ತುಳುವರಿಂದ ತುಳು ತೃತೀಯ ಭಾಷೆಗೆ ಮಹತ್ವ

ಭಾಷೆಯ ರಾಯಭಾರಿಗಳಾಗಿದ್ದಾರೆ 2,600 ವಿದ್ಯಾರ್ಥಿಗಳು

Team Udayavani, Jul 29, 2019, 12:35 PM IST

tulu

ಬೆಳ್ತಂಗಡಿ: ಕರಾವಳಿಯಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಆಯ್ದುಕೊಂಡು ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

2018-19ನೇ ಸಾಲಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳ ಒಟ್ಟು 41 ಶಾಲೆಗಳಿಂದ 618 ಮಂದಿ ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಯಾಗಿ ತುಳು ಕಲಿತಿ
ದ್ದರೆ ಪ್ರಸಕ್ತ 42 ಶಾಲೆಗಳಿಂದ 956 ಮಂದಿ ಕಲಿಯುತ್ತಿದ್ದಾರೆ. 6ರಿಂದ 10ನೇ ತರಗತಿವರೆಗೆ ಒಟ್ಟಾರೆಯಾಗಿ ಪುತ್ತೂರು ತಾಲೂಕು 1,219 ಮಕ್ಕಳನ್ನು
ಹೊಂದಿದ್ದು, ಗರಿಷ್ಠ ಮಕ್ಕಳ ಹೆಗ್ಗಳಿಕೆ ಹೊಂದಿದೆ. ಬೆಳ್ತಂಗಡಿ 670, ಉಡುಪಿ 205, ಮಂಗಳೂರು 187, ಸುಳ್ಯ 176, ಬಂಟ್ವಾಳದಲ್ಲಿ 143 ವಿದ್ಯಾರ್ಥಿಗಳಿದ್ದು, ಒಟ್ಟು ಈ ಬಾರಿ 2,600 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.

18ರಿಂದ 660ಕ್ಕೆ
ತೃತೀಯ ಭಾಷೆಗೆ 2014-15ರ ಪ್ರಥಮ ಬ್ಯಾಚ್‌ನಲ್ಲಿ 18 ಮಂದಿ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. 2016-17ರಲ್ಲಿ 12 ಶಾಲೆಗಳಿಂದ 283, 2017-18ನೇ ಸಾಲಿನಲ್ಲಿ 22 ಶಾಲೆಗಳಿಂದ 417 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ಸಾಲಿನಲ್ಲಿ 618 ವಿದ್ಯಾರ್ಥಿಗಳು ಪರೀಕ್ಷೆ ಎದುರಿ ಸಿದ್ದು, 71 ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದಿದ್ದಾರೆ. ಪ್ರಸಕ್ತ 956 ಮಂದಿ ಇದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿರುವುದು ಅಕಾಡೆಮಿಗೆ ಮತ್ತಷ್ಟು ಗರಿ ಬಂದಿದೆ.

ಒಟ್ಟು 2,600 ವಿದ್ಯಾರ್ಥಿಗಳು
ಉಭಯ ಜಿಲ್ಲೆಗಳಲ್ಲಿ ಪ್ರಸ್ತುತ 41 ಶಾಲೆಗಳಲ್ಲಿ 6ರಿಂದ 10ನೇ ತರಗತಿಯ ವರೆಗೆ 2,600 ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದಾರೆ. 6ರಲ್ಲಿ 125, 7ರಲ್ಲಿ 121, 8ರಲ್ಲಿ 481, 9ರಲ್ಲಿ 917 ಮತ್ತು 10ನೇ ತರಗತಿಯಲ್ಲಿ 956 ವಿದ್ಯಾರ್ಥಿಗಳಿದ್ದಾರೆ. ಶಾಲೆವಾರು 6ರಿಂದ 10ರ ವರೆಗಿನ ಅಂಕಿಅಂಶ ಪರಿಗಣಿಸಿದರೆ ಬೆಳ್ತಂಗಡಿ ತಾಲೂಕಿನ ವೇಣೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ 161 ವಿದ್ಯಾರ್ಥಿಗಳನ್ನು ನೀಡಿ ಪ್ರಥಮ ಸ್ಥಾನದಲ್ಲಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಉನ್ನತೀಕರಿಸಿದ ಪ್ರೌಢಶಾಲೆ 161 ವಿದ್ಯಾರ್ಥಿಗಳನ್ನು ಹೊಂದಿದ್ದು, ಉಪ್ಪಿನಂಗಡಿ ಪದವಿಪೂರ್ವ ಕಾಲೇಜು ವಿಭಾಗದ ಸರಕಾರಿ ಹಿ.ರಿಯ ಪ್ರಾಥಮಿಕ ಶಾಲೆ 154 ಮಕ್ಕಳನ್ನು ಹೊಂದಿದೆ. ಕಳೆದ ವರ್ಷ ಈ ಶಾಲೆ ಮೊದಲ ಸ್ಥಾನದಲ್ಲಿತ್ತು.

ಎರಡು ಪದವಿ ಕಾಲೇಜುಗಳಲ್ಲಿ ಐಚ್ಛಿಕ ಭಾಷೆ
ಮಂಗಳೂರು ವಿವಿಯ ಪದವಿ ಕಾಲೇಜುಗಳಲ್ಲಿ ಈ ಬಾರಿ ಐಚ್ಛಿಕ ಭಾಷೆಯಾಗಿ ತುಳುವೂ ಇದೆ. ನಾಲ್ಕೈದು ಕಾಲೇಜುಗಳು ಪ್ರಸ್ತಾವನೆ ಸಲ್ಲಿಸಿದ್ದರೂ ಎರಡು ಕಾಲೇಜುಗಳಲ್ಲಿ ಮಾತ್ರ ಆರಂಭಿಸಲಾಗಿದೆ. ಮಂಗಳೂರಿನ ಕಾರ್‌ಸ್ಟ್ರೀಟ್‌ ಪದವಿ ಕಾಲೇಜಿನ ಪ್ರಥಮ ವರ್ಷದಲ್ಲಿ 40 ಮತ್ತು ಆಳ್ವಾಸ್‌ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳಿದ್ದಾರೆ.

ತುಳು ಭಾಷೆ ಕಲಿತು ಓದಿ, ವ್ಯವಹಾರ ಯೋಗ್ಯ ವಾತಾವರಣ ನಿರ್ಮಿಸಲು ತುಳು ಅಕಾಡೆಮಿ ಎಲ್ಲ ರೀತಿಯಲ್ಲೂ ಅವಕಾಶ ಕಲ್ಪಿಸಿದೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಪ್ರಗತಿಯಲ್ಲಿರುವುದು ತುಳು ಭಾಷೆಯ ಬಗೆಗಿನ ಕಾಳಜಿ ಅವರಲ್ಲಿರುವುದು ವ್ಯಕ್ತವಾಗುತ್ತಿದೆ.
– ಎ.ಸಿ. ಭಂಡಾರಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಪದವಿಯಲ್ಲಿ ಐಚ್ಛಿಕ ಭಾಷೆಯಾಗಿ ಗುರುತಿಸಿಕೊಂಡಿರುವ ತುಳು ಮುಂದಿನ ವರ್ಷ ಐಚ್ಛಿಕ ವಿಷಯವಾಗಿಸುವ ಸಿದ್ಧತೆ ಕೈಗೊಳ್ಳಲಾಗಿದೆ. ಪಿಯುಸಿಯಲ್ಲೂ ತುಳು ಭಾಷೆಯನ್ನು ತರುವ ದೃಷ್ಟಿಯಿಂದ ತಜ್ಞರ ಜತೆ ಪಠ್ಯ ಪುಸ್ತಕ ಸಿದ್ಧಗೊಳಿಸುವ ವಿಚಾರ ಪ್ರಸ್ತಾವನೆಯಲ್ಲಿದೆ.
– ಬಿ. ಚಂದ್ರಹಾಸ ರೈ, ರಿಜಿಸ್ಟ್ರಾರ್‌, ತುಳು ಸಾಹಿತ್ಯ ಅಕಾಡೆಮಿ

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

Sri Kukke Subrahmanya Temple: ಇಂದು ಲಕ್ಷದೀಪೋತ್ಸವ, ಬೀದಿ ಉರುಳು ಸೇವೆ ಆರಂಭ

Sri Kukke Subrahmanya Temple: ಇಂದು ಲಕ್ಷದೀಪೋತ್ಸವ, ಬೀದಿ ಉರುಳು ಸೇವೆ ಆರಂಭ

Puttur: ಬಾಲಕಿಗೆ ಕಿರುಕುಳ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ 

Puttur: ಬಾಲಕಿಗೆ ಕಿರುಕುಳ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ 

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

sanjeev-ramya

Ramya: ಗೆಳೆಯನ ಜತೆಗಿನ ರಮ್ಯಾ ಫೋಟೋ ವೈರಲ್‌

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.