ಶೋಭಾ ಸಲ್ಲಿಸಿದ ಮನವಿ ಪತ್ರಕ್ಕೆ ವ್ಯಾಪಕ ಟೀಕೆ
Team Udayavani, Jul 20, 2017, 7:20 AM IST
ಮಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದ ಮೇಲೆ ಆರ್‌ಎಸ್ಸೆಸ್, ಹಿಂದೂ ಹಾಗೂ ಬಿಜೆಪಿ ಮುಖಂಡರ ಹತ್ಯೆ ಆಗಿರುವ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ಜೀವಂತವಾಗಿರುವ ವ್ಯಕ್ತಿಗಳ ಹೆಸರನ್ನು ಉಲ್ಲೇಖೀಸಿರುವುದು ಇದೀಗ ಭಾರೀ ವಿವಾದಕ್ಕೆ ಎಡೆಮಾಡಿದೆ.
ಸಿದ್ದರಾಮಯ್ಯ ನೇತೃತ್ವದ ಸರಕಾರದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಹಿಂದೂ/ ಆರೆಸ್ಸೆಸ್/ ಬಿಜೆಪಿ ಕಾರ್ಯ ಕರ್ತರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಕೊಲೆ ಮತ್ತು ಹಲ್ಲೆ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿ ಶೋಭಾ ಅವರು ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ನೀಡಿದ್ದರು.
ಈ ಮನವಿಯಲ್ಲಿ ಕಳೆದ 4 ವರ್ಷಗಳ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಒಟ್ಟು 23 ಮಂದಿ ಹಿಂದೂ/ ಆರೆಸ್ಸೆಸ್/ ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ; ಜತೆಗೆ, ಕಳೆದ ಮೂರು ವರ್ಷಗಳಲ್ಲಿ ಆರು ಮಂದಿ ಹಲ್ಲೆಗೊಳ ಗಾಗಿದ್ದಾರೆ ಎಂದು ಶೋಭಾ ಉಲ್ಲೇಖೀಸಿದ್ದಾರೆ. ಹೀಗೆ ಸಂಸದೆ ಶೋಭಾ ಅವರು ಕೇಂದ್ರ ಗೃಹಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿರುವ ವಿಚಾರದಲ್ಲಿ ಕೆಲವೊಂದು ಅಂಶಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕ ವಲಯದಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ, ಟೀಕೆಗಳು ವ್ಯಕ್ತವಾಗಿವೆ.
ಶೋಭಾ ವಿಷಾದ: ಪತ್ರದಲ್ಲಿ ಆಗಿರುವ ಲೋಪದ ಬಗ್ಗೆ ಶೋಭಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೂ ಈ ಕುರಿತು ಕೇಂದ್ರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಪ್ರತಿಕ್ರಿಯಿಸಿದ್ದು, ಲೋಪವಾಗಿರುವುದು ಹೌದು; ಈ ಕುರಿತು ಕೇಂದ್ರಕ್ಕೆ ಈಗಾಗಲೇ ವಿವರಣೆ ನೀಡಲಾಗಿದೆ. ಕೇಂದ್ರಕ್ಕೆ ಹೊಸದಾಗಿ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.
ಅಶೋಕ ಪೂಜಾರಿ ಬದುಕಿದ್ದಾರೆ
ಕೊಲೆಯಾದವರ ಪಟ್ಟಿಯಲ್ಲಿ ಶೋಭಾ ಅವರು ನಮೂದಿಸಿರುವ ಮೊದಲ ಹೆಸರು ಮೂಡಬಿದಿರೆಯ ಅಶೋಕ ಪೂಜಾರಿ ಅವರದ್ದಾಗಿದ್ದು, ವಾಸ್ತವದಲ್ಲಿ ಅವರು ಈಗಲೂ ಜೀವಂತವಿದ್ದಾರೆ. ಅಶೋಕ್ ಮೇಲೆ 2015 ಸೆ. 20ರಂದು ಬೆಳಗ್ಗೆ ಮುಸುಕುಧಾರಿಗಳಿಂದ ಹಲ್ಲೆ ನಡೆದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅನಂತರ ಚೇತರಿಸಿಕೊಂಡಿದ್ದರು. ಹೀಗಾಗಿ ಅವರ ಮೇಲೆ ಕೊಲೆ ಯತ್ನ ನಡೆದಿತ್ತೇ ಹೊರತು ಹತ್ಯೆಯಾಗಿರಲಿಲ್ಲ.
ವಾಮನ ಪೂಜಾರಿ ಆತ್ಮಹತ್ಯೆಗೈದವರು
ಶೋಭಾ ನಮೂದಿಸಿರುವ ಎರಡನೇ ಹೆಸರು ಮೂಡಬಿದಿರೆಯ ವಾಮನ ಪೂಜಾರಿ ಅವರದ್ದು. ಅವರು 2015ರ ಅಕ್ಟೋಬರ್ 15ರಂದು ತನ್ನ ಪುತ್ರಿಯ ಮನೆಯ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೇ ಹೊರತು
ಕೋಮು ಸಂಘರ್ಷದ ಆರೋಪದ ಮೇಲೆ ಹತ್ಯೆ ನಡೆದಿ ರಲಿಲ್ಲ. ವಿಶೇಷ ಅಂದರೆ ಈ ಇಬ್ಬರ ಹೆಸರನ್ನು ಕೂಡ ಹಿಂದೂ ಕಾರ್ಯಕರ್ತರ ಹತ್ಯೆ ಪಟ್ಟಿಯಲ್ಲಿ ನಮೂದಿಸಿರುವುದು ಸಾಮಾಜಿಕ ಜಾಲ ತಾಣ ಸೇರಿದಂತೆ ಸಾಕಷ್ಟು ವಲಯದಲ್ಲಿ ಸಾಕಷ್ಟು ವಿರೋಧಕ್ಕೆ ಎಡೆಮಾಡಿದೆ.
ಕಾರ್ತಿಕ್ ರಾಜ್ ಸೋದರಿಯಿಂದಲೇ ಹತ್ಯೆ
ಈ ನಡುವೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನೂ ಹಿಂದೂ ಮುಖಂಡರ ಹತ್ಯೆ ಪಟ್ಟಿಯಲ್ಲಿ ಶೋಭಾ ಉಲ್ಲೇಖೀಸಿದ್ದಾರೆ. ಆದರೆ ಪೊಲೀಸರ ತನಿಖೆಯಲ್ಲಿ ಕಾರ್ತಿಕ್‌ರಾಜ್‌ನನ್ನು ಆತನ ಸೋದರಿಯೇ ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿಸಿದ್ದಳು ಎಂಬುದು ಈಗಾಗಲೇ ಬಹಿರಂಗಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.