“ಸ್ಮಾರ್ಟ್‌ ಸಿಟಿ’ಯಾದರೂ ಪಾಲಿಕೆ ಸೇವೆಗಳು ಇನ್ನೂ ಡಿಜಿಟಲ್‌ ಆಗಿಲ್ಲ !


Team Udayavani, Nov 9, 2019, 4:40 AM IST

SS-26

ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜ್ವಲಂತ ನಾಗರಿಕ ಸಮಸ್ಯೆಗಳನ್ನು “ನಗರ ಸಮಸ್ಯೆ-ಜನರ ನಿರೀಕ್ಷೆ’ ಎಂಬ ಅಭಿಯಾನದ ಮೂಲಕ ರಾಜಕೀಯ ಪಕ್ಷಗಳು, 60 ವಾರ್ಡ್‌ಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಮುಂದಿಡುವ ಪ್ರಯತ್ನವನ್ನು “ಸುದಿನ’ ಮಾಡಿದೆ. ಆರು ದಿನಗಳಿಂದ ಟ್ರಾಫಿಕ್‌-ಪಾರ್ಕಿಂಗ್‌, ಫುಟ್‌ಪಾತ್‌, ಒಳಚರಂಡಿ, ಕುಡಿಯುವ ನೀರು, ತ್ಯಾಜ್ಯ ಸಹಿತ ನಗರ ಜನರ ಆದ್ಯತೆಯ ವಿಚಾರಗಳನ್ನು ಉಲ್ಲೇಖೀಸಲಾಗಿದೆ. ಪಾಲಿಕೆಯಲ್ಲಿ ಮುಂದೆ ಅಧಿಕಾರ ಹಿಡಿಯುವ ಜನಪ್ರತಿನಿಧಿಗಳು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವತ್ತ ತಮ್ಮ ಬದ್ಧತೆ, ಉತ್ತರದಾಯಿತ್ವ ತೋರಿಸುತ್ತಾರೆ ಎನ್ನುವ ಆಶಯದೊಂದಿಗೆ ಈ ಅಭಿಯಾನ ಮುಕ್ತಾಯಗೊಳ್ಳುತ್ತಿದೆ.

ಮಹಾನಗರ: ಸ್ಥಳಿಯಾಡ ಳಿತಗಳು ಆಯಾ ಭಾಗದ ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನು ಕಲ್ಪಿಸುವ ಜತೆಗೆ ಇದೀಗ ಆಡಳಿತ ವ್ಯವಸ್ಥೆಯಲ್ಲಿಯೂ ಸುಧಾರಿತ ತಂತ್ರಜ್ಞಾನ ಅಳವಡಿಕೆಯಾಗಿ ನಾಗರಿಕ ಸೇವೆಗಳು ಜನರ ಕೈಬೆರಳ ತುದಿಯಲ್ಲೇ ಸಿಗುವಂತೆ ಇರಬೇಕು. ಆದರೆ ಪಾಲಿಕೆ ಆಡಳಿತ ಯಂತ್ರವು ಈ ನಿಟ್ಟಿನಲ್ಲಿ ಬಹಳ ಹಿಂದೆ ಬಿದ್ದಿದ್ದು, ಆನ್‌ಲೈನ್‌ ಸಹಿತ ನಗರವಾಸಿಗಳಿಗೆ ಅನುಕೂಲ ಕಲ್ಪಿಸುವ ಯಾವುದೇ ಅತ್ಯಾಧುನಿಕ ಸೇವಾ ಸೌಕರ್ಯಗಳಿಗೆ ಅಪ್‌ಡೇಟ್‌ ಆಗಿಲ್ಲ ಎನ್ನುವುದು ವಾಸ್ತವ.

ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ಸೇವೆಗಳು ಆನ್‌ಲೈನ್‌ ಮೂಲಕ ಜನರಿಗೆ ಸಿಗು ವಂತೆ ಮಾಡುವುದಕ್ಕೆ ಒತ್ತು ನೀಡುವುದು ಮುಂದಿನ ಬಾರಿ ಅಧಿಕಾರ ವಹಿಸಿಕೊಳ್ಳುವ ಪಕ್ಷಗಳು ಗಮನಹರಿಸಬೇಕಿದೆ. ಏಕೆಂದರೆ, ಆಡಳಿತ ನಡೆಸುವ ನೇತಾರರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸದ ಕಾರಣದಿಂದ ಈಗಲೂ ಜನರು ತಮ್ಮ ಕೆಲಸಗಳಿಗಾಗಿ ಪಾಲಿಕೆಗೆ ಅಲೆದಾಡುವ ಪ್ರಮೇಯ ತಪ್ಪಿಲ್ಲ. ಮಂಗಳೂರಿನಲ್ಲಿ ಸ್ಮಾರ್ಟ್‌ ನಗರ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಕಾರಣದಿಂದ ಎಲ್ಲ ವ್ಯವಸ್ಥೆಗಳು ಆನ್‌ಲೈನ್‌ ಆಗಲಿ ಎಂಬುದು ಎಲ್ಲರ ನಿರೀಕ್ಷೆ.

ನೀರಿನ ಶುಲ್ಕ, ಖಾತಾ ಬದಲಾವಣೆ, ಖಾತಾ ನೋಂದಣಿ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ 10 ಸೇವೆಗಳನ್ನು ಆನ್‌ಲೈನ್‌ ಮೂಲಕ ವ್ಯವಹರಿ ಸಬಹುದು ಎಂದು ಪಾಲಿಕೆ ಹೇಳಿತ್ತು. ಆದರೆ ಅದಾವುದೂ ಪೂರ್ಣಮಟ್ಟದಲ್ಲಿ ಜಾರಿಯಾಗಿಲ್ಲ. ನಾಗರಿಕ ಕೇಂದ್ರಿತ ವ್ಯವಸ್ಥೆ ಇಲ್ಲಿ ಅನುಷ್ಠಾನವಾಗಿಲ್ಲ.

ಆನ್‌ಲೈನ್‌ ಸೇವೆಗೆ ಮರುಜೀವ ಅಗತ್ಯ
ಪ್ರಸ್ತುತ ತೆರಿಗೆ ಪಾವತಿ, ನೀರಿನ ಬಿಲ್‌, ಪುರಭವನ ಬಾಡಿಗೆ ಸಹಿತ ಬಹುತೇಕ ಸೇವೆಗಳಿಗಾಗಿ ಜನರು ಪಾಲಿಕೆ ಕಚೇರಿ, ಮಂಗಳೂರು ಒನ್‌ ಅಥವಾ ಬ್ಯಾಂಕ್‌ಗಳಿಗೆ ತೆರಳಬೇಕಾಗಿದೆ. ಅಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಆನ್‌ಲೈನ್‌ ಸೇವೆಗೆ ಮರುಜೀವ ನೀಡುವ ಅಗತ್ಯವಿದೆ. ಜತೆಗೆ ನಗರದ ಆಯ್ದ ಭಾಗದಲ್ಲಿ ಮಾತ್ರ ಇರುವ ಮಂಗಳೂರು ಒನ್‌ ಸೇವೆಯನ್ನು ಪ್ರತೀ ವಾರ್ಡ್‌ನಲ್ಲಿ ಅಥವಾ 5-10 ವಾರ್ಡ್‌ ಗಳಿಗೆ ಸೀಮಿತಗೊಳಿಸಿ ವಿಸ್ತರಿಸುವ ಅಗತ್ಯವೂ ಇದೆ.

ಸಮರ್ಪಕ ಅನುಷ್ಠಾನವಾಗಿಲ್ಲ
ಸ್ವಯಂಚಾಲಿತ ಆನ್‌ಲೈನ್‌ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇದರ ಬಳಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ 2018-19ರ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದರಂತೆ ಯೋಜನೆ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ಅನುಷ್ಠಾನ ಮಾತ್ರ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ಈಗಲೂ ಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳಲ್ಲಿ ಕೇಬಲ್‌ ಕೊಳವೆ, ಓಎಫ್‌ಸಿ ಮುಂತಾದ ಜಾಲಗಳನ್ನು ರಸ್ತೆ ಅಗೆಯುವ ಮೂಲಕ ಹಾಕುವುದಾದರೆ ಸಂಬಂಧಪಟ್ಟವರು ಪಾಲಿಕೆ/ಸ್ಥಳೀಯ ಸಂಸ್ಥೆಗೆ ಅರ್ಜಿ ಹಾಕಬೇಕು.

ನಿಗದಿತ ಮೊತ್ತ ಪಾವತಿಸಬೇಕು. ಕಾಮಗಾರಿಯಾದ ಬಳಿಕ ಅಗೆದ ರಸ್ತೆಯನ್ನು ಸರಿಪಡಿಬೇಕು ಎಂಬ ನಿಯಮವಿದೆ. ಆದರೆ ಇದಾವುದೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ನಗರದ ಯಾವ ಭಾಗದಲ್ಲಿ ಯಾರು ರಸ್ತೆ ಅಗೆಯುತ್ತಾರೆ? ಯಾಕೆ ಅಗೆಯುತ್ತಾರೆ? ಮುಚ್ಚುವವರು ಯಾರು? ಹೀಗೆ ಯಾವ ಮಾಹಿತಿಯೂ ಇಲ್ಲ.

ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತಂದರೆ, ಕೇಬಲ್‌, ಕೊಳವೆ, ಒಎಫ್‌ಸಿ ಮುಂತಾದ ಜಾಲಗಳನ್ನು ಅಳವಡಿಸಲು ರಸ್ತೆಗಳನ್ನು ಆಗೆಯುವ ಮುಂಚಿತವಾಗಿ ಸಂಬಂಧಪಟ್ಟ ಸಂಸ್ಥೆಗಳು ಪಾಲಿಕೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ರಸ್ತೆ ಅಗೆಯುವ ಉದ್ದೇಶ, ಸ್ಥಳ, ಅಳತೆ ಬಗ್ಗೆ ಮಾಹಿತಿ ನೀಡಿ ಗೂಗಲ್‌ ಮ್ಯಾಪಿಂಗ್‌ ಸ್ಥಳ ಪಿನ್‌ ಮಾಡಬೇಕು. ರಸ್ತೆ ಅಗೆತದ ಬಂದ ಅರ್ಜಿಗಳನ್ನು ಆಯಾಯ ವಾರ್ಡ್‌ಗಳ ಸಹಾಯಕ ಎಂಜನಿಯರ್‌ಗೆ ರವಾನಿಸಲಾಗುತ್ತದೆ. ಅವರು ಸ್ಥಳ ಪರಿಶೀಲಿಸಿ ಅನುಮತಿ ಅಥವಾ ನಿರಾಕರಣೆಯ ಬಗ್ಗೆ ನಿರ್ಧರಿಸಿ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಾರೆ. ಅದರ ಆಧಾರದಲ್ಲಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಸ್ಥಳೀಯ ಸಹಾಯಕ ಎಂಜಿನಿಯರ್‌, ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದರೆ ಸ್ವಯಂಚಾಲಿತವಾಗಿ ಡಿಮಾಂಡ್‌ ನೋಟೀಸ್‌ ಸೃಷ್ಟಿಯಾಗಲಿದೆ. ನಿಗದಿತ ಶುಲ್ಕ ಪಾವತಿಸಿದ ಬಳಿಕ ಅನುಮತಿ ದೊರೆಯಲಿದೆ.

ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಅಧಿಕಾರಿಗಳು ಪ್ರಮಾಣ ಪತ್ರ ನೀಡುತ್ತಾರೆ. ಅಗೆದ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿ¤ಪಡಿಸದಿದ್ದರೆ ಸಂಬಂಧಪಟ್ಟವರ ವಿರುದ್ದ ಕ್ರಮ ಜರಗಿಸಲಾಗುತ್ತದೆ. ಸದ್ಯ ಇಂತಹ ವ್ಯವಸ್ಥೆಯೇ ಪಾಲಿಕೆಯಲ್ಲಿಲ್ಲ.

ಬಿಬಿಎಂಪಿ ಆ್ಯಪ್‌ ಮಂಗಳೂರಿಗೂ ಬರಲಿ
ಬೆಂಗಳೂರಿನಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ “ಸಹಾಯ ಆ್ಯಪ್‌’ ಇದೆ. ಇದರಲ್ಲಿ ಸಾರ್ವಜನಿಕರು ಘನತ್ಯಾಜ್ಯ ನಿರ್ವಹಣೆ, ರಸ್ತೆ ಅವ್ಯವಸ್ಥೆ ಮುಂತಾದ ಸಮಸ್ಯೆಗಳ ಬಗ್ಗೆ ದೂರು ನೀಡುವ ವ್ಯವಸ್ಥೆ ಇದೆ. ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ದೂರು ದಾಖಲಾದ ಸಮಸ್ಯೆಗಳನ್ನು 12 ತಾಸುಗಳೊಳಗೆ ಪರಿಹರಿಸಬೇಕು ಎಂಬ ನಿಯಮ ಇದೆ. ಇದರಲ್ಲಿ ಗಣನೀಯ ಪ್ರಮಾಣದಲ್ಲಿ ದೂರುಗಳು ದಾಖಲಾಗುತ್ತಿದ್ದು, ಕಾಲಮಿತಿಯಲ್ಲಿ ಬಗೆಹರಿಸಬೇಕು ಎಂಬ ಕಾರಣಕ್ಕಾಗಿ ಸೂಕ್ತ ಕ್ರಮಗಳನ್ನು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕೈಗೊಳ್ಳುತ್ತಿದೆ. ಇದು ಮಂಗಳೂರಿನಲ್ಲಿ ಜಾರಿಯಾದರೆ ನಾಗರಿಕ ಸೇವೆ ಸುಲಭವಾಗಲು ಸಾಧ್ಯ.

ಖಾಲಿ ಇದೆ ನೂರಾರು ಹುದ್ದೆಗಳು!
ಮಹಾನಗರ ಪಾಲಿಕೆಗೆ ಒಟ್ಟು 1,725 ಹುದ್ದೆಗೆ ಮಂಜೂರಾತಿ ದೊರಕಿದೆ. ಈ ಪೈಕಿ ಸುಮಾರು 700ರಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಪರಿಣಾಮವಾಗಿ 900ಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ. ನಿವೃತ್ತಿಗೊಳ್ಳುವ ಸ್ಥಾನಕ್ಕೂ ಹೊಸ ನೇಮಕಾತಿ ನಿಧಾನವಾಗುತ್ತಿದೆ. ಬಹುತೇಕ ಅಧಿಕಾರಿಗಳಿಗೆ ಪ್ರಭಾರ ಹುದ್ದೆಗಳನ್ನೂ ನೀಡಲಾಗಿದೆ. ಮೊದಲೇ ಸಿಬಂದಿ ಕೊರತೆಯಿಂದ ಬಸವಳಿದ ಸಿಬಂದಿಗೆ “ನಿಯೋಜನೆ’ ಸೇವೆ ಮತ್ತಷ್ಟು ಒತ್ತಡ ತರಿಸುತ್ತಿದೆ.

ಪರಿಣಾಮವಾಗಿ ಸಾರ್ವಜನಿಕರಿಗೆ ಪಾಲಿಕೆ ಸೇವೆಗಳು ಸೂಕ್ತಕಾಲದಲ್ಲಿ ಸಿಗುತ್ತಿಲ್ಲ ಎಂಬ ಅಪವಾದ ಎದುರಾಗಿದೆ. ಇದನ್ನು ತೊಡೆದುಹಾಕುವ ನಿಟ್ಟಿನಲ್ಲಿ , ಜನರ ನಂಬಿಕೆ ಉಳಿಸಲು ಆಡಳಿತಕ್ಕೆ ಬರುವ ಹೊಸ ಪಕ್ಷಕ್ಕೆ ಮಹತ್ತರ ಜವಾಬ್ದಾರಿಯಿದೆ.

- ದಿನೇಶ್‌ ಇರಾ

ಟಾಪ್ ನ್ಯೂಸ್

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

accident2

Gangolli: ಸ್ಕೂಟರ್‌ – ಬೈಕ್‌ ಢಿಕ್ಕಿ; ಗಾಯ

ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Congress Session: ತಿರುಚಿದ ದೇಶದ ನಕ್ಷೆ ಬಳಸಿದ್ದು ನಾಚಿಕೆಗೇಡು: ಬಿಜೆಪಿ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.