕೂರ ಅಭಿನಂದನಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರಬಂಧ ಸ್ಪರ್ಧೆ, ಕಾರ್ಡಿನಲ್ಲಿ ಚಿತ್ರಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದಯಾನಂದ ಕಟೀಲು ಪ್ರಶಸ್ತಿ ಪತ್ರ ವಾಚಿಸಿದರು. ಪ್ರೊ| ಜಿ.ಕೆ. ಭಟ್ ಸೇರಾಜೆ ವಂದಿಸಿದರು. ಮಂಜುಳಾ ಶೆಟ್ಟಿ, ಕವಿತಾ ಪಕ್ಕಳ ನಿರೂಪಿಸಿದರು.
ಕಾರಂತರ ಜತೆ ತರಂಗದ ಅವಿನಾಭಾವ ಸಂಬಂಧ
ಡಾ| ಶಿವರಾಮ ಕಾರಂತರು ಮತ್ತು “ತರಂಗ’ದ ನಡುವೆ ಒಂದು ಅವಿನಾಭಾವ ಸಂಬಂಧವಿತ್ತು. ತರಂಗ ಪ್ರಾರಂಭದ ದಿನಗಳಲ್ಲಿ ಕಾರಂತರು ಕಾರಂತಜ್ಜನಾಗಿ ಮೂರು ವರ್ಷಗಳ ಕಾಲ ತರಂಗದ ಬಾಲವನದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಮುಖಪುಟದ ಲೇಖನಗಳನ್ನೂ ಬರೆಯುತ್ತಿದ್ದರು. ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಡಾ| ಸಂಧ್ಯಾ ಎಸ್. ಪೈ ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.