ತುಸು ಇಳಿದ ಈರುಳ್ಳಿ ಬೆಲೆ
DK Supply of wheat to schools in the district; Not in costume!
Team Udayavani, Dec 9, 2019, 5:45 AM IST
ಮಂಗಳೂರು: ಇಲ್ಲಿನ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೆಂಟ್ರಲ್ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 70ರಿಂದ 150 ರೂ.ವರೆಗಿನ ಈರುಳ್ಳಿ ಇದೆ.
ಶನಿವಾರದಂದು 160 ರೂ. ರವರೆಗೆ ಮಾರಾಟವಾಗಿತ್ತು.ಕೆಲವು ದಿನಗಳಿಂದ ಏರಿಕೆ ಕಾಣು ತ್ತಿದ್ದ ಬೆಲೆ ರವಿವಾರ ಸ್ಥಿರವಾಗಿತ್ತು. ಹಳೆ ಈರುಳ್ಳಿಗೆ ಕೆ.ಜಿ.ಗೆ 140ರಿಂದ 150 ರೂ. ತನಕ ಇತ್ತು.
ಬೆಳಗಾವಿ, ಈಜಿಪ್ಟ್ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು, ಟರ್ಕಿಯ ಈರುಳ್ಳಿ ಸರಬರಾಜು ನಿಂತಿದೆ. ಸೆಂಟ್ರಲ್ ಮಾರುಕಟ್ಟೆಯಲ್ಲಿ ಶನಿವಾರ ಬೆಳಗಾವಿ ಈರುಳ್ಳಿ ಕೆ.ಜಿ.ಗೆ 130 ರೂ.ನಿಂದ 140ರ ವರೆಗೆ ಮಾರಾಟವಾಗಿದೆ. ಈಜಿಪ್ಟ್ ಈರುಳ್ಳಿಗೆ ರಖಂ ಆಗಿ ಕೆ.ಜಿ.ಗೆ 145 ರೂ., ಚಿಲ್ಲರೆಯಾಗಿ 155 ರೂ. ಇತ್ತು. ಎರಡನೇ ದರ್ಜೆ ಈರುಳ್ಳಿಗೆ ರಖಂ 135 ರೂ., ತೀರಾ ಸಣ್ಣ ಗಾತ್ರದ ಈರುಳ್ಳಿಗೆ 80 ರೂ. ಇತ್ತು.
ಉಡುಪಿಗೆ ಈಜಿಪ್ಟ್ ಈರುಳ್ಳಿ
ಉಡುಪಿ: ನಗರದ ಮಾರುಕಟ್ಟೆಗೆ ರವಿವಾರ ಈಜಿಪ್ಟ್ ಈರುಳ್ಳಿ ಆವಕವಾಗಿದ್ದು, ಹಳೆ ಈರುಳ್ಳಿ ದರ ಇಳಿದಿದೆ. ಅದು ಕೆ.ಜಿ.ಗೆ 130 ರೂ., ಹೊಸತು 110 ರೂ., ಸಣ್ಣ ಗಾತ್ರದ್ದು 80ರಿಂದ 90 ರೂ., ಈಜಿಪ್ಟ್ ಈರುಳ್ಳಿ 125 ರೂ.ನಂತೆ ಮಾರಾಟವಾಗಿದೆ.
ಈರುಳ್ಳಿ ಅಭಾವ: ಖರೀದಿಗೆ ಪೇಟೆಗೆ ಧಾವಿಸುತ್ತಿರುವ ಜನತೆ
ಕುಂದಾಪುರ: ಈರುಳ್ಳಿ ಬೆಲೆ ಏರಿಕೆಯಿಂದಾಗಿ ಗ್ರಾಮೀಣ ಭಾಗಗಳ ಅಂಗಡಿಗಳಲ್ಲಿ ದಾಸ್ತಾನು ಅಭಾವ ಉಂಟಾಗಿದ್ದು, ಸಿದ್ದಾಪುರ, ಹಾಲಾಡಿ, ಬಸೂÅರು ಮತ್ತಿತರ ಕಡೆಗಳ ಜನರು ಈರುಳ್ಳಿಗಾಗಿ ಕುಂದಾಪುರಕ್ಕೆ ಧಾವಿಸುತ್ತಿದ್ದಾರೆ.
ಗ್ರಾಮಾಂತರ ಪ್ರದೇಶದ ಸಣ್ಣಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ಸಿಗುತ್ತಿಲ್ಲ. ಬೆಲೆ ಜಾಸ್ತಿಯಿದ್ದರೂ ಅನಿವಾರ್ಯ ವಾಗಿರುವುದರಿಂದ ಹತ್ತಾರು ಕಿ.ಮೀ. ದೂರದ ಕುಂದಾಪುರ ಪೇಟೆಗೆ ಬರುತ್ತಿದ್ದಾರೆ. ಗ್ರಾಹಕರಿಗೆ ಇದರಿಂದ ವಾಹನ ಸಂಚಾರ ಶುಲ್ಕ ಹೆಚ್ಚುವರಿ ಹೊರೆಯಾಗುತ್ತಿದೆ.
ಇಲ್ಲಿ ಕೆಜಿಗೆ 150 ರೂ. ನಿಂದ 160 ರೂ.ವರೆಗೆ ಮಾರಾಟವಾಗುತ್ತಿದೆ. ಸಣ್ಣ ಈರುಳ್ಳಿ ಬೆಲೆಯೂ ಏರಿಕೆಯಾಗಿದ್ದು 120 ರೂ.ನಿಂದ 130 ರೂ.ವರೆಗೆ ಇದೆ.
ಒಂದು ಈರುಳ್ಳಿಗೆ 60 ರೂ.!
2-3 ದಿನಗಳಿಂದ ಕುಂದಾಪುರದಲ್ಲೂ ಟರ್ಕಿ ಈರುಳ್ಳಿ ಬಿಕರಿಯಾಗುತ್ತಿದೆ. ಆದರೆ ಅದು ಅಷ್ಟೇನೂ ರುಚಿಕರ ಅಲ್ಲ ಎನ್ನುವ ಕಾರಣಕ್ಕೆ ಬೇಡಿಕೆ ಇಲ್ಲ. ಇದು ದೊಡ್ಡ ಗಾತ್ರದ್ದಾಗಿದ್ದು, 2 ಈರುಳ್ಳಿ ಒಂದು ಕೆಜಿಯಷ್ಟು ಇರುತ್ತದೆ. ಅಂದರೆ ಒಂದು ಈರುಳ್ಳಿಗೆ 60ರಿಂದ 70 ರೂ.! ಗ್ರಾಹಕರು ಈರುಳ್ಳಿ ಖರೀದಿಸುತ್ತಾರೆಯೋ ಇಲ್ಲವೋ ಎನ್ನುವ ಗೊಂದಲ ಮತ್ತು ಹೊಸ ಈರುಳ್ಳಿಯಲ್ಲಿ ಹೆಚ್ಚಿನ ಭಾಗ ಹಾಳಾಗಿರುತ್ತದೆ ಎನ್ನುವ ಆತಂಕದಿಂದ ಕುಂದಾಪುರದಲ್ಲೂ ವ್ಯಾಪಾರಿಗಳು ಈರುಳ್ಳಿಯ ದಾಸ್ತಾನು ಇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.