ಸೋಶಿಯಲ್‌ ಮೀಡಿಯಾ ಮೊರೆಹೊಕ್ಕ ಗ್ರಾ.ಪಂ.

ಗ್ರಾಮೀಣಾಭಿವೃದ್ಧಿ ಯೋಜನೆ ಅಪ್‌ಡೇಟ್‌ಗಾಗಿ ಗ್ರಾ.ಪಂ.ನಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌!

Team Udayavani, Jun 1, 2019, 10:59 AM IST

social-media

ಮಂಗಳೂರು: ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಇನ್ನಷ್ಟು ಜನಸ್ನೇಹಿಯಾಗಿಸುವುದಕ್ಕಾಗಿ ಗ್ರಾ.ಪಂ.ಗಳು ಸಾಮಾಜಿಕ ಜಾಲತಾಣದತ್ತ ದೃಷ್ಟಿ ನೆಟ್ಟಿವೆ. ರಾಜ್ಯದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 200 ಸದಸ್ಯರಿರುವ ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚಿಸುವಂತೆ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗ್ರಾ.ಪಂ. ಪಿಡಿಒಗಳಿಗೆ ನಿರ್ದೇಶನ ನೀಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳಿನಿಂದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ ವಾಟ್ಸ್‌ಆ್ಯಪ್‌ ಗುಂಪುಗಳು ರಚನೆಯಾಗಲಿದ್ದು, ಸರಕಾರದ ಗ್ರಾಮೀಣಾಭಿವೃದ್ಧಿ ಮಾಹಿತಿ ಆಯಾ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಮೊಬೈಲ್‌ನಲ್ಲೇ ತಿಳಿದುಬರಲಿದೆ. ಆಯಾ ಗ್ರಾ.ಪಂ.ನಲ್ಲಿ ಆರಂಭವಾಗಲಿರುವ  ವಾಟ್ಸ್‌ಆ್ಯಪ್‌ ಗುಂಪಿಗೆ ಅಲ್ಲಿನ ಪಿಡಿಒ ಅಡ್ಮಿನ್‌.

ಪಂಚಾಯತ್‌ರಾಜ್‌ ಸಂಸ್ಥೆಗಳ ಚುನಾಯಿತ ಸದಸ್ಯರು, ಇಲಾಖಾಧಿಕಾರಿಗಳು, ಗ್ರಾ.ಪಂ. ಸಿಬಂದಿ ವರ್ಗ ಮತ್ತು ಇತರ ಭಾಗೀದಾರರಿಗೆ ಇಲಾಖೆಯ ಮಾಹಿತಿ ಬಿತ್ತರಿಸುವುದು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಆವಶ್ಯವಿದ್ದರೆ ಸೂಕ್ತ ಬದಲಾವಣೆ ತರುವುದಕ್ಕಾಗಿ ವಾಟ್ಸ್‌ಆ್ಯಪ್‌ ಗುಂಪು ರಚನೆ ಸರಕಾರದ ಉದ್ದೇಶ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆರ್‌ಡಿಪಿಆರ್‌ ಗ್ರಾಮವಾಣಿಯ ಮೊಬೈಲ್‌ ಸಂಖ್ಯೆಗೆ ಮೇ 31ರ ಒಳಗೆ ರಾಜ್ಯದ ಎಲ್ಲ ಪಿಡಿಒಗಳು ತಮ್ಮ ಹೆಸರು, ಹುದ್ದೆ, ಗ್ರಾ.ಪಂ., ತಾಲೂಕು, ಜಿಲ್ಲೆಯ ವಿವರಗಳನ್ನು ಮೆಸೇಜ್‌ ಮಾಡಬೇಕಿದೆ. ಇದು ಸ್ವೀಕೃತಿ ಆದ ಬಳಿಕ ಗ್ರಾಮವಾಣಿಯ ಪಟ್ಟಿಯಲ್ಲಿ ಸಂಬಂಧಿತ ಪಿಡಿಒಗಳು ಸೇರಲಿದ್ದಾರೆ. ಬಳಿಕ ಪ್ರತೀ ದಿನ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ವತ್ಛತೆ, ಕುಡಿಯುವ ನೀರು ಸೇರಿದಂತೆ ವಿವಿಧ ಕಾರ್ಯಕ್ರಮ, ಚಟುವಟಿಕೆಗಳ ಬಗ್ಗೆ ಮಾಹಿತಿ, ಅಪ್‌ಡೇಟ್‌ಗಳನ್ನು ಪಿಡಿಒಗಳು ಪಡೆಯಲಿದ್ದಾರೆ.
ಹೀಗೆ ತಮಗೆ ರವಾನೆಯಾಗುವ ಮಾಹಿತಿ, ಅಪ್‌ಡೇಟ್‌ಗಳನ್ನು ಅವರು ಗ್ರಾ.ಪಂ. ಮಟ್ಟದ ವಾಟ್ಸ್‌ಆ್ಯಪ್‌ ಗುಂಪಿನ ಮೂಲಕ ಮರುಪ್ರಸಾರ ಮಾಡಬೇಕು.

ಗುಂಪಿನಲ್ಲಿ ಯಾರ್ಯಾರು?
ಗ್ರಾ.ಪಂ. ವ್ಯಾಪ್ತಿಯ ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾಯಿತ ಸದಸ್ಯರು, ಗ್ರಾ.ಪಂ, ಮಟ್ಟದ ಸರಕಾರಿ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರ ವೃಂದ, ಯುವಕ-ಯುವತಿ ಮಂಡಳಿ, ವಿವಿಧ ಇಲಾಖೆಗಳ ಸಮಿತಿಗಳು, ವಿವಿಧ ಸಹಕಾರ ಸಂಘಗಳು, ಸರಕಾರೇತರ ಸಂಸ್ಥೆಗಳ ಸದಸ್ಯರು, ಸ್ವಚ್ಛಾಗ್ರಹಿಗಳು, ಸಮಾಲೋಚಕರ ಸಹಿತ ಇತರರನ್ನು ಒಳಗೊಂಡ ಕನಿಷ್ಠ 200 (ಗರಿಷ್ಠ ಮಿತಿಯಿಲ್ಲ) ಸದಸ್ಯರು ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಇರಲಿದ್ದಾರೆ.

“ಸ್ವತ್ಛ ಮೇವ ಜಯತೇ’ಗೆ ಅನುಕೂಲ
ಕೇಂದ್ರದ ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಜೂನ್‌ ತಿಂಗಳಿಡೀ ಗ್ರಾಮ ಮಟ್ಟದಲ್ಲಿ “ಸ್ವತ್ಛ ಮೇವ ಜಯತೇ’ ಎಂಬ ವಿಶೇಷ ಆಂದೋಲನ ನಡೆಯುವ ಸಂದರ್ಭದಲ್ಲಿ ಈ ವಾಟ್ಸ್‌ಆ್ಯಪ್‌ ಗುಂಪುಗಳು ಪರಿಣಾಮ ಬೀರಲಿವೆ. ಸದ್ಯ ಎಲ್ಲ ಪಿಡಿಒಗಳನ್ನು ಒಳಗೊಂಡಂತೆ ಗ್ರಾಮ ಸ್ವರಾಜ್‌, ಸ್ವತ್ಛ ಭಾರತ್‌ ಸೇರಿದಂತೆ ವಿವಿಧ ವಾಟ್ಸ್‌ಆ್ಯಪ್‌ ಗುಂಪುಗಳು ಜಿ.ಪಂ. ಸಿಇಒ ಅಡ್ಮಿನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ತಾಲೂಕು ಮಟ್ಟದಲ್ಲಿಯೂ ಇಂತಹ ಗುಂಪುಗಳಿದ್ದು, ಇದೇ ಮೊದಲ ಬಾರಿಗೆ ಗ್ರಾಮ ಮಟ್ಟದಲ್ಲಿ ಆರಂಭಿಸಲಾಗುತ್ತಿದೆ.

ವಾಟ್ಸ್‌ಆ್ಯಪ್‌ ಗುಂಪು ರಚನೆಗೆ ನಿರ್ದೇಶನ
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ, ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಗ್ರಾಮ ಮಟ್ಟದಲ್ಲಿ ಬಿತ್ತರಿಸಲು ವಾಟ್ಸ್‌ಆ್ಯಪ್‌ ಗುಂಪುಗಳನ್ನು ರಚನೆ ಮಾಡಲು ಸರಕಾರದಿಂದ ನಿರ್ದೇಶನ ಬಂದಿದೆ. ಗ್ರಾಮ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಕಲ್ಪನೆಯನ್ನು ಜಾರಿಗೊಳಿಸಲಾಗುತ್ತಿದೆ.
  ಡಾ| ಸೆಲ್ವಮಣಿ ಆರ್‌. ದ.ಕ. ಜಿ.ಪಂ. ಸಿಇಒ

ದಿನೇಶ್‌ ಇರಾ

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.