ಯುವ ಅಭ್ಯುದಯಕ್ಕೆ ಸಾಮಾಜಿಕ ಸಂಸ್ಥೆಗಳು ಬೆನ್ನೆಲುಬು: ಮುಂಡೋಡಿ
Team Udayavani, Jul 13, 2017, 2:20 AM IST
ಸುಳ್ಯ : ವ್ಯಕ್ತಿತ್ವದಲ್ಲಿ ವಿಕಸನವಾಗಿ ಸಾಮೂಹಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಂಘ ಸಂಸ್ಥೆಗಳು ಪ್ರೇರಣೆ ನೀಡುತ್ತವೆ. ಈ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಯುವಕರು ಅಭ್ಯುದಯ ಹೊಂದಲು ಸಾಮಾಜಿಕ ಸಂಸ್ಥೆಗಳು ಬೆನ್ನೆಲುಬಾಗಿವೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನುಡಿದರು.
ಸುಬ್ರಹ್ಮಣ್ಯದ ಮಹಾಮಯ ಸಭಾಂಗಣದಲ್ಲಿ ಮಂಗಳವಾರ ಜರಗಿದ ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ 2017 18ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣವನ್ನು ಉದ್ಘಾಟಿಸಿ ಮಾತನಾಡಿದರು. ಯುವ ಸಮುದಾಯಕ್ಕೆ ಸಾಮಾಜಿಕ ಮೌಲ್ಯಗಳ ಪಾಠವನ್ನು ಬೋಧಿಸುವ ಮೂಲಕ ಸಂಘಸಂಸ್ಥೆಗಳು ಅವರನ್ನು ಪರಿಪೂರ್ಣರಾಗಿಸುತ್ತಿವೆ ಎಂದರು.
ರೋಟರಿ ಜಿಲ್ಲಾ ನಿಯೋಜಿತ ರಾಜ್ಯಪಾಲ ಜೋಸೆಫ್ ಮ್ಯಾಥ್ಯೂ ಅವರು ಮಾತನಾಡಿ, ರೋಟರಿ ಸಂಸ್ಥೆಯು ಮಾನವೀಯ ಮೌಲ್ಯಗಳನ್ನು, ಧ್ಯೇಯೋದ್ದೇಶಗಳನ್ನು ಹಾಗೂ ನೈತಿಕ ಮಟ್ಟವನ್ನು ಕಾಯ್ದುಕೊಂಡಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ ಎಂದರು.
ಜೋಸೆಫ್ ಮ್ಯಥ್ಯೂ ಅವರು ನೂತನ ಅಧ್ಯಕ್ಷ ವೆಂಕಟೇಶ್ ಎಚ್.ಎಲ್. ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ಗಮನ ಅಧ್ಯಕ್ಷ ಬಾಲಕೃಷ್ಣ ಪೈ ಅವರು ನೂತನ ಅಧ್ಯಕ್ಷರಿಗೆ ರೋಟರಿ ಪಿನ್, ಗ್ಯಾವಲ್‌ಗಳನ್ನು ನೀಡಿದರು.
ಬಳಿಕ ನೂತನ ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು ಅಧಿಕಾರ ಸ್ವೀಕರಿಸಿದರು. ಬಳಿಕ ಪದಾಧಿಕಾರಿಗಳಾದ ಮಾಯಿಲಪ್ಪ ಸಂಕೇಶ, ಸೀತಾರಾಮ ಎಣ್ಣೆಮಜಲು,ಗಿರಿಧರ ಸ್ಕಂದ, ಸುದರ್ಶನ ಶೆಟ್ಟಿ, ವಿಶ್ವನಾಥ ನಡುತೋಟ, ಟಿ. ವೆಂಕಟೇಶ್, ಪ್ರಶಾಂತ್ ಕೋಡಿಬೈಲು, ಗಿರೀಶ್, ಭರತ್‌ನೆಕ್ರಾಜೆ, ರತ್ನಾಕರ ಎಸ್. ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭ ಕ್ಲಬ್ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 9 ಮಂದಿ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಗೌರವಿಸಿ ಪಾರಿತೋಷಕ ನೀಡಲಾಯಿತು. ಕ್ಲಬ್‌ನ ಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಅವರು ಐನೆಕಿದು ಸರಕಾರಿ ಶಾಲೆಗೆ ಕೊಡಮಾಡಿದ ಪ್ರಿಂಟರ್ ಅನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಳದ ಗೃಹ ರಕ್ಷಕ ದಳಕ್ಕೆ ಕ್ಲಬ್‌ನ ಸದಸ್ಯ ರ ಕಕ್ಕೆಪದವು ಕೊಡಮಾಡಿದ ರೈನ್ ಕೋಟುಗಳನ್ನು ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು. ಕುಲ್ಕುಂದದ ಬಡ ದ್ಯಾರ್ಥಿನಿಯೋರ್ವಳಿಗೆ ವಿದ್ಯಾಭ್ಯಾಸಕ್ಕಾಗಿ 8 ಸಾವಿರ ರೂ.ಸಹಾಯಧನ ನೀಡಲಾಯಿತು.
ಗಿರಿಧರ ಸ್ಕಂಧ ಸ್ವಾಗತಿಸಿ, ಶಿವರಾಮ ಯೇನೆಕಲ್, ಕಿಶೋರ್ ಕುಮಾರ್ ಕೂಜುಗೋಡು, ಸೋಮಶೇಖರ ನಾಯಕ್, ರತ್ನಾಕರ ಎಸ್., ಭರತ್ ನೆಕ್ರಾಜೆ, ವಸಂತ ಶೆಟ್ಟಿ ಪರಿಚಯಿಸಿದರು. ಜಯಪ್ರಕಾಶ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.ಜಯ ಕುಮಾರ್ ಅಮೈ ವರದಿ ವಾಚಿಸಿದರು. ಗೋಪಾಲ್ ಎಣ್ಣೆಮಜಲು ವಂದಿಸಿದರು. ರೋಟರಿ ಜಿಲ್ಲಾಆರ್‌ಸಿಸಿ ಚೇರ್‌ವೆುನ್ ರಾಮಕೃಷ್ಣ ಮಲ್ಲಾರ ನಿರೂಪಿಸಿದರು.
ಪತ್ರಿಕೆ ಬಿಡುಗಡೆ
ಕ್ಲಬ್‌ನ ಪೂರ್ವ ಕಾರ್ಯದರ್ಶಿ ರತ್ನಾಕರ ಎಸ್. ಸಂಪಾದಕತ್ವದ ರೋಟರಿ ಗೃಹ ಪತ್ರಿಕೆ “ರೋಟಾ ವಿಷನ್’ಅನ್ನು ನಿತ್ಯಾನಂದ ಮುಂಡೋಡಿ ಬಿಡುಗಡೆಗೊಳಿಸಿದರು.
ನೂತನ ಅಧ್ಯಕ್ಷ ವೆಂಕಟೇಶ್ ಎಚ್.ಎಲ್. ಅಧ್ಯಕ್ಷತೆ ವಹಿಸಿದ್ದರು. ಡಿಜಿಎನ್‌ಡಿ ಜೋಸೆಫ್ ಮ್ಯಾಥ್ಯೂ, ರೋಟರಿ ಅಸಿಸ್ಟೆಂಟ್ ಗವರ್ನರ್ ಶ್ವಾಸ್ ಶೆಣೈ, ವಲಯ ಸೇನಾನಿ ಲೋಕೇಶ್ ಬಿ.ಎನ್., ನಿಕಟಪೂರ್ವಾಧ್ಯಕ್ಷ ಗಿರಿಧರ್ ಸ್ಕಂಧ, ಸುಳ್ಯ ರೋಟರಿ ಅಧ್ಯಕ್ಷ ಜಿತೇಂದ್ರ ನಿಡ್ಯಮಲೆ, ನಿರ್ಗಮನ ಅಧ್ಯಕ್ಷ ಬಾಲಕೃಷ್ಣ ಪೈ, ನೂತನ ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.