ಸುಳ್ಯ: ಪ್ರಥಮಬಾರಿಗೆ ಕಿರುಚಿತ್ರಗಳ ಮಹಾಸ್ಪರ್ಧೆ
Team Udayavani, Jul 5, 2017, 3:35 AM IST
ಸುಳ್ಯ: ಸುಳ್ಯದಲ್ಲಿ ಪ್ರಥಮ ಬಾರಿಗೆ ಕಿರುಚಿತ್ರಗಳ ಮಹಾ ಸ್ಪರ್ಧೆಯನ್ನು ಆದ್ಯ ಕ್ರಿಯೇಷನ್ಸ್ ಹೆಸರಿನಲ್ಲಿ ನಾಲ್ವರು ಯುವಕರು ಹಮ್ಮಿಕೊಂಡಿದ್ದು, ಸುಳ್ಯ ಓಡಬಾ„ಯಲ್ಲಿಯ ಕುಂಭಕೋಡು ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಿತು.
ಸತೀಶ್ ಹೊದ್ದೆಟ್ಟಿ, ಕಿರಣ್ ಭಟ್, ಪುಷ್ಪರಾಜ ಕುಲಾಲ್ ಮತ್ತು ಪ್ರಶಾಂತ್ ರಾಮನ್ ಅವರು ಸೇರಿ ಆದ್ಯ ಕ್ರಿಯೇಷನ್ಸ್ ಎಂಬ ಸಂಸ್ಥೆಯ ಮೂಲಕ ಈ ಕಿರು ಚಿತ್ರಗಳ ಸ್ಪರ್ಧೆ ಏರ್ಪಡಿಸಿದ್ದರು. ಸ್ಪರ್ಧೆಗೆ 23 ಕಿರುಚಿತ್ರಗಳು ಬಂದಿದ್ದು, ಇವುಗಳಲ್ಲಿ 12 ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ತೀರ್ಪುಗಾರರು ಮತ್ತು ಪ್ರೇಕ್ಷಕರ ಮುಂದೆ ಪ್ರದರ್ಶಿಸಲಾಯಿತು. ಇವುಗಳಲ್ಲಿ ಪ್ರಥಮ ಪ್ರಶಸ್ತಿಗೆ ಇಕ್ಕಿಲಿ ಎಂಬ ಮಲಯಾಳಂ ಕಿರುಚಿತ್ರ, ರನ್ನರ್ ಅಪ್ ಪ್ರಶಸ್ತಿಗೆ ಜಕ್ಕಿನಿ ಎಂಬ ಕಿರುಚಿತ್ರ ಆಯ್ಕೆಯಾಯಿತು. ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆದ ಈ ವಿಭಿನ್ನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ತೀರ್ಪುಗಾರರಾಗಿ ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತ್ಯಗಾರ ಡಾ| ವಿ.ನಾಗೇಂದ್ರ ಪ್ರಸಾದ್, ಚಿತ್ರ ನಟಿ ದಿವ್ಯಾರಾವ್, ಮಡ ಮಕ್ಕಿ ನಿರ್ದೇಶಕ ವಿನಯ್ ಪ್ರೀತಮ್, ಮಲಯಾಳಂ ನಿರ್ದೇಶಕ ಪ್ರದೀಪ್ ಮಾಧವನ್, ನಟ ನಿರ್ಮಾಪಕ ನವರಸನ್ ಕಾರ್ಯ ನಿರ್ವಹಿಸಿದರು.
ಕಿರುಚಿತ್ರ ಮಹಾಸ್ಪರ್ಧೆ ಕಾರ್ಯಕ್ರಮವನ್ನು ನಿರ್ದೆಶಕ ಡಾ| ವಿ. ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು. ನಿತ್ಯಾನಂದ ಮುಂಡೋಡಿ, ದಾಮೋದರ ನಾರ್ಕೋಡು, ಪಿ.ಎಂ. ರಂಗನಾಥ್, ದಿನೇಶ್ ಮಡಪ್ಪಾಡಿ, ದಿವ್ಯ ಪ್ರಭಾ ಚಿಲ್ತಡ್ಕ, ಶೀಲಾವತಿ ಮಾಧವ, ಜೀವನ್ ರಾಂ ಸುಳ್ಯ, ಕೆ.ಎಂ. ಮುಸ್ತಫ, ಡಾ| ಎನ್.ಎ.ಜ್ಞಾನೇಶ್, ಹರೀಶ್ ಬಂಟ್ವಾಳ್, ಸುಧಾಕರ ರೈ ನೆಟ್‌ಕಾಂ, ರಾಕೇಶ್ ಕುಂಟಿಕಾನ, ಶರೀಫ್ ಜಟ್ಟಿಪಳ್ಳ, ಸದಾ ನಂದ ಮಾವಜಿ, ಡಾ| ಅಶೋಕ್ ನಿಡ್ಯಮಲೆ, ಪ್ರಫುಲ್ ದೇರಪ್ಪಜ್ಜನ ಮನೆ, ತುಷಾರ್ ಗೌಡ, ಈಶ್ವರ ಮೂಲ್ಯ, ಕುಂಞಿರಾಮನ್ ವೈದ್ಯರ್ ಉಪಸ್ಥಿತರಿದ್ದರು.ಎಂ.ಬಿ.ಸದಾಶಿವ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು
Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು
Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್!
Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.