ಕದ್ರಿ ಪಾರ್ಕ್ ರಸ್ತೆಗೆ ‘ಸ್ಮಾರ್ಟ್ ರೋಡ್’ ಸ್ಪರ್ಶ !
Team Udayavani, Oct 4, 2018, 10:54 AM IST
ಮಹಾನಗರ: ನಗರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಕದ್ರಿ ಪಾರ್ಕ್, ಸಂಗೀತ ಕಾರಂಜಿ ಪ್ರದೇಶವನ್ನು ಜನಾಕರ್ಷಣೆಯ ತಾಣವಾಗಿಸುವ ನಿಟ್ಟಿನಲ್ಲಿ ಪಾರ್ಕ್‌ನ ಮುಂಭಾಗದ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ‘ಸ್ಮಾರ್ಟ್ ರೋಡ್’ ಆಗಿ ಅಭಿವೃದ್ಧಿಪಡಿಸಲು ಸರಕಾರ ಮುಂದಾಗಿದೆ.
ಕದ್ರಿ ಪಾರ್ಕ್ ಮುಂಭಾಗ ಒಟ್ಟು 12 ಕೋ.ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ರೋಡ್ ಕಾಮಗಾರಿ ನಡೆಯಲಿದೆ. ನಗರದಲ್ಲಿಯೇ ಮಾದರಿಯಾಗಿ ಈ ರಸ್ತೆ ರೂಪುಗೊಳ್ಳಲಿದೆ. ಈ ಕುರಿತಂತೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಬುಧವಾರ ನಗರದಲ್ಲಿ ತಿಳಿಸಿದ್ದಾರೆ.
‘ಸೆಂಟ್ರಲ್ ಕಮಾಂಡ್ ಸೆಂಟರ್’
ನಂತೂರು ಪದುವ ಹೈಸ್ಕೂಲ್‌ನಿಂದ ಸರ್ಕಿಟ್‌ಹೌಸ್‌ವರೆಗೆ ಸ್ಮಾರ್ಟ್‌ರೋಡ್ ಆಗಿ ಪರಿವರ್ತನೆ ಗೊಳ್ಳಲಿದೆ. ಇರುವ ರಸ್ತೆ ಸ್ವಲ್ಪ ವಿಸ್ತಾರ ಹಾಗೂ ಸುಂದರ ರೂಪ ಪಡೆಯಲಿದೆ.
ರಸ್ತೆಯ ಮಧ್ಯ ಭಾಗದಲ್ಲಿ ಆಕರ್ಷಕ ಹಾಗೂ ಮನ ಸೆಳೆಯುವ ಗಾರ್ಡನಿಂಗ್ ಮಾಡಲಾಗುತ್ತದೆ. ಈ ರಸ್ತೆಯ ಕೇಬಲ್‌ಗಳೆಲ್ಲ ಫುಟ್‌ಪಾತ್‌ನ ಕೆಳಭಾಗದಲ್ಲಿ ಸಾಗಲಿವೆ. ಎಲ್ಲ ತಂತಿಗಳು ಅಂಡರ್‌ಗ್ರೌಂಡ್‌ನಲ್ಲಿರಲಿವೆ. ಎಲ್ಲೂ ಕೂಡ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಸುಸಜ್ಜಿತ ‘ಸೆಂಟ್ರಲ್ ಕಮಾಂಡ್ ಸೆಂಟರ್’ ಕಾರ್ಯಾಚರಿಸಲಿದೆ. ಸ್ಮಾರ್ಟ್ ರೋಡ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಅಳವಡಿಸಿ ಕಸದ ತೊಟ್ಟಿ, ಸ್ವಯಂಚಾಲಿತ ತ್ಯಾಜ್ಯ ನಿರ್ವಹಣಾ ವಾಹನ, ಇ-ಟಾಯ್ಲೆಟ್, ಸಿಸಿ ಕೆಮರಾ ಅಳವಡಿಸಿದ ಟ್ರಾಫಿಕ್ ವ್ಯವಸ್ಥೆ, ಬಸ್ ಟ್ರ್ಯಾಕಿಂಗ್ ವ್ಯವಸ್ಥೆ, ವೈಫೈ ಕೇಂದ್ರ, ಮಾಹಿತಿ ಬೋರ್ಡ್, ವಾಕ್ ವೇ ವ್ಯವಸ್ಥೆ ಇರಲಿದೆ. ರಸ್ತೆ ಅಕ್ಕ ಪಕ್ಕ ಹಸಿರ ಹೊದಿಕೆ, ಎಲ್‌ಇಡಿ, ಸ್ಮಾರ್ಟ್ ಬಸ್ ನಿಲ್ದಾಣ, ಕಿಯೋಸ್ಕ್ ಸೆಂಟರ್‌ಗಳು, ಬಸ್, ವಿಮಾನ, ರೈಲಿನ ಸಮಯದ ವಿವರ ಸೇರಿದಂತೆ ಎಲ್ಲವೂ ಹೈ ಫೈ ರೀತಿಯಲ್ಲಿ ದೊರೆಯಲಿದೆ. ರಸ್ತೆಯ ಎರಡೂ ಬದಿಯಲ್ಲಿ ಸುಸಜ್ಜಿತ ಹಾಗೂ ಆಕರ್ಷಕ ಶೈಲಿಯಲ್ಲಿ ಅಂಗಡಿ, ಮಳಿಗೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಪ್ರವಾಸೋದ್ಯಕ್ಕೆ ಪೂರಕ ರೀತಿಯಲ್ಲಿ ಆ ಮಳಿಗೆಗಳು ಇರಲಿವೆ.
ಸಂಚಾರ ನಿರ್ಬಂಧ
ಸ್ಮಾರ್ಟ್ ರೋಡ್ ಆದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಸ್ಮಾರ್ಟ್ ರೋಡ್‌ನಲ್ಲಿ ಜನರು ನಡೆದುಕೊಂಡು ಹೋಗಲು ಮಾತ್ರ ಅವಕಾಶವಿರುತ್ತದೆ. ಆದರೆ, ಕದ್ರಿ ಪಾರ್ಕ್ ಮುಂಭಾಗದಲ್ಲಿ ಕೆಲವು ಮನೆ ಇರುವ ಕಾರಣದಿಂದ ಅವರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಉಳಿದಂತೆ ಸ್ಮಾರ್ಟ್‌ರೋಡ್ ವ್ಯಾಪ್ತಿಯಲ್ಲಿ ಅಲ್ಲಿನ ಸೌಕರ್ಯಗಳನ್ನು ಸವಿಯುವ ಕಾರಣದಿಂದ ನಡೆದು ಕೊಂಡು ಹೋಗಲು ಅನುವು ಮಾಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ತಿಳಿಸಿದ್ದಾರೆ.
12 ಕೋ.ರೂ. ಮೀಸಲು
ಕದ್ರಿ ಪಾರ್ಕ್ ಮುಂಭಾಗದ ರಸ್ತೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್ ರೋಡ್ ಆಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 12 ಕೋ.ರೂ.ಗಳನ್ನು ಮೀಸಲಿಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದೊಂದು ಅಮೂಲಾಗ್ರ ಬದಲಾವಣೆಯಾಗಲಿದೆ.
– ಯು.ಟಿ.ಖಾದರ್,
ನಗರಾಭಿವೃದ್ಧಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.