ಗೋಸಂರಕ್ಷಣೆ ಮೂಲಕ ಸಮಾಜ ಸಂರಕ್ಷಣೆ
Team Udayavani, Jan 27, 2017, 8:28 AM IST
ವಿಟ್ಲ: ಮಂಗಳೂರಿನಲ್ಲಿ ಜ. 29ರಂದು ಸಂತರು, ಗೋವುಗಳು ಹಾಗೂ ಗೋಭಕ್ತರ ತ್ರಿವೇಣಿ ಸಂಗಮವಾಗಲಿದೆ. ಇದು ಸಂಸ್ಕೃತಿಯ ಉಳಿವಿನ ಭಾಗವಾಗಿದ್ದು, ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯವಾಗಿದೆ. ಗೋ ಸಂರಕ್ಷಣೆ ಮೂಲಕ ಸಮಾಜ ಸಂರಕ್ಷಣೆಯೂ ಆಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಗುರುವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಪ್ತ ರಾಜ್ಯ ಸಂಚರಿಸಿದ ಮಂಗಲ ಗೋಯಾತ್ರೆಯ ಆವಾಹನಾ ರಥ ಯಾತ್ರೆಯ ಸಂತ ಸುರಭಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಂಗಲಗೋಯಾತ್ರೆಯು ವಿಶ್ವ ಮಂಗಲ ಯಾತ್ರೆಯಾಗಿದೆ. ರಾಷ್ಟ್ರೋತ್ಥಾನಕ್ಕೆ ನಾಂದಿಯಾಗಿದೆ. ಸಪ್ತಸಾಗರದ ರೀತಿಯಲ್ಲಿ ಸಂತರು ಮತ್ತು ಸಮಾಜ ಸೇರುವ ಮೂಲಕ ಸಂಘಟನಾ ಶಕ್ತಿ ವಿಶ್ವರೂಪವನ್ನು ಪ್ರದರ್ಶಿಸಿ ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿ. ದೇಶಕ್ಕೆ ಮಂಗಲವನ್ನುಂಟು ಮಾಡಲಿ ಎಂದು ಆಶಿಸಿದರು.
ಬಾಳೆಕೋಡಿ ಶ್ರೀ ಕಾಶೀ ಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿದರು. ದತ್ತಾತ್ರೇಯ ಭಟ್ ಅವರಿಂದ ಪಂಚಗವ್ಯ ಪ್ರಾತ್ಯಕ್ಷಿಕೆ ನಡೆಯಿತು.
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು, ಆವಾಹನಾ ರಥಯಾತ್ರೆ ಜಿಲ್ಲಾ ಸಂಯೋಜಕ ಸತ್ಯಜಿತ್ ಸುರತ್ಕಲ್ ಮಾತನಾಡಿ ದರು. ಮಂಗಲಗೋಯಾತ್ರೆಯ ವಿಟ್ಲ ಸಮಿತಿ ಅಧ್ಯಕ್ಷ ಹಾಗೂ ವಿಟ್ಲ ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ ಅಧ್ಯಕ್ಷತೆ ವಹಿಸಿದ್ದರು.
ಸಂತ ಸೇವಕ ಸಮಿತಿಯ ಪ್ರಮುಖ ರಾದ ಎಲ್.ಎನ್. ಕೂಡೂರು, ಶೈಲಜಾ ಕೆ.ಟಿ. ಭಟ್, ಬಂಟ್ವಾಳ ತಾಲೂಕು ಮಂಗಲಗೋಯಾತ್ರೆಯ ಸಂಘಟನಾ ಕಾರ್ಯದರ್ಶಿ ಕಾಡೂರು ರಾಜಾರಾಮ ಭಟ್, ವಿಟ್ಲ ಮಂಗಲ ಗೋಯಾತ್ರೆ ಸಮಿತಿಯ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಭಟ್ ಪಡಾರು ಮತ್ತಿತರರು ಉಪಸ್ಥಿತರಿದ್ದರು.
ಮಂಗಲಗೋಯಾತ್ರೆಯ ಜಿಲ್ಲಾ ಸಂಯೋಜಕ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಸ್ವಾಗತಿಸಿ, ರವಿಪ್ರಕಾಶ್ ವಿಟ್ಲ ವಂದಿಸಿದರು. ಸುಬ್ರಹ್ಮಣ್ಯ ಭಟ್ ಸೇರಾಜೆ ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.