ಆದರ್ಶ ಗುಣಗಳಿಂದ ಸಮಾಜ ಬದಲಾವಣೆ
Team Udayavani, Nov 25, 2017, 3:23 PM IST
ನಗರ : ಯೇಸುಕ್ರಿಸ್ತರ ಕರೆಗೆ ಓಗೊಟ್ಟು ಅವರ ಅನುಯಾಯಿ ಆಗುವುದೆಂದರೆ ಅದು ಪಾವಿತ್ರ್ಯದ ಕಡೆಗೆ ಸಾಗಲು ನೀಡಿದ ಆಹ್ವಾನ. ಅದರಂತೆ ಯೇಸು ಕ್ರಿಸ್ತರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ, ಕುಟುಂಬದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಹೇಳಿದರು.
ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಪುತ್ತೂರು ಸಂತ ಪೌಲರ ವಲಯ ಚರ್ಚ್ ಪಾಲನ ಪರಿಷತ್ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಸಭಾಂಗಣದಲ್ಲಿ ನಡೆದ ಪುತ್ತೂರು ವಲಯಕ್ಕೆ ಸಂಬಂಧಪಟ್ಟ ಹತ್ತು ಚರ್ಚ್‌ಗಳ ಕಿರು ಕ್ರೈಸ್ತ ಸಮುದಾಯದ ಪುತ್ತೂರು ವಲಯ ಸಮ್ಮೇಳನದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಜಾತ್ಯತೀತ ಧರ್ಮದ ಮುಖಮುದ್ರೆ
ಜಾತ್ಯತೀತ ಎಂಬುದು ನಮ್ಮ ಧರ್ಮದ ಮುಖಮುದ್ರೆ. ಸಂವಿಧಾನದಲ್ಲಿ ಬದುಕಲು ಸಾಕಷ್ಟು ಅಡ್ಡಗೋಡೆಗಳಿವೆ. ಮತೀಯ ಚಿಂತನೆ, ಸ್ವಾರ್ಥ ಬದುಕು ಸಮಾಜದಲ್ಲಿ ಉತ್ತಮ ಬದುಕು ಸಾಗಿಸಲು ಕಷ್ಟವೆನಿಸಬಹುದು. ತನ್ನಲ್ಲಿನ ನಂಬಿಕೆ ಹಾಗೂ ಆಚರಣೆಯಲ್ಲಿ ವಿಶೇಷವಾಗಿ ಕ್ರೈಸ್ತ ಧರ್ಮದ ಧರ್ಮಸಭೆ ನಿಂತಿದೆ. ಯಾವುದೇ ಅನೀತಿಯಿಲ್ಲದೆ, ಭ್ರಷ್ಟಾಚಾರವಿಲ್ಲದೆ, ಪಕ್ಷಪಾತ ಮಾಡದೇ ಸೇವೆ ನೀಡುತ್ತಿರುವ ಸಮುದಾಯ ಎಂದರೆ ಅದು ಕ್ರೈಸ್ತ ಸಮುದಾಯ. ಧರ್ಮಸಭೆಯ ಪ್ರತಿ ಕುಟುಂಬಗಳು ಯೇಸುಕ್ರಿಸ್ತರ ಬದುಕಿನಂತೆ ಬಾಳಿದಾಗ ಯೇಸುಕ್ರಿಸ್ತರ ಕೃಪೆಯು ಅನುದಿನವೂ ನಮಗೆ ವರದಾನವಾಗಿ ಪ್ರಾಪ್ತಿಯಾಗಬಲ್ಲುದು ಎಂದರು.
ಇನ್ನಷ್ಟು ಸಕ್ರಿಯ
ಕಿರು ಕ್ರೈಸ್ತ ಸಮುದಾಯದ ಮಂಗಳೂರು ಡಯೋಸಿಸ್‌ನ ಪುತ್ತೂರು ವಲಯದ ಸಂಚಾಲಕ ಹಾಗೂ ಕೊಕ್ಕಡ ಚರ್ಚ್‌ನ ಪ್ರಧಾನ ಧರ್ಮಗರು ವಂ| ಫ್ರೆಡ್ರಿಕ್ ಮೊಂತೇರೋ ಮಾತನಾಡಿ, ಕ್ರೈಸ್ತ ಧರ್ಮಸಭೆಯ ಕೆಲ ಚರ್ಚ್‌ಗಳಲ್ಲಿ ಕಿರು ಕ್ರೈಸ್ತ ಸಮುದಾಯ ಸಕ್ರಿಯವಾಗಿಲ್ಲ. ಆದರೆ ಪುತ್ತೂರು ವಲಯಕ್ಕೆ ಸಂಬಂಧಪಟ್ಟ ಚರ್ಚ್ ಗಳಲ್ಲಿ ಕಿರು ಕ್ರೈಸ್ತ ಸಮುದಾಯ ಬಹಳ ಸಕ್ರಿಯವಾಗಿದೆ. ಆದ್ದರಿಂದ ಪ್ರತಿಯೊಂದು ಚರ್ಚ್‌ಗಳಲ್ಲಿ ಕಿರು ಕ್ರೈಸ್ತ ಸಮುದಾಯವನ್ನು ಸಕ್ರಿಯಗೊಳಿಸಲು ಪ್ರತಿಯೊಬ್ಬರೂ ಪ್ರಯತ್ನ ಪಡಬೇಕಾಗಿದೆ ಎಂದರು.
ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ. ರೊಡ್ರಿಗಸ್, ಧರ್ಮಭಗಿನಿಯರ ಪರವಾಗಿ ಭಗಿನಿ ಮೋನಿಕಾ ಉಪಸ್ಥಿತರಿದ್ದರು.
ಪಂಜ ಚರ್ಚ್‌ನ ಧರ್ಮಗುರು ವಂ| ಅನಿಲ್ ಡಿ’ಮೆಲ್ಲೋ, ಸುಳ್ಯ ಚರ್ಚ್‌ನ ಧರ್ಮಗುರು ವಂ| ವಿನ್ಸೆಂಟ್ ಡಿ’ಸೋಜಾ, ಸಂಪಾಜೆ ಚರ್ಚ್‌ನ ಧರ್ಮಗುರು ವಂ| ವಿನ್ಸೆಂಟ್ ಅನಿಲ್ ಮಿನೇಜಸ್, ನಿಡ್ಪಳ್ಳಿ ಚರ್ಚ್‌ನ ಧರ್ಮಗುರು ಜೋನ್ ಡಿ’ಸೋಜಾ, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಂ| ವಿಜಯ್ ಲೋಬೋ, ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ| ರಿತೇಶ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
ಕೊಕ್ಕಡ ಚರ್ಚ್ ಸಹಾಯಕ ಧರ್ಮಗುರು ವಂ| ಸ್ಟ್ಯಾನಿ ಫೆರ್ನಾಂಡಿಸ್ ನೇತೃತ್ವದಲ್ಲಿ ಪ್ರಾರ್ಥಿಸಿದರು. ಪುತ್ತೂರು ವಲಯದ ಹಾಗೂ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಆಲ್ಫ್ರೆಡ್ ಜಾನ್ ಪಿಂಟೋ ಸ್ವಾಗತಿಸಿ, ಮಾಯಿದೆ ದೇವುಸ್ ಚರ್ಚ್‌ನ ಕಿರು ಕ್ರೈಸ್ತ ಸಮುದಾಯದ ಸಂಚಾಲಕ ತೋಮಸ್ ಲೂವಿಸ್ ವಂದಿಸಿದರು. ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಪ್ರಶಾಂತ್ ಫೆರ್ನಾಂಡಿಸ್ ಸಮ್ಮಾನಿತ ಧರ್ಮಾಧ್ಯಕ್ಷರ ಸಮ್ಮಾನ ಪತ್ರವನ್ನು ವಾಚಿಸಿದರು. ವಲಯ ಕಾರ್ಯದರ್ಶಿ ಇನಾಸ್ ಗೊನ್ಸಾಲ್ವಿಸ್ ಬನ್ನೂರು ನಿರೂಪಿಸಿದರು.
ಸಾಕಷ್ಟು ಬದಲಾವಣೆ
ಕೆಲರಾಯಿ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಜೋಕಿಂ ಫೆರ್ನಾಂಡಿಸ್ ಮಾತನಾಡಿ, ಕಿರು ಕ್ರೈಸ್ತ ಸಮುದಾಯವು ಅಸ್ತಿತ್ವಕ್ಕೆ ಬಂದ ಮೇಲೆ ಧರ್ಮಸಭೆಯಲ್ಲಿ ಹಾಗೂ ಧರ್ಮಸಭೆಯ ಕ್ರೈಸ್ತ ವಿಶ್ವಾಸಿಗಳಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಕಿರು ಕ್ರೈಸ್ತ ಸಮುದಾಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಳಿಕ ಕ್ರೈಸ್ತ ವಿಶ್ವಾಸಿ ಭಕ್ತರಲ್ಲಿ ಪ್ರಬುದ್ಧತೆ ಬೆಳೆದಿದೆ. ಮಾತ್ರವಲ್ಲ ಯೇಸುಕ್ರಿಸ್ತರ ಸಾಕ್ಷಿಗಳಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.