ಭೂಮಾಪಕರ ಕೊರತೆ: ಕಂದಾಯ ಸೇವೆ ವಿಳಂಬ: ಜನರಿಗೆ ತೀವ್ರ ಸಂಕಷ್ಟ
ಖಾಸಗಿ ಮೊರೆ ಹೋದ ಸರಕಾರ
Team Udayavani, Apr 3, 2023, 7:16 AM IST
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭೂಮಾಪಕರ ಕೊರತೆಯಿಂದಾಗಿ ಸಾರ್ವಜನಿಕರಿಗೆ ಭೂಮಾಪನ ಸಂಬಂಧಿತ ಸೇವೆ ವಿಳಂಬವಾಗುತ್ತಿದೆ.
ಅಗತ್ಯದಷ್ಟು ಭೂಮಾಪಕರು ಇಲ್ಲದ ಕಾರಣ 11ಇ ನಕ್ಷೆ ಸಹಿತ ವಿವಿಧ ಕಡತಗಳಿಗೆ ಸಂಬಂಧಿಸಿ ಬಹು ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ಜಮೀನು ಮಾರಾಟ, ಬ್ಯಾಂಕ್ ಸಾಲ ಮುಂತಾದ ಹಲವು ಅಗತ್ಯಗಳಿಗೂ ಜನರು ಪರದಾಡುವಂತಾಗಿದೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 30 ಸೆಕ್ಟರ್‌ಗಳಿವೆ. ಇದರಲ್ಲಿ ಕನಿಷ್ಠ 15 ಮಂದಿ ಭೂಮಾಪಕರು ಫೀಲ್ಡ್
ನಲ್ಲಿ ಇರಬೇಕಿದ್ದು, ಈಗ 9 ಮಂದಿ ಮಾತ್ರ ಇದ್ದಾರೆ. ಗ್ರಾಮಾಂತರದಲ್ಲಿ ಈ ಸಂಖ್ಯೆ ಬೆರಳೆಣಿಕೆಯಲ್ಲಿದೆ.
ಮಂಗಳೂರಿಗೆ ಬಹು ಸಮಸ್ಯೆ
ಬ್ಯಾಂಕ್ ಸಾಲ, ಭೂಮಿ ನೋಂದಣಿ, ಭೂ ಪರಿವರ್ತನೆ ಮುಂತಾದ ಅಗತ್ಯಗಳಿಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಕಾರ್ಡ್ ಬೇಕಾಗುತ್ತದೆ. ಇದಕ್ಕಾಗಿ ಸರ್ವೆಯರ್ ಬಂದು ಅಳತೆ ಮಾಡಿ, ಕಚೇರಿ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಸರ್ವೆಯರ್ ಕೊರತೆಯಿಂದ ಈ ಪ್ರಕ್ರಿಯೆ ತುಂಬಾ ತಡವಾಗುತ್ತಿದೆ.
ಪರವಾನಿಗೆದಾರ ಭೂಮಾಪಕರ ಬಳಕೆ
ಸರಕಾರಿ ಭೂಮಾಪಕರ ಕೊರತೆಯಿಂದ ಖಾಸಗಿ ಭೂಮಾಪಕರನ್ನು ನಿಯೋಜನೆ ಮಾಡಿದೆ. ಇದರಂತೆ 2022ರಲ್ಲಿ ಹದ್ದುಬಸ್ತು/11ಇ/ಪೋಡಿ/ಖಾಸಗಿ ಆಸ್ತಿಗಳ ಇ-ಸೊತ್ತು/ಭೂ ಪರಿವರ್ತನೆ ಪೂರ್ವ ನಕ್ಷೆ/ಸರಕಾರಿ ಜಮೀನುಗಳ ಅಳತೆ ಹಾಗೂ ಇತರ ಅರ್ಜಿಗಳ ಅಳತೆಯನ್ನು ಪರವಾನಿಗೆ ಹೊಂದಿರುವ ಭೂಮಾಪಕ ರಿಗೆ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದ.ಕ. ಜಿಲ್ಲೆ 117 ಹಾಗೂ ಉಡುಪಿಯಲ್ಲಿ 89 ಪರವಾನಿಗೆ ದಾರ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸಾಕಾಗುತ್ತಿಲ್ಲ. ಮುಂದೆ ಎಲ್ಲೆಡೆ ಡ್ರೋನ್ ಸರ್ವೆ ನಡೆಯ ಬೇಕಾಗಿದ್ದು, ಮತ್ತಷ್ಟು ಭೂಮಾಪಕರ ಅಗತ್ಯ ಇದೆ.
ಭೂಮಾಪಕರ ಕೊರತೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಲವು ನೇಮಕ ಮಾಡಲಾಗಿದೆ. ಮತ್ತಷ್ಟು ಮಂದಿಯ ನೇಮಕಕ್ಕೆ ನಿರ್ಧರಿಸಲಾಗಿದೆ. ಸರ್ವೆಯರ್ ಕೊರತೆ ಆಗದಂತೆ ನೋಡಿಕೊಳ್ಳ ಲಾಗಿದೆ. ಹೆಚ್ಚಿನ ಸಮಸ್ಯೆ ಇದ್ದರೆ ಪರಿಶೀಲಿಸ ಲಾಗುವುದು.
– ಶ್ರೀಧರ್, ಆಯುಕ್ತರು
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು
ಭೂ ದಾಖಲೆಗಳ ಇಲಾಖೆ-ಬೆಂಗಳೂರು
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.