ಸೋಮೇಶ್ವರ: ನೀರು ಸಮುದ್ರ ಸೇರದೆ ಕೃತಕ ನೆರೆ
Team Udayavani, Oct 31, 2018, 10:39 AM IST
ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಅಳಿವೆಯಲ್ಲಿ ಹೂಳು ತುಂಬಿ ಹೊಳೆ ಸಮೀಪದ ಮನೆಗಳು ಕೃತಕ ನೆರೆ ಹಾವಳಿಗೀಡಾಗಿವೆ. ಅಳಿವೆ ಬಾಗಿಲಿನಲ್ಲಿ ಹೊಳೆಯ ನೀರು ಸಮುದ್ರಕ್ಕೆ ಹರಿದು ಹೋಗಲು ಅಳಿವೆ ಬಾಗಿಲಿನಲ್ಲಿ ತುಂಬಿರುವ ಹೂಳನ್ನು ತೆಗೆಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ತಲಪಾಡಿ ಕಡೆಯಿಂದ ಬಟ್ಟಪ್ಪಾಡಿ ಅಳಿವೆ ಮೂಲಕ ಸಮುದ್ರ ಸೇರುವಲ್ಲಿ ಮರಳು ತುಂಬಿದ ಹಿನ್ನೆಲೆಯಲ್ಲಿ ಹೊಳೆಯ ನೀರು ಹರಿದು ಹೋಗಲು ಸಾಧ್ಯವಾಗದೆ ಸ್ಥಳೀಯ ಮನೆಗಳು ಸೇರಿದಂತೆ ಕಾಲು ದಾರಿ, ರೈಲ್ವೇ ಅಂಡರ್‌ಪಾಸನ್ನು ಆವರಿಸಿದೆ.
ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಹೋಗುವ ಜನರು ತೊಂದರೆ ಅನುಭವಿಸುವಂತಾಯಿತು.
ಹೂಳು ತೆಗೆಯದೆ ಸಮಸ್ಯೆ ಪ್ರತೀ ವರ್ಷ ಮಳೆ ಕಡಿಮೆಯಾದಾಗ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಹೊಳೆ ಮತ್ತು ಸಮುದ್ರದ ಮರಳು ಮತ್ತು ಮಣ್ಣು ಮಿಶ್ರಿತ ಮರಳು ಬಟ್ಟಪ್ಪಾಡಿಯಲ್ಲಿ ಹೂಳಿನಂತೆ ತುಂಬಿ ನೀರು ಸಮುದ್ರ ಸೇರುವುದಕ್ಕೆ ತಡೆಯಾಗುತ್ತಿತ್ತು. ಈ ಸಂದರ್ಭ ಸೋಮೇಶ್ವರ ಗ್ರಾ.ಪಂ. ಹೂಳು ತೆಗೆಯುವ ಕಾರ್ಯವನ್ನು ಮಾಡುತ್ತಿತ್ತು. ಆದರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಪಂಚಾಯತ್ ಹೂಳು ತೆಗೆಯುವುದನ್ನು ಸ್ಥಗಿತಗೊಳಿ
ಸಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪಂಚಾಯತ್ ಮಾಹಿತಿ ನೀಡಿತ್ತು ಎಂದು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ ಮಾಹಿತಿ ನೀಡಿದ್ದಾರೆ.
ಮರಳುಗಾರಿಕೆ ಸ್ಥಗಿತದಿಂದ ಸಮಸ್ಯೆ
ಕಳೆದ ಹಲವು ದಿನಗಳಿಂದ ತಲಪಾಡಿ ಮತ್ತು ಸೋಮೇಶ್ವರ ಗ್ರಾ.ಪಂ.ನ ಗಡಿ ಭಾಗವಾದ ಬಟ್ಟಪ್ಪಾಡಿ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಮರಳುಗಾರಿಕೆ ಮಾಡುತ್ತಿದ್ದವರು ಅಳಿವೆ ಬಾಗಿಲಿನ ಮರಳನ್ನು ಖಾಲಿ ಮಾಡುತ್ತಿದ್ದರಿಂದ ಸಮಸ್ಯೆ ಇರಲಿಲ್ಲ. ಆದರೆ ವಾರದೆ ಹಿಂದೆ ಉಳ್ಳಾಲ ಪೊಲೀಸರು ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ಬಳಿಕ ಇಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದು, ಮರಳು ಅಳಿವೆ ಬಾಗಿಲಿನಲ್ಲಿ ಶೇಖರಣೆಗೊಂಡು ಈ ವ್ಯಾಪ್ತಿಯಲ್ಲಿ ಕೃತಕ ನೆರೆಯಾಗಿದೆ.
ಪ್ರತಿಭಟನೆ ಎಚ್ಚರಿಕೆ
ಅಳಿವೆ ಬಾಗಿನಲ್ಲಿ ಹೂಳು ತೆಗೆಯದಿದ್ದರೆ ಸೋಮೇಶ್ವರ ಗ್ರಾ.ಪಂ. ಎದುರು ಪ್ರತಿಭಟಿಸಲಾಗುವುದು ಎಂದು ಗಡಿನಾಡು ರಕ್ಷಣಾ ವೇದಿಕೆಯ ಸಿದ್ಧಿಕ್ ತಲಪಾಡಿ ತಿಳಿಸಿದ್ದಾರೆ.
ತಹಶೀಲ್ದಾರ್ ಭೇಟಿ
ಕೃತಕ ನೆರೆಯಾದ ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಳಿವೆ ಬಾಗಿಲಿನ ಹೂಳನ್ನು ತೆಗೆಯುವಂತೆ ಸಂಬಂಧ ಪಟ್ಟ ಇಲಾಖೆಗೆ ಆದೇಶ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.