ಸಿರಿಬಾಗಿಲು: ಮುಂದುವರಿದ ಆಪರೇಶನ್‌ ಹೆಬ್ಬಂಡೆ

ಕುಸಿಯುತ್ತಿದೆ ಬಂಡೆ, ಬಿದ್ದ ಮಣ್ಣು ತೆರವಿಗೆ 3 ದಿನ ಬೇಕು

Team Udayavani, Jul 23, 2019, 5:31 AM IST

2207SUB1B

ಸೋಮವಾರ ಸ್ಫೋಟ ನಡೆಸಿ ಬಂಡೆಗಲ್ಲಿನ ಭಾಗವನ್ನು ತೆರವುಗೊಳಿಸಲಾಯಿತು.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದ ಮಣಿಬಂಡ ಎಂಬಲ್ಲಿ ಹಳಿಗೆ ಉರುಳಲು ಸಿದ್ಧಗೊಂಡ ಬಂಡೆಗಲ್ಲು ತೆರವು ಕಾರ್ಯಾಚರಣೆ ಸೋಮವಾರವೂ ನಡೆಯಿತು.

ಪ್ರತಿಕೂಲ ಹವಾಮಾನದ ನಡುವೆ ಬಂಡೆ ಸ್ಫೋಟಿಸಿ ಪುಡಿ ಮಾಡಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲ್ವೇ ವಿಭಾಗದ ಸುಮಾರು ಎಂಬತ್ತರಷ್ಟು ಮಂದಿ ಕಾರ್ಮಿಕರು ಹಿಟಾಚಿ, ಕಂಪ್ರಶರ್‌ ಮೂಲಕ ಕೆಲಸ ನಿರತರಾಗಿದ್ದಾರೆ. ಒಂದೆಡೆ ತೆರವು ಕಾಮಗಾರಿ ನಡೆಯುತ್ತಿದ್ದರೆ ಇನ್ನೊಂದೆಡೆ ಮತ್ತೆ ಬಂಡೆಯ ಛಿದ್ರ ಭಾಗಗಳು ಮತ್ತು ಮಣ್ಣು ಹಳಿಯ ಮೇಲೆ ಕುಸಿಯುತ್ತಿವೆ. ಇದು ಕಾರ್ಯಾ ಚರಣೆ ಮತ್ತಷ್ಟು ಮುಂದುವರಿ ಯುವ ಮುನ್ಸೂಚನೆ ನೀಡಿದೆ.

ಈಗಾಗಲೇ ಕುಸಿದಿರುವ ಮಣ್ಣು ಮತ್ತು ಕುಸಿಯಲು ಅಣಿಯಾದ ಬಂಡೆಯ ತೆರವು ಕಾರ್ಯ ಮುಗಿಸಲು ಇನ್ನೂ ಮೂರು ದಿನ ಹಿಡಿಯಬಹುದು. ಮತ್ತೂ ಭೂಕುಸಿತವಾದಲ್ಲಿ ಮತ್ತಷ್ಟು ದಿನ ಕಾಮಗಾರಿ ವಿಸ್ತರಿಸಿ ರೈಲು ಸಂಚಾರ ವಿಳಂಬವಾಗುವ ಸಾಧ್ಯತೆಯಿದೆ. ಕುಸಿತ ಪ್ರಮಾಣ ಗಮನಿಸಿದರೆ ಇನ್ನು ಒಂದು ವಾರ ಕಾಲ ಸಂಚಾರ ಪುನರಾರಂಭ ಸಾಧ್ಯ ವಾಗದ ಮಾತು.

ಅಡಚಣೆ ನಿವಾರಿಸಿ ಹಳಿ ಯನ್ನು ಸುಸ್ಥಿತಿಗೆ ತರುವ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ತೆರವು ಆದಂತೆ ಮತ್ತೆ ಕುಸಿತ ಆಗುತ್ತಲೇ ಇರುವ ಕಾರಣ ಯಾವಾಗ ಕೆಲಸ ಮುಗಿಯ ಬಹುದು ಎಂಬುದನ್ನು ಖಚಿತ ವಾಗಿ ಈಗಲೇ ಹೇಳಲು ಸಾಧ್ಯ ವಿಲ್ಲ ಎಂದು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ರೈಲ್ವೇ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹತ್ತು ಬಾರಿ ಸ್ಫೋಟ
ಕಂಪ್ರಸರ್‌ ಬಳಸಿ ಬಂಡೆಗಲ್ಲು ಪುಡಿ ಮಾಡುವ ಕೆಲಸ ನಡೆಯುತ್ತಿದ್ದು, ಸೋಮವಾರ ಮೂರು ಬಾರಿ ಬಂಡೆ ಸ್ಫೋಟಿಸಲಾಗಿದೆ. ಇದುವರೆಗೆ ಸುಮಾರು ಹತ್ತು ಬಾರಿ ಸ್ಫೋಟಕ ಸಿಡಿಸಿ ಬಂಡೆ ಪುಡಿ ಮಾಡಲಾಗಿದೆ. ಕಾರ್ಯಾಚರಣೆ ಹಗಲು ಮತ್ತು ರಾತ್ರಿ ಎರಡೂ ಪಾಳಿಯಲ್ಲಿ ನಡೆಯುತ್ತಿದೆ. ಭಾರೀ ಮಳೆ ಆಗುತ್ತಿರುವುದರಿಂದ ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ರಾತ್ರಿ ಕಾಮಗಾರಿ ನಡೆಸಲು ಬೆಳಕಿನ ಸಮಸ್ಯೆಯೂ ಇದೆ. ಕಿರು ಜನರೇಟರ್‌ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ. ಇಕ್ಕಟ್ಟಾಗಿರುವ ಈ ಜಾಗದಿಂದ ತೆರವು ಮಾಡಿದ ಮಣ್ಣು -ಕಲ್ಲು ಹಾಕಲು ಜಾಗದ ಕೊರತೆ ಎದುರಾಗಿದೆ.

ಯಂತ್ರಗಳಿಗೆ ಇಂಧನ ಮತ್ತು ಕಾರ್ಮಿಕರಿಗೆ, ಅಧಿಕಾರಿಗಳಿಗೆ ಆಹಾರ ಇತ್ಯಾದಿಗಳನ್ನು ನೆಟ್ಟಣ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಿಂದ ಟ್ರಾಲಿ ಮೂಲಕ ಕೊಂಡೊಯ್ಯಲಾಗುತ್ತಿದೆ. ಬಂಡೆ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜು.24ರ ವರೆಗೆ ಮಂಗಳೂರು -ಬೆಂಗಳೂರು ನಡುವಣ ಎಲ್ಲ ಹಗಲು ಸಂಚಾರಿ ರೈಲುಗಳನ್ನು ರದ್ದು ಮಾಡಲಾಗಿದ್ದು, ರಾತ್ರಿ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲಿವೆ.


ಟಾಪ್ ನ್ಯೂಸ್

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

1-pb

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.