ಕಾರ್ಯಕ್ರಮಕ್ಕೆ ಅಡ್ಡಿ ಸಲ್ಲದು: ಜೆಡಿಎಸ್
Team Udayavani, Feb 23, 2017, 12:51 PM IST
ಮಂಗಳೂರು: ಕೇರಳದ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸುವುದು ಹಾಗೂ ಅವರು ಪಕ್ಷದ ಸಭೆಯಲ್ಲಿ ಭಾಗವಹಿಸುವುದರ ವಿರುದ್ಧ ಪ್ರತಿಭಟನೆ ಹಾಗೂ ಬಂದ್‌ಗೆ ಕರೆ ನೀಡುವುದರ ಮೂಲಕ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆಗಳು ಫ್ಯಾಸಿಸ್ಟ್ ಪ್ರವೃತ್ತಿ ತೋರಿಸುತ್ತಿವೆ ಎಂದು ದ.ಕ. ಜಿಲ್ಲಾ ಜನತಾದಳ ತಿಳಿಸಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿರುವ ರಾಷ್ಟ್ರೀಯ ಪಕ್ಷವೊಂದು ರಾಜ್ಯವೊಂದರ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಈ ಪರಿ ವಿರೋಧ ವ್ಯಕ್ತಪಡಿಸುತ್ತಿರುವುದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಶಾಂತಿ ಕದಡುವ ಏಕಮಾತ್ರ ಗುರಿ ಅವರದ್ದಾಗಿದೆ. ಸಂಸದ, ಶಾಸಕರ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವ ವಿಧಾನ ಈ ದೇಶದ ಮೌಲ್ಯಗಳಿಗೆ ತಿಲಾಂಜಲಿ ನೀಡುವ ಎನ್‌ಡಿಎ ಸರಕಾರದ ಅಜೆಂಡಾದ ಒಂದು ಭಾಗ. ಜನತಾದಳ ಇದನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ಶಾಂತಿ ಕಾಪಾಡಲು ಕಾನೂನಿನ ಬಿಗಿಯಾದ ಬಂದೋಬಸ್ತ್ ಮಾಡಲು ಜಿಲ್ಲಾಡಳಿತವನ್ನು ಆಗ್ರಹಿಸುತ್ತದೆ ಎಂದು ಜನತಾದಳದ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಹೈದರ್ ಪರ್ತಿಪಾಡಿ ಮೊದಲಾದವರು ಲಿಖೀತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.