ಬಿಸಿಲ ಬೇಗೆ: ನೊರೆ ಹಾಲಿನ ಹೊಳೆಯೀಗ ಕ್ಷೀಣ

Team Udayavani, Sep 22, 2018, 10:26 AM IST

22-sepctember-3.jpg

ಸುಳ್ಯ : ಮೂರು ವಾರಗಳ ಹಿಂದೆ ಮೈದುಂಬಿ ಧುಮ್ಮಿಕ್ಕಿ ಹರಿದು ನೋಡುಗರ ಮನ ಸೆಳೆಯುತ್ತಿದ್ದ ಜಲಪಾತದ ಒಡಲಿನ ಜಲಲ ಜಲಧಾರೆ ಕ್ಷೀಣಿಸಿದೆ..! ಬಿಸಿಲಿನ ತೀವ್ರತೆಗೆ ಕಾಡಿನಂಚಿನ ಹಲವು ಜಲಪಾತಗಳು ತನ್ನ ವಯ್ನಾರದಿಂದ ವಿಮುಖಗೊಂಡಿವೆ. ಮಳೆಗಾಲದ ಪ್ರೇಕ್ಷಣಿಯ ಸ್ಥಳವಾಗಿ ಮನಸ್ಸಿಗೆ ಆಹ್ಲಾದ ಮೂಡಿಸುವ ಹತ್ತಾರು ಜಲಪಾತಗಳು ತಾಲೂಕಿನಲ್ಲಿ ಇವೆ. ಝುಳು-ಝುಳು ನಿನಾದದೊಂದಿಗೆ ನೊರೆ ಹಾಲಿನ ಹೊಳೆ ರೂಪ ಪಡೆದು ಜನಾಕರ್ಷಣೆಯ ಕೇಂದ್ರವಾಗಿ ಗಮನ ಸೆಳೆಯುವುದು ಇಲ್ಲಿನ ವಿಶೇಷ.

ಬಿಸಿಲ ಬೇಗೆ
ಕಾಡಂಚಿನಿಂದ ಇಳಿದು ಬರುವ ಮಳೆ ನೀರು, ಒರತೆ ನೀರಿನ ಜತೆಗೆ ಮಿಳಿತಗೊಂಡು ಮಳೆಗಾಲದ ಆಕರ್ಷಣೆ ಕೇಂದ್ರವಾಗುತ್ತಿದ್ದ ಜಲಪಾತಕ್ಕೆ ಈಗ ಬಿಸಿಲ ಬೇಗೆ ತಟ್ಟಿದೆ. ಗುಡ್ಡದಂಚಿನಿಂದ ಇಳಿದು ಬರುವ ಸಣ್ಣ ಜಲಪಾತಗಳಲ್ಲಿ ಕಲ್ಲು ಬಂಡೆಗಳು ಮಾತ್ರ ಗೋಚರಿಸುತ್ತಿವೆ. ಸುಳ್ಯ, ಕೊಡಗು, ಮಲೆನಾಡ ಅಂಚಿನಲ್ಲಿರುವ ಚಾಮಡ್ಕ, ದೇವರಕೊಲ್ಲಿ, ಲೈನ್ಕಜೆ, ನಿಡ್ಯಮಲೆ, ಕಾಂತಬೈಲು, ಕಲ್ಯಾಳ, ಮೂಕಮಲೆ, ಹೊಸಗದ್ದೆ, ಜಾಕೆ, ಪಳಂಗಾಯ, ಬಿಳಿಮಲೆ, ಸೋಣಂಗೇರಿ, ಕೆಮನಬಳ್ಳಿ ಮೊದಲಾದ ಜಲಪಾತಗಳು ಮಳೆಗಾಲದಲ್ಲಿ ಚಾರಣಿಗರ ನೆಚ್ಚಿನ ತಾಣವಾಗಿತ್ತು.

ಬಂಡೆಗಳಷ್ಟೇ ಗೋಚರ
ಈ ಜಲಪಾತಗಳಲ್ಲಿ ಹರಿಯುವ ನೀರಿನ ಪ್ರಮಾಣ ಶೇ. 90ರಷ್ಟು ಬತ್ತಿ ಹೋಗಿದೆ. ಸಣ್ಣ ಒರತೆಯ ಹರಿವಷ್ಟೆ ಉಳಿದಿದೆ. ಬಿಸಿಲು ಬೇಗೆ ಇದೇ ರೀತಿಯಾಗಿ ಮುಂದುವರಿದರೆ ಸೆಪ್ಟಂಬರ್‌ ತಿಂಗಳ ಕೊನೆಯಲ್ಲಿಯೇ ಬರೀ ಬಂಡೆಗಳನ್ನಷ್ಟೇ ಕಾಣುವಂತಾಗಬಹುದು ಎಂದು ಹೇಳುತ್ತಾರೆ ಸೋಣಂಗೇರಿ ಫಾಲ್ಸ್‌ ವೀಕ್ಷಿಸಿದ ಕೀರ್ತನ್‌ ಸುಳ್ಯ.

ಒರತೆ ನೀರಿಲ್ಲ..!
ಕಾಡಂಚಿನಲ್ಲಿ ಬಿರು ಬೇಸಗೆಯಲ್ಲಿಯೂ ಒರತೆ ನೀರು ಇರುತ್ತದೆ. ನೀರ ಸೆಲೆ ಬತ್ತುವುದು ಕಡಿಮೆ. ಈ ಬಾರಿ ಅದು ಕಾಣುತ್ತಿಲ್ಲ. ಅಂತರ್ಜಲಕ್ಕೆ ಮಳೆ ನೀರು ಇಳಿಯದ ಕಾರಣ ನೀರು ಒರತೆ ರೂಪದಲ್ಲಿ ಜಿನುಗುತ್ತಿಲ್ಲ. ಘಟ್ಟ ಪ್ರದೇಶದಲ್ಲಿ ನೆಲ ಒಡೆದು ಬೇಸಗೆ ಭೀಕರತೆಗೆ ಸಾಕ್ಷಿ ಆದಂತೆ ಇಲ್ಲಿಯೂ ಆಗುವ ಅಪಾಯದ ಮುನ್ಸೂಚನೆ ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞರು. ಭೂಮಿ ಮೇಲೆ ಎಷ್ಟೇ ಬಿಸಿಲು- ಶಾಖವಿದ್ದರೂ ನೀರು ಈ ಪ್ರಮಾಣದಲ್ಲಿ ಆವಿಯಾದ ಉದಾಹರಣೆಗಳಿಲ್ಲ. ಕಾಡು ನಾಶ, ಕಾಂಕ್ರೀಟ್‌ ಕಾಮಗಾರಿಗಳು, ಜಲ ಮಾರ್ಗಗಳ ನಾಶವೂ ಒಂದು ಕಾರಣ. ಪ್ರಕೃತಿಯ ಸಹಜ ರಚನೆಗಳಿಗೆ ಮಾನವನ ಅಡ್ಡಿ ಮತ್ತೊಂದು ಪ್ರಮುಖ ಕಾರಣ.

ಸ್ಥಿತಿ ತದ್ವಿರುದ್ಧ 
ಇತ್ತೀಚಿನ ಕೆಲ ವರ್ಷಗಳಲ್ಲಿ ನವೆಂಬರ್‌ ತನಕವೂ ಜಲಪಾತದಲ್ಲಿ ನೀರಿನ ಹರಿವಿತ್ತು. ಒರತೆ ರೂಪದ ನೀರಿನ ಹರಿವಾದರೂ ಇರುತ್ತಿತ್ತು. ಈ ಬಾರಿಯ ಸ್ಥಿತಿ ತದ್ವಿರುದ್ಧ ವಾಗಿದೆ ಎನ್ನುತ್ತಾರೆ ಮಹೇಶ್‌.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.