ಡಿ. 17: “ಸೋಲ್ಜರ್‌ಥಾನ್ ವಿಜಯ್ ರನ್, ಸೈಕ್ಲಿಂಗ್’
Team Udayavani, Dec 16, 2023, 2:18 PM IST
ಮಹಾನಗರ: ಪಾಕಿಸ್ಥಾನ ವಿರುದ್ಧ 1971ರಲ್ಲಿ ಭಾರತ ಜಯಶಾಲಿಯಾಗಿ 93,000 ಪಾಕಿಸ್ಥಾನಿ ಸೈನಿಕರು ಶರಣಾದ ಅತೀ ದೊಡ್ಡ ಗೆಲುವಿನ ಸವಿನೆನಪು ಹಾಗೂ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಸೋಲ್ಜರ್‌ಥಾನ್ ವಿಜಯ್ ರನ್ ಮತ್ತು ಸೈಕ್ಲಿಂಗ್ ಕಾರ್ಯಕ್ರಮ ಡಿ. 17ರಂದು ನಡೆಯಲಿದೆ.
ಫಿಟಿಸ್ತಾನ್-ಏಕ್ ಫಿಟ್ ಭಾರತ್ ಸಂಸ್ಥೆ ಭಾರತಾದ್ಯಂತ 240 ನಗರಗಳಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಓಟ ಮತ್ತು ಸೈಕ್ಲಿಂಗ್ ಕಾರ್ಯಕ್ರಮ ಕದ್ರಿ ಪಾರ್ಕ್ ಸಮೀಪದ ಹುತಾತ್ಮರ ಸ್ಮಾರಕ ವಾರ್ ಮೆಮೋರಿಯಲ್ ಬಳಿ ಬೆಳಗ್ಗೆ 6.15ಕ್ಕೆ ಪ್ರಾರಂಭವಾಗಿ ಏರ್‌ಪೋರ್ಟ್ ರಸ್ತೆಯ ಕಡೆಗೆ ಚಲಿಸಲಿದೆ. ಈ ಸಂಸ್ಥೆಯನ್ನು ಹುಟ್ಟು ಹಾಕಿದವರು ನಿವೃತ್ತ ಸೇನಾಧಿಕಾರಿ ಮೇಜರ್ ಡಾ|ಸುರೇಂದ್ರ ಪುನಿಯ.
ಓಟಗಾರರಿಗೆ 5 ಕಿ.ಮೀ. ಮತ್ತು ಸೈಕ್ಲಿಸ್ಟ್‌ಗೆ 10 ಕಿ.ಮೀ.ಗಳ ಒಟ್ಟು ದೂರವನ್ನು ನೀಡಲಾಗುತ್ತದೆ. ನೋಂದಾಯಿತ ಭಾಗವಹಿಸುವವರು ನಿವೃತ್ತ ಸೇನಾ ಜನರಲ್ ವಿ.ಕೆ.ಸಿಂಗ್ ಅವರು ಸಹಿ ಮಾಡಿದ ಟಿ-ಶರ್ಟ್, ಪದಕ ಮತ್ತು ಇ-ಪ್ರಮಾಣಪತ್ರವನ್ನು ಪಡೆಯುತ್ತಾರೆ. 2 ಕಿ.ಮೀ. ಓಡಲು, ನಡೆಯಲು ಬಯಸಿದರೆ ಅವರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಂಡದ ರಿತೇಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.