ನಾಗಮಂಡಲೋತ್ಸವಕ್ಕೆ ಹರಿದುಬಂದ ಭಕ್ತಸಾಗರ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಬ್ರಹ್ಮಕಲಶೋತ್ಸವ
Team Udayavani, Feb 1, 2020, 9:38 PM IST
ಚಿನ್ನದ ರಥದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಕಟೀಲು: ಕಟೀಲು ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಸಂಭ್ರಮದ ನಾಗಮಂಡಲೋತ್ಸವ ಜರಗಿತು.
ಸಂಭ್ರಮದ ನಾಗಮಂಡಲೋತ್ಸವವನ್ನು ಕಣ್ತುಂಬಿಕೊಳ್ಳಲು ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ನಾಗಮಂಡಲೋತ್ಸವಕ್ಕೆ ಪ್ರಯುಕ್ತ ಕ್ಷೇತ್ರದ ಭೋಜನಶಾಲೆಯಲ್ಲಿ ವಿಶೇಷ ಮಹಾಅನ್ನಸಂತರ್ಪಣೆ ಜರಗಿತು. ಸುಮಾರು 1.5 ಲಕ್ಷಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ನಾಗಮಂಡಲ ವೀಕ್ಷಣೆಗೆ ಬಸ್‌ನಿಲ್ದಾಣ ದೇವ ಸ್ಥಾನ ರಥಬೀದಿ, ಭೋಜನ ಶಾಲೆ ವಿವಿಧ 10 ಕಡೆಗಳಲ್ಲಿ ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲು ಮಾಡಿದ್ದು ಎಲ್ಲ ಭಕ್ತರಿಗೂ ದೇವರ ದರ್ಶನ ಅವಕಾಶ ಮಾಡಲಾಯಿತು.
ಉಚಿತ ಬಸ್ ವ್ಯವಸ್ಥೆ
ಕಟೀಲು ದೇಗುಲದಲ್ಲಿ ನಡೆಯುತ್ತಿರುವ ಬ್ರಹ್ಮ ಕಲಶೋತ್ಸವ ಅಂಗವಾಗಿ ಶನಿವಾರ ನಡೆದ ನಾಗ ಮಂಡಲೋತ್ಸವ ನೋಡಲು ಕಟೀಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ರಾತ್ರಿ 11.30ರ ವರೆಗೆ (ಕಟೀಲು ರೂಟ್‌ನಲ್ಲಿ ಸಂಚರಿಸುವ ಬಸ್ಸುಗಳು) ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಭಾÅಮರೀವನದಲ್ಲಿ ಕೇತುಯಾಗ, ಸಹಸ್ರ ಚಂಡಿಕಾಸಪ್ತಶತೀಪಾರಾಯಣ, ಕೋಟಿ ಜಪ ಯಜ್ಞ, ನವಗ್ರಹ ವನದಲ್ಲಿ ವೃಕ್ಷಸ್ಥಾಪನೆ, ಸಂಜೆ 6ರಿಂದ ಹಾಲಿಟ್ಟು ಸೇವೆ, ಕೋಟಿಜಪಯಜ್ಞ, ಸಹಸ್ರ ಚಂಡಿಕಾಸಪ್ತಶತೀಪಾರಾಯಣ ಜರಗಿತು.
ಧಾರ್ಮಿಕ ಕಾರ್ಯಕ್ರಮಗಳು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಶನಿವಾರದಂದು ನಾಗಮಂಡಲೋತ್ಸವ ಸಂಭ್ರಮದ ಜತೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬೆಳಗ್ಗೆ 5 ರಿಂದ ಒಳಗಿನ ನಾಗಸನ್ನಿಧಿಯಲ್ಲಿ ಕಲಶಾಭಿಷೇಕ, ತಿಲಹೋಮ, ಕೂಷ್ಮಾಂಡಹೋಮ, ಪವಮಾನ ಹೋಮ, ಸರ್ಪತ್ರಯಮಂತ್ರ ಹೋಮ, ಮಂಗಳ ಗಣಯಾಗ, ವಟು ಆರಾಧನೆ, ದಂಪತಿಪೂಜೆ, ಮಹಾಮಂತ್ರಾಕ್ಷತೆ ಜರಗಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.