ಟೋಲ್ ಉಳಿಸಲು ಘನ ವಾಹನ ತಡೆಯೇ ನಿರ್ನಾಮ!
Team Udayavani, Dec 8, 2017, 9:54 AM IST
ಸುರತ್ಕಲ್ : ಹೆದ್ದಾರಿ 66ರಲ್ಲಿ ಮೂರು ಕಡೆ ಟೋಲ್ ನೀಡುವುದನ್ನು ತಪ್ಪಿಸಲು ಲಭ್ಯವಿರುವ ಒಳ ರಸ್ತೆಗಳನ್ನು ಬಳಸುವುದು ಅತಿಯಾಗಿದ್ದು, ಇದರಿಂದಾಗಿ ಎನ್‌ಐಟಿಕೆ ಸಮೀಪದ ರಸ್ತೆಯೊಂದರಲ್ಲಿ ಘನ ವಾಹನಗಳಿಗೆ ಹಾಕಿರುವ ತಡೆಬೇಲಿಯೇ ಮುರಿದು ಹೋಗಿದೆ.
ಸುರತ್ಕಲ್ ಶ್ರೀ ಸದಾಶಿವ ಮಹಾ ಗಣಪತಿ ದೇವಸ್ಥಾನ ಮಾರ್ಗವಾಗಿ ಎನ್ ಐಟಿಕೆ ವರೆಗೆ ಬೀಚ್ ಉದ್ದಕ್ಕೂ ಇತ್ತೀಚೆಗೆ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ಅಗಲ ಕಿರಿದಾಗಿದ್ದು, ಇಲ್ಲಿ ಲಘು ವಾಹನಗಳಿಗೆ ಮಾತ್ರ ಹೋಗಲು ಸಾಧ್ಯವಿದ್ದು, ಘನ ವಾಹನಗಳು ಪ್ರವೇಶಿಸದಂತೆ ಕಬ್ಬಿಣದ ತಡೆ ನಿರ್ಮಿಸಲಾಗಿತ್ತು. ಈಗ ಘನ ವಾಹನಗಳೂ ಟೋಲ್ ತಪ್ಪಿಸಲು ಈ ರಸ್ತೆಯಲ್ಲಿಯೇ ಸಾಗುತ್ತಿವೆ. ಹೆಚ್ಚಾಗಿ ಮೀನು ಸಾಗಾಟ ವಾಹನಗಳು, ಉಡುಪಿ ನೋಂದಣಿಯ ಘನ ವಾಹನಗಳು ಈ ರಸ್ತೆಯಾಗಿ ಮುಕ್ಕ ತಲುಪುತ್ತಿವೆ.
ಘನ ವಾಹನ ಓಡಾಟದಿಂದ ಈ ರಸ್ತೆ ಶಿಥಿಲಗೊಳ್ಳುತ್ತಿದೆ. ಕೇವಲ ಲಘು ವಾಹನಗಳ ಓಡಾಟಕ್ಕೆಂದೇ ಇದನ್ನು ನಿರ್ಮಿಸಲಾಗಿದ್ದು, ಘನ ವಾಹನಗಳ ಭಾರ ತಾಳಿಕೊಳ್ಳುವ ಶಕ್ತಿ ಈ ರಸ್ತೆಗಿಲ್ಲ. ಬೀಚ್ ಉದ್ದಕ್ಕೂ ಮಣ್ಣು ತುಂಬಿ ಎತ್ತರಗೊಳಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ರಸ್ತೆಯಿರುವ ಕೆಲವು ಕಡೆಗಳಲ್ಲಿ ಕುಗ್ಗಿ ಹೋಗಿರುವ ಅಪಘಾತವಾಗುವ ಸಾಧ್ಯತೆಯಿದೆ.
ಹೆಚ್ಚಾಗಿ ಪ್ರವಾಸಿಗಳು, ಎನ್‌ಐಟಿಕೆ ವಿದ್ಯಾರ್ಥಿಗಳು ಸೈಕ್ಲಿಂಗ್‌ಗಾಗಿ ಈ ರಸ್ತೆಯನ್ನು ಬಳಸುತ್ತಾರೆ. ಮಾತ್ರವಲ್ಲ ಹಿರಿಯರು ವಾಕಿಂಗ್ ಹಾಗೂ ವಾಯು ವಿಹಾರಕ್ಕಾಗಿ ಸಮುದ್ರ ದಂಡೆಗೆ ಬರುತ್ತಾರೆ. ಘನ ವಾಹನಗಳ ಅನಿಯಮಿತ ಓಡಾಟದಿಂದ ಇವರಿಗೂ ಅಪಾಯವಾಗುವ ಸಾಧ್ಯತೆ ಇದೆ.
ತತ್‌ಕ್ಷಣ ಸಂಚಾರ ವಿಭಾಗದ ಪೊಲೀಸರು ಇಲ್ಲಿನ ಘನ ವಾಹನ ತಡೆಯನ್ನು ಪುನಃ ನಿರ್ಮಿಸಿ ರಸ್ತೆಯು ಟೋಲ್ ತಪ್ಪಿಸಲು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಹಾಗೂ ರಸ್ತೆಯ ಸುರಕ್ಷೆಯನ್ನು ಕಾಯ್ದುಕೊಳ್ಳಬೇಕಿದೆ.
ಆಯುಕ್ತರಿಗೆ ಪತ್ರ ಬರೆಯಲಾಗಿದೆ
ಸದಾಶಿವ ಗಣೇಶ ದೇವಸ್ಥಾನದ ಬಳಿಯಿಂದ ಹಾದು ಹೋಗುವ ರಸ್ತೆಯಲ್ಲಿನ ಘನ ವಾಹನ ತಡೆಯನ್ನು ಪುನರ್ ನಿರ್ಮಿಸುವಂತೆ ಕೋರಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಇಲ್ಲಿ ಘನ ವಾಹನ ಓಡಾಟಕ್ಕೆ ಅನುಮತಿಯಿಲ್ಲ. ರಸ್ತೆಯ ಅಗಲ ಕಿರಿದಾಗಿದೆ. ಸುಂಕ ತಪ್ಪಿಸುವ ಉದ್ದೇಶದಿಂದ ವಾಹನಗಳು ಈ ಭಾಗದಲ್ಲಿ ಹೆಚ್ಚು ಓಡಾಟ ನಡೆಸಿ ಅಪಘಾತಕ್ಕೀಡಾದರೆ ಮತ್ತಷ್ಟು ಸಮಸ್ಯೆಯಾಗುತ್ತದೆ.
– ಮಂಜುನಾಥ್, ಇನ್‌ಸ್ಪೆಕ್ಟರ್ ಮಂಗಳೂರು ಉತ್ತರ ಸಂಚಾರ ಠಾಣೆ
ಉದ್ದೇಶವೇ ಅಡಿಮೇಲು
ಉಡುಪಿ ಮತ್ತು ದಕ್ಷಿಣ ಕನ್ನಡ ನೋಂದಣಿಯ ವಾಹನಗಳು ನಿತ್ಯ ಹಲವು ಬಾರಿ ಮಂಗಳೂರು ಉಡುಪಿ ನಡುವೆ ಸಂಚಾರಿಸುತ್ತವೆ. ಪ್ರತಿ ಬಾರಿಯೂ ಟೋಲ್ ನೀಡಬೇಕಾಗಿರುವುದರಿಂದ ಪ್ರವಾಸಿಗರ ಅನುಕೂಲಕ್ಕಾಗಿ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ಈಗ ಅದು ಟೋಲ್ ತಪ್ಪಿಸಲು ಬಳಕೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.