ಗೊಳಿಜೋರ: ಆರು ತಿಂಗಳು ಕಳೆದರೂ ಉರಿಯದ ಸೋಲಾರ್ ದೀಪ
Team Udayavani, Apr 24, 2019, 5:50 AM IST
ಕಿನ್ನಿಗೋಳಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಳಿಜೋರ ಪರಿಶಿಷ್ಟ ಜಾತಿ ಪಂಗಡದ ಕಾಲನಿಗೆ ಕಳೆದ ಆರು ತಿಂಗಳ ಹಿಂದೆ ಅಳವಡಿಸಿದ ಸೋಲಾರ್ ದೀಪಗಳು ಇನ್ನೂ ಉರಿಯುತ್ತಿಲ್ಲ. ಇದನ್ನು ಯಾವ ಯೋಜನೆಯಡಿ ಅಳವಡಿಸಲಾಗಿದೆ ಎಂಬ ಬಗ್ಗೆ ಗ್ರಾ.ಪಂ. ಅಧಿಕಾರಿ, ಜನ ಪ್ರತಿನಿಧಿಗಳಿಗೆ
ಮಾಹಿತಿಯೇ ಇಲ್ಲ.
ಈ ಬಗ್ಗೆ ಸಂಬಂಧ ಪಟ್ಟ ಗ್ರಾ.ಪಂ. ಸದಸ್ಯ ಚಂದ್ರ ಶೇಖರ್ ಅವರ ಬಳಿ ಕೇಳಿದಾಗ, ಸೋಲಾರ್ ದೀಪವನ್ನು ಯಾವ ಯೋಜನೆಯಡಿ ಅಳವಡಿಸಲಾಗಿದೆ ಎಂಬ ಬಗ್ಗೆ ಗ್ರಾಮ ಪಂಚಾಯತ್‌ಗೆ ಮಾಹಿತಿ ಇಲ್ಲ. ಈ ದೀಪ ಅಳವಡಿಸಿರುವ ಬಗ್ಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ನಲ್ಲೂ ನಿಖರ ಮಾಹಿತಿ ಇಲ್ಲ ಎಂದಿದ್ದಾರೆ.
ಪರಿಶೀಲನೆ ನಡೆಸಲಾಗುವುದು
ಗೋಳಿಚೋರದಲ್ಲಿ ಅಳವಡಿಸಿರುವ ಸೋಲಾರ್ ದೀಪ ಇನ್ನೂ ಉರಿಯದೇ ಇರುವ ಬಗ್ಗೆ ಗ್ರಾ.ಪಂ. ಸದಸ್ಯರಿಂದ ಪಂಚಾಯತ್‌ಗೆ ಮಾಹಿತಿ ಸಿಕ್ಕಿದೆ. ಗ್ರಾ.ಪಂ. ವತಿಯಿಂದ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಗ್ರಾಮ ವ್ಯಾಪ್ತಿಯಲ್ಲಿ ಸರಕಾರದ ಯೋಜನೆಯಡಿ ಕಾಮಗಾರಿ ನಡೆಸಿದ್ದರೆ ಪಂಚಾಯತ್ ಗಮನಕ್ಕೆ ಬರಬೇಕಿತ್ತು. ಆದರೆ ಕೇಂದ್ರ ಸರಕಾರದ ಕೆಲವು ಇಲಾಖೆಗಳ ಯೋಜನೆಗಳು ಮಂಜೂರಾದರೆ ಮಾತ್ರ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಅದರ ನಿರ್ವಹಣೆ ಜವಾಬ್ದಾರಿಯೂ ನಮ್ಮದಲ್ಲ ಎಂದು ಕಿನ್ನಿಗೋಳಿ ಗ್ರಾ.ಪಂ. ಪಿಡಿಒ ಅರು ಣ್ ಪ್ರದೀಪ್ ಡಿ’ಸೋಜಾ ತಿಳಿಸಿದ್ದಾರೆ.
ಫಲಕವನ್ನೂ ಅಳವಡಿಸಿಲ್ಲ
ಗೋಳಿಚೋರ ಪರಿಶಿಷ್ಟ ಕಾಲನಿಗೆ ಸೌರ ದೀಪ ಅಳವಡಿಸಿ ಆರು ತಿಂಗಳು ಕಳೆದರೂ ಯಾವ ಯೋಜನೆಯಡಿ, ಎಷ್ಟು ಅನುದಾನದಲ್ಲಿ ಇದನ್ನು ಅಳವಡಿಸಲಾಗಿದೆ ಎಂಬ ಬಗ್ಗೆ ಎಲ್ಲಿಯೂ ಫಲಕಗಳನ್ನು ಹಾಕಿಲ್ಲ. ಕಾಮಗಾರಿ ನಡೆಸಲು ಬಂದವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದುದರಿಂದ ಕಾಲನಿಯ ಜನರು ಅವರೊಂದಿಗೆ ಮಾಹಿತಿ ಕೇಳಲು ಹೋಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.