ಪಣಂಬೂರು ವೃತ್ತಕ್ಕೆ ಸಿಗ್ನಲ್ ಲೈಟ್
Team Udayavani, Aug 18, 2017, 8:25 AM IST
ಪಣಂಬೂರು: ವಾಹನ ದಟ್ಟಣೆ ಹೆಚ್ಚಿರುವ ಪಣಂಬೂರು ಹೆದ್ದಾರಿ ನಡುವಣ ವೃತ್ತಕ್ಕೆ ಕೊನೆಗೂ ಸಿಗ್ನಲ್ ಲೈಟ್ ಅಳವಡಿಕೆಯಾಗಿದೆ.
ಬುಧವಾರದಿಂದ ಟ್ರಾಫಿಕ್ ನಿಯಂತ್ರಿಸುವ ಕಾರ್ಯ ಆರಂಭವಾಗಿದೆ. ನವಮಂಗಳೂರು ಬಂದರು ಆಡಳಿತ ಕಚೇರಿ, ಅ ಬಕಾರಿ ಸಿಬಂದಿ ಕ್ವಾರ್ಟಸ್, ಎನ್‌ಎಂಪಿಟಿ ಶಾಲೆ ಮತ್ತಿತರ ಸಂಸ್ಥೆಗಳು ಇಲ್ಲಿರುವುದರಿಂದ ಹೆಚ್ಚಿನ ಜನಸಂಚಾರವಿದೆ. ಹೆದ್ದಾರಿಯಲ್ಲಿ ಅತೀ ವೇಗದಿಂದ ವಾಹನಗಳು ಬರುವ ಕಾರಣದಿಂದ ರಸ್ತೆ ದಾಟಲು ಪಾದಾಚಾರಿಗಳು ಪರದಾಡುವಂತೆ ಆಗಿತ್ತು. ಬಳಿಕ ಗೃಹ ರಕ್ಷಕ ಸಿಬಂದಿಯನ್ನು ನೇಮಿಸಿ ಸುರಕ್ಷತೆಯ ಕಾರ್ಯಕ್ಕೆ ಒತ್ತು ನೀಡಲಾಯಿತು. ಈ ಹಿಂದೆ ಅಪಘಾತದಲ್ಲಿ ಮೂರು ಮಂದಿಯ ಪ್ರಾಣಹಾನಿಯಾಗಿರುವುದರಿಂದ ಸಿಗ್ನಲ್ ಲೈಟ್ ಅಳವಡಿಕೆಗೆ ಸಂಚಾರ ಠಾಣೆಯ ಅ ಕಾರಿಗಳು ಮನವಿ ಸಲ್ಲಿಸಿದ್ದರು.
ಗುರುವಾರದಿಂದ ವೃತ್ತ ಬಳಿಯೇ ಖಾಸಗಿ ಬಸ್‌ಗಳನ್ನು ನಿಲ್ಲಿಸಿ ಜನರನ್ನು ಇಳಿಸುವ, ಹತ್ತಿಸುವ ಕಾಯಕಕ್ಕೆ ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಬ್ರೇಕ್ ಹಾಕಿದ್ದಾರೆ. ವಾರದಲ್ಲೆ ಪಣಂಬೂರಿನಲ್ಲಿ ಬಸ್ ಬೇ ನಿರ್ಮಿಸಲು ಹೆದ್ದಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಅ ಕಾರಿಗಳು ಪೂರಕವಾಗಿ ಸ್ಪಂದಿಸಿದ್ದು, ಸುರಕ್ಷೆಯ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಂಚಾರ ಠಾಣಾ ಇನ್ಸ್‌ಪೆಕ್ಟರ್ ಮಂಜುನಾಥ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.