ಮಣಿಪಾಲ್ ಕೊಂಕಣಿ ಆರೋಗ್ಯ ಕಾರ್ಡ್: ಸೂಚನೆ
Team Udayavani, Jul 25, 2017, 11:25 AM IST
ಮಂಗಳೂರು: ಶ್ರೀ ವೀರವೆಂಕಟೇಶ ಚಾರಿಟೆಬಲ್ ಟ್ರಸ್ಟ್, ಶ್ರೀ ವೆಂಕಟರಮಣ ದೇವಸ್ಥಾನ ಮಂಗಳೂರು, ಮಣಿಪಾಲ ವಿ.ವಿ. ಮತ್ತು ಡಾ| ಟಿಎಂಎ ಪೈ ಫೌಂಡೇಶನ್ ವತಿಯಿಂದ ನೀಡಲಾಗುವ ವಿಶೇಷ ಆರೋಗ್ಯ ಸುರಕ್ಷಾ ಕಾರ್ಡ್ ನವೀಕರಿಸಲು ಅರ್ಜಿ ಆಹ್ವಾನಿಸಲಾಗಿದೆ. ಹಿಂದಿನ ಕಾರ್ಡಿನ ಜೆರಾಕ್ಸ್ ಪ್ರತಿಯನ್ನು ಅರ್ಜಿ ಜತೆ ತಪ್ಪದೇ ನೀಡಬೇಕು. ಈ ಯೋಜನೆ ದ.ಕ., ಉಡುಪಿ, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಹಿಂದಿನ ವರ್ಷದ ಕಾರ್ಡ್ ಅವಧಿ ಸೆ. 30ರ ವರೆಗೆ ಇದ್ದು, ಹೊಸ ಕಾರ್ಡ್ ಮಾಡಲು ಅವಕಾಶವಿರುವುದಿಲ್ಲ. ಅರ್ಜಿ ಜತೆಗೆ ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಗೆ ಅನ್ವಯಿಸಿ ನಿಗದಿತ ದೇಣಿಗೆ ಪಾವತಿಸಬೇಕು. ಕುಟುಂಬದಲ್ಲಿ ಐದಕ್ಕಿಂತ ಹೆಚ್ಚು ಸದಸ್ಯರು ಇದ್ದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಕುಟುಂಬದ ಸದಸ್ಯರು ಓರ್ವ ಆದಲ್ಲಿ 500 ರೂ., ಇಬ್ಬರಿಗೆ 600 ರೂ., ಮೂವರಿಗೆ 700 ರೂ., ನಾಲ್ವರಿಗೆ 800 ರೂ. ಹಾಗೂ 5 ಮಂದಿಗೆ 900 ರೂ.ಗಳಾಗಿವೆ.
ಆರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯಂತೆ ಕಳೆದ ವರ್ಷ ಸುಮಾರು 40,000 ಜನರಿಗೆ ಈ ಸೌಲಭ್ಯ ವಿಸ್ತರಿಸಲಾಗಿದೆ. ಇದು ಕೇವಲ ಆರ್ಥಿಕ ದುರ್ಬಲ ವರ್ಗದವರಿಗೆ ಮಾತ್ರ ಸೀಮಿತವಲ್ಲ. ಈ ಕಾರ್ಡನ್ನು ಜನರಲ್, ಪ್ರೈವೆಟ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯಲು ಬಳಸಬಹುದು. ಕಾರ್ಡ್ ಹೊಂದಿದವರು ಹೊರರೋಗಿಯಾಗಿ ಉಚಿತ ವೈದ್ಯರ ಸಲಹೆಯೊಂದಿಗೆ ಸೂಚಿಸಿದ ಪರೀಕ್ಷೆಗಳಿಗೆ, ರಕ್ತ ಪರೀಕ್ಷೆ ಇತ್ಯಾದಿಗಳಿಗೆ ರಿಯಾಯಿತಿ ಕೂಡ ಲಭ್ಯವಿದೆ. ಈ ಯೋಜನೆಯಲ್ಲಿ ಅತ್ಯಂತ ರಿಯಾಯಿತಿ ದೇಣಿಗೆಯಲ್ಲಿ ಕುಟುಂಬಕ್ಕೆ 50,000 ರೂ. (ಷರತ್ತುಗಳು ಅನ್ವಯ) ಆರೋಗ್ಯ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ ಕುಟುಂಬದ ಯಾವುದೇ ಒಬ್ಬ ಸದಸ್ಯ ಅಪಘಾತದಲ್ಲಿ ಮರಣ ಹೊಂದಿದಲ್ಲಿ ಪ್ರತ್ಯೇಕ 50,000 ರೂ. ವರೆಗೆ ಪರಿಹಾರ ಒದಗಿಸಲಾಗುವುದು.
ಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ (ಸಂಜೆ 6ರಿಂದ 8ರ ವರೆಗೆ), ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಕೊಂಚಾಡಿ, ಶ್ರೀ ವೆಂಕಟರಮಣ ದೇವಸ್ಥಾನ ಡೊಂಗರಕೇರಿ; ಸುರತ್ಕಲ್: ಶ್ರೀ ಕಾಶೀಮಠ ಹಳೆ ರಸ್ತೆ; ಪಡುಬಿದ್ರಿ: ಶ್ರೀ ವೆಂಕಟರಮಣ ದೇವಸ್ಥಾನ; ಉಡುಪಿ: ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ; ಬ್ರಹ್ಮಾವರ: ಶ್ರೀ ವೆಂಕಟರಮಣ ದೇವಸ್ಥಾನ; ಕೋಟೇಶ್ವರ:
ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ; ಕುಂದಾಪುರ: ಶ್ರೀ ವೆಂಕಟರಮಣ ದೇವಸ್ಥಾನ; ಗಂಗೊಳ್ಳಿ: ಶ್ರೀ ವಿಠಲ ರುಕುಮಾಯಿ ದೇವಸ್ಥಾನ; ಮೂಡಬಿದಿರೆ: ಶ್ರೀ ವೆಂಕಟರಮಣ ದೇವಸ್ಥಾನ; ಕಾರ್ಕಳ: ಹಿತೈಷಿ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ ಕಾಂಪೌಂಡ್; ಬಂಟ್ವಾಳ: ಶ್ರೀ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನ; ಬಿ.ಸಿ.ರೋಡ್: ಗೀತಾಂಜಲಿ ಕಲ್ಯಾಣ ಮಂಟಪ; ಉಳ್ಳಾಲ: ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ; ಮೂಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನ; ಉಪ್ಪಿನಂಗಡಿ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ; ಬೆಳ್ತಂಗಡಿ: ಶ್ರೀ ವೆಂಕಟರಮಣ ದೇವಸ್ಥಾನ ಲಾೖಲ; ಉಜಿರೆ: ಶ್ರೀ ರಾಮ ಮಂದಿರ; ಗುರುಪುರ: ಶ್ರೀವರದರಾಜ ವೆಂಕಟರಮಣ ದೇವಸ್ಥಾನ; ಕುಮಟಾ: ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ರಥಬೀದಿ; ಮಾದನಗೇರಿ: ಶ್ರೀ ಸಿದ್ಧಿವಿನಾಯಕ ಮಹಾಲಸ ನಾರಾಯಣಿ ದೇವಸ್ಥಾನ; ಹಳದೀಪುರ: ವಿಶ್ವನಾಥ ಪೈ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ; ಅಂಕೋಲಾ: ಶ್ರೀ ವೀರ ವಿಠಲ ಯುವಕ ಮಂಡಳಿ ಮತಕೇರಿ; ಹೊನ್ನಾವರ: ಶ್ರೀ ರಾಮ ಮಂದಿರ; ಶಿರಸಿ: ಸುಧೀರ್ ಭಟ್, ಶ್ರೀ ಮಹಾವಿಷ್ಣು ಸೇವಾ ಸಮಿತಿ; ಕಾಪು: ಕೊಂಕಣಿ ಮಠ; ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನ; ಕಟಪಾಡಿ: ಶ್ರೀ ವೆಂಕಟರಮಣ ದೇವಸ್ಥಾನ; ಕಿನ್ನಿಗೋಳಿ: ಶ್ರೀ ರಾಮ ಮಂದಿರ; ಚೇಂಪಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ; ಮುಂಡ್ಕೂರು: ಶ್ರೀ ವಿಠೊಬ ದೇವಸ್ಥಾನ; ಸಿದ್ಧಾಪುರ: ಶ್ರೀ ವೆಂಕಟರಮಣ ದೇವಸ್ಥಾನ; ಹೆಬ್ರಿ: ಶ್ರೀ ರಾಮ ಮಂದಿರ; ಬೆಳ್ಮಣ್: ಜಿಎಸ್‌ಬಿ ಯುವಜನ ಸಭಾ; ಸಾೖಬ್ರಕಟ್ಟೆ: ಜಿಎಸ್‌ಬಿ ಸಭಾಭವನ; ವಿಟ್ಲ: ಶ್ರೀ ರಾಮ ಮಂದಿರ; ಶಿರ್ವ: ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ; ಉಪ್ಪುಂದ: ಆನಂದ ಭಟ್ಟ, ಮೂಡುಗಣಪತಿ ದೇವಸ್ಥಾನದ ಹತ್ತಿರ; ಪಾಣೆಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ; ಕೋಟ: ಶ್ರೀ ಕಾಶೀಮಠ; ಹೆಜಮಾಡಿ: ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ; ಸುಳ್ಯ ಶ್ರೀ ವೆಂಕಟರಮಣ ದೇವ ಮಂದಿರ; ಪುಂಜಾಲಕಟ್ಟೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳಲ್ಲಿ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಅರ್ಜಿ ಹಿಂದಿರುಗಿಸಲು ಆ. 5 ಕೊನೆಯ ದಿನ ಎಂದು ಟ್ರಸ್ಟ್ ಕಾರ್ಯದರ್ಶಿ ಟಿ. ಗಣಪತಿ ಪೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.