ಸ್ಮಾರ್ಟ್ ಕನಸಿನ ಮಹಾನಗರ ಪಾಲಿಕೆ ಹುದ್ದೆಗಳೆಲ್ಲ ಖಾಲಿ ಖಾಲಿ !
Team Udayavani, Jul 26, 2017, 8:00 AM IST
ಮಹಾನಗರ: ಸ್ಮಾರ್ಟ್ ಸಿಟಿ ಎಂಬ ಅಭಿಧಾನಕ್ಕೆ ಭಾಜನವಾದ ಮಹಾನಗರ ಪಾಲಿಕೆಯಲ್ಲಿ 1,173 ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಯಾಗಿದ್ದರೂ, ಭರ್ತಿ ಮಾಡುವ ಬಗ್ಗೆ ಸರಕಾರ ಕಾಳಜಿ ವಹಿಸಿಲ್ಲ.
ಪರಿಣಾಮವಾಗಿ ಪಾಲಿಕೆಯ ಬಹುತೇಕ ಕುರ್ಚಿಗಳು ಬಿಕೋ ಎನ್ನುತ್ತಿವೆ. ಸಾಲು ಸಾಲು ಪದವಿ ಪಡೆದಿದ್ದರೂ “ಕೆಲಸವಿಲ್ಲ’ ಎಂಬ ಸಿದ್ಧ ಉತ್ತರ ಸಿಗುವ ಕಾಲವಿದು. ಇಷ್ಟಿದ್ದರೂ, ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ನಡೆಯದಿರುವುದು ಅಚ್ಚರಿ ಮೂಡಿಸಿದೆ.
ಪಾಲಿಕೆಗೆ ಒಟ್ಟು 1,725 ಹುದ್ದೆಗೆ ಮಂಜೂರಾತಿ ದೊರಕಿದೆ. ಈ ಪೈಕಿ 552 ಹುದ್ದೆಗಳು ಭರ್ತಿಯಾಗಿದ್ದು, 76 ನಿಯೋಜಿತ ಹುದ್ದೆಗಳು. ಪರಿಣಾಮ ವಾಗಿ 1173 ಹುದ್ದೆಗಳು ಖಾಲಿ ಇವೆ. “ಹುದ್ದೆ ಭರ್ತಿ ಮಾಡಿಕೊಡಿ’ ಎಂದು ಪಾಲಿಕೆ ಪರಿಪರಿಯಾಗಿ ಮನವಿ ಮಾಡಿದರೂ ಸರಕಾರ ಮಾತ್ರ ಸುಮ್ಮನಿದೆ.
ಇದರಿಂದ ಇರುವ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಅಧಿಕವಾಗಿದೆ. ಕಡತ ವಿಲೇವಾರಿಗೂ ಪರದಾಡುವ ಪ್ರಮೇಯ ಎದುರಾಗಿದೆ.
“ಡಿ’ ಗ್ರೂಪ್ ನೌಕರರ ಮಂಜೂರಾತಿ ಹುದ್ದೆಗಳು 1087 ಇದ್ದು, ಇದರಲ್ಲಿ ಕೇವಲ 331 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇಲ್ಲಿ 15 ಹುದ್ದೆಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಲಾಗಿದೆ.
ಉಳಿದ 756 ಹುದ್ದೆಗಳು ಖಾಲಿ ಇವೆ. “ಎ’ ಗ್ರೇಡ್‌ನಲ್ಲಿ 31 ಹುದ್ದೆಗಳಿದ್ದರೂ, 10 ಹುದ್ದೆಗಳು ಖಾಲಿ ಇವೆ. “ಬಿ’ ಗ್ರೇಡ್‌ನಲ್ಲಿ 35 ಹುದ್ದೆಗಳು ಮಂಜೂರಾಗಿದ್ದು, 15 ಹುದ್ದೆಗಳು ಮಾತ್ರ ಭರ್ತಿಯಾಗಿವೆ. “ಸಿ’ ಗ್ರೇಡ್‌ನಲ್ಲಿ 572 ಹುದ್ದೆಗಳ ಪೈಕಿ 387 ಹುದ್ದೆಗಳು ಇನ್ನೂ ಖಾಲಿಯಾಗಿವೆ.
ಲೋಡರ್, ವಾಲ್Ì ಮ್ಯಾನ್, ಯುಜಿಡಿ ಸಹಾಯಕ, ಡಾಟಾ ಎಂಟ್ರಿ ಆಪರೇಟರ್, ಹೆಲ್ತ್ ಇನ್ಸ್‌ಪೆಕ್ಟರ್, ಸ್ಟೆನೋಗ್ರಾಫರ್, ವರ್ಕ್ ಇನ್ಸ್‌ಪೆಕ್ಟರ್, ಹಿರಿಯ ಚಾಲಕ ಸಹಿತ ಅನೇಕ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ.
ಯುಜಿಡಿ ಹೆಲ್ಪರ್ ವಿಭಾಗಕ್ಕೆ 99 ಹುದ್ದೆಗಳು ಮಂಜೂರಾಗಿದ್ದರೂ, ಅಷ್ಟೂ ಖಾಲಿ ಇವೆ.
ರಾಜ್ಯ ಹಾಗೂ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದಾಗ “ಪಾಲಿಕೆಯಲ್ಲಿ ಹುದ್ದೆಗಳೆಲ್ಲ ಖಾಲಿ ಬಿದ್ದಿವೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ಖಾಲಿ ಹುದ್ದೆಗಳು ಇರುವು ದರಿಂದ ಕೆಲಸ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಇರುವ ಅಧಿಕಾರಿಗಳು ಒತ್ತಡ ಅನುಭವಿಸುತ್ತಿದ್ದಾರೆ. ಪರಿಹಾರ ತೋರಿಸಬೇಕಾದ ಸರಕಾರ ಮೌನವಾಗಿದೆ ಎಂದು ಆರೋಪಿಸಿದ್ದರು. ಆದರೆ, ಈಗ ರಾಜ್ಯ ಹಾಗೂ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತವೇ ಇದ್ದರೂ ಪರಿಸ್ಥಿತಿ ಸುಧಾರಣೆ ಗೊಂಡಿಲ್ಲ ಎನ್ನುತ್ತಾರೆ ನಾಗರಿಕರು.
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಶಾಲಾ ವಾಹನ ಸುರಕ್ಷತೆ; ಪಾಲಕರಿಗೆ ಚಿಂತೆ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.