ರಸ್ತೆ, ಚರಂಡಿ ಸಮಸ್ಯೆಗೆ ಪರಿಹಾರ, ಗ್ರಾಮಸ್ಥರಿಂದಲೇ ಶ್ರಮದಾನ
Team Udayavani, Jul 1, 2018, 11:46 AM IST
ಪುನರೂರು : ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಕುಕ್ಕುದಕಟ್ಟೆಯಿಂದ ಕೆಳಗಿನ ಪುನರೂರು ಕಾಮತ್ ಮಿಲ್ಲು ಹಾಗೂ ಕಳೆಗಿನ ರಸ್ತೆಯ ಇಕ್ಕಲೆಯಲ್ಲಿ ಪೂದೆ ನಿರ್ವಹಣೆ ಹಾಗೂ ಚರಂಡಿ ಕಾಮಗಾರಿ ನಡೆಯದೆ ಬಾಕಿ ಉಳಿದು ನಿತ್ಯ ಸಂಚರಿಸುವ ವಾಹನಗಳಿಗೆ ಹಾಗೂ ಜನರಿಗೆ ಅಡಚಣೆಯಾಗಿತ್ತು. ಪಂಚಾಯತ್ ಕಾಮಗಾರಿಯನ್ನು ಕಾಯದೆ ಗ್ರಾಮಸ್ಥರು ಹಾಗೂ ಯುವಕರ ತಂಡ ಶ್ರಮದಾನದ ಮೂಲಕ ಬ್ಲಾಕ್ ಆಗಿದ್ದ ಮೋರಿ ಹಾಗೂ ಚರಂಡಿಯ ಹೂಳು ಎತ್ತಲಾಯಿತು.
ರಸ್ತೆಯ ಬದಿಯಲ್ಲಿ ಬೆಳೆದು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಮರದ ರಂಬೆ ಕೊಂಬೆ ಹಾಗೂ ಪೊದೆ ಗಿಡಗಂಟಿಗಳನ್ನು ಶ್ರಮದಾನ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡಲಾಯಿತು. ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ದೇವಾಡಿಗ, ಮಾಜಿ ಸದಸ್ಯ ದಿನೇಶ್ ರಾವ್, ಗ್ರಾಮದ ಹಿರಿಯರಾದ ಗೋಕುಲ್‌ದಾಸ್ ಕಾಮತ್, ಅರುಣ್ ಡಿ’ಸೋಜಾ, ಸಂತೋಷ್ ಶೆಟ್ಟಿ, ಪ್ರದೀಪ್ ಆಚಾರ್ಯ, ಅಂಗರಗುಡ್ಡೆ ರಾಮ ಭಜನ ಮಂದಿರದ ಅಧ್ಯಕ್ಷ ಜೀವನ್ ಶೆಟ್ಟಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.