ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ
Team Udayavani, Sep 28, 2019, 7:02 PM IST
ಮೂಲ್ಕಿ: ಒಂಬತ್ತು ಮಾಗಣೆಯ 32 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಮೂಲ್ಕಿಯ ಸೀಮೆಯೊಡತಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲದೆ 10ನೇ ದಿನವಾದ ವಿಜಯ ದಶಮಿಯಂದು ಸೇರಿ ಪ್ರತಿನಿತ್ಯವೂ ಚಂಡಿಕಾ ಯಾಗ ಮತ್ತು ನಿತ್ಯವೂ ವಿಶೇಷ ಆರಾಧನೆಗಳು ನಡೆಯುತ್ತವೆ.
ಕ್ಷೇತ್ರದಲ್ಲಿ ಪ್ರತಿನಿತ್ಯವೂ ನಡೆಯುವ ಚಂಡಿಕಾ ಯಾಗವು ಭಕ್ತರ ಹರಕೆ ರೂಪದ್ದಾದರೆ ವಿಜಯ ದಶಮಿಯಂದು ನಡೆಯುವ ಚಂಡಿಕಾ ಯಾಗವು ದೇವಸ್ಥಾನದ ಭಂಡಾರದಿಂದ ಸೀಮೆಯ ಭಕ್ತರು ಹವಿಸ್ಸುಗಳನ್ನು ಅರ್ಪಿಸುವ ಮೂಲಕ ಸಾರ್ವಜನಿಕವಾಗಿ ವಿಜೃಂಭಣೆಯಿಂದ ನಡೆಯುತ್ತದೆ.
ನಿತ್ಯವೂ ಅನ್ನದಾನ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇವರಿಗೆ ಮಹಾ ರಂಗಪೂಜೆ ಇಲ್ಲಿಯ ವಿಶೇಷ. ಶಕ್ತಿಯ ಆರಾಧನೆಯ ಕೇಂದ್ರವಾಗಿರುವ ಇಲ್ಲಿ ನಿತ್ಯವೂ ಸಹಸ್ರಾರು ಭಕ್ತರು ಭಾಗವಹಿಸಿ ಉಪವಾಸ, ವ್ರತಾಚರಣೆಯಂತಹ ವಿಶೇಷ ಸಂಕಲ್ಪಗಳನ್ನು ನಡೆಸುತ್ತಾರೆ. ಐದನೇ ದಿನವಾದ ಲಲಿತ ಪಂಚಮಿಯಂದು ಕ್ಷೇತ್ರದಲ್ಲಿ ಸಹಸ್ರಾರು ಸುಮಂಗಲೆಯರು ಶ್ರೀ ದೇವಿಗೆ ವಿಶೇಷ ಸೇವೆ ಸಲ್ಲಿಸುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.