ಮಿಸೆಸ್ ಇಂಡಿಯಾ ವರ್ಲ್ಡ್ ವೈಸ್‌ನಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ
Team Udayavani, Jul 25, 2017, 11:20 AM IST
ಮಂಗಳೂರು: ಹಾಟ್ ಮೊಂಡೆ ಸಂಸ್ಥೆ ನಡೆಸುವ ಮಿಸೆಸ್ ಇಂಡಿಯಾ ವರ್ಲ್ಡ್ ವೈಸ್‌ನ ಅಂತಿಮ ಸುತ್ತಿಗೆ ಮಂಗಳೂರಿನ ಸೌಜನ್ಯಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಆ. 5ರಂದು ಹೊಸದಿಲ್ಲಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಮಂಗಳೂರಿನಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಅವರಾಗಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಸೌಜನ್ಯಾ ಹೆಗ್ಡೆ, ಸ್ಪರ್ಧೆ ಹಿನ್ನೆಲೆಯಲ್ಲಿ ಜು. 27ರಿಂದ ಆ. 4ರವರೆಗೆ ವಿಯೆಟ್ನಾಂನಲ್ಲಿ ನಡೆಯುವ ಪೂರಕ ತರಬೇತಿಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ವಿಯೆಟ್ನಾಂನಲ್ಲಿ ಸ್ಪರ್ಧೆ
ವಿಯೆಟ್ನಾಂನಲ್ಲಿ ‘ಬ್ಯೂಟಿ ವಿತ್ ಹಾರ್ಟ್’ ಸೇರಿದಂತೆ 15 ವಿವಿಧ ಟೈಟಲ್‌ಗಳಿಗಾಗಿ 60 ಮಂದಿ ಸ್ಪರ್ಧಿಗಳ ನಡುವೆ ಸ್ಪರ್ಧೆ ಹಾಗೂ ಆಯ್ಕೆ ನಡೆಯಲಿದೆ. ಮಿಸೆಸ್ ಟಾಲೆಂಟ್ ಟೈಟಲ್‌ಗಾಗಿ ಒಂದು ನಿಮಿಷದ ಸ್ಪರ್ಧೆಯಲ್ಲಿ ನಾನು ದೇವಿಯ ಅವತಾರವನ್ನು ‘ಶಕ್ತಿ’ ಹೆಸರಿನಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದೇನೆ. ಸ್ಪರ್ಧೆಯ ಅಂತಿಮ ಸುತ್ತು ಆ. 5ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಮಂಗಳೂರಿನ ಎಂ. ಸದಾಶಿವ ಹೆಗ್ಡೆ ಹಾಗೂ ನಿಟ್ಟಡೆಗುತ್ತು ಸುಮತಿ ಹೆಗ್ಡೆ ಅವರ ಪುತ್ರಿಯಾಗಿರುವ ಸೌಜನ್ಯ ಹೆಗ್ಡೆ, ಬಾಲ್ಯದಿಂದಲೇ ಸೌಂದರ್ಯ ಸ್ಪರ್ಧೆ, ನೃತ್ಯ ಹಾಗೂ ಯಕ್ಷಗಾನಗಳ ಮೂಲಕ ಗಮನ ಸೆಳೆದವರು. ಕದ್ರಿ ನೃತ್ಯಾಲಯದಲ್ಲಿ ದಿ| ಕೃಷ್ಣರಾವ್ ಹಾಗೂ ಪುತ್ರ ವಿದ್ವಾನ್ ಪ್ರವೀಣ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ದಿ| ಕುಂಬಳೆ ಚಂದ್ರಶೇಖರ ಅವರಿಂದ ಯಕ್ಷಗಾನ ಅಭ್ಯಾಸದ ಜತೆಗೆ ಫಿಲ್ಮ್ ಡ್ಯಾನ್ಸ್, ಫೋಕ್ ಡ್ಯಾನ್ಸ್ ಹಾಗೂ ಫ್ರೀಸ್ಟೈಲ್ ಡ್ಯಾನ್ಸ್‌ಗಳನ್ನೂ ಕಲಿತಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಅನುಭವವನ್ನೂ ಹೊಂದಿದ್ದು, 1999ರಲ್ಲಿ ಮಿಸ್ ಕೋಸ್ಟಲ್, 2000ದಲ್ಲಿ ಪ್ಯಾಟಸಿ, 2001ರಲ್ಲಿ ಜೆಸಿ ಕ್ವೀನ್ ಹಾಗೂ ಕರಾವಳಿ 2002 ಮೊದಲಾದ ಕಿರೀಟಗಳನ್ನು ತನ್ನದಾಗಿಸಿಕೊಂಡಿದ್ದಾರೆ. ‘ಮಾಯಾಜಿಂಕೆ’ ಕನ್ನಡ ಚಲನಚಿತ್ರ ಹಾಗೂ ‘ಬೊಳ್ಳಿಲು’ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಪತಿ ಸುಧೀರ್ ಹೆಗ್ಡೆ ನೈಜೀರಿಯಾದಲ್ಲಿ ಪೆಪ್ಸಿ ಬಾಟ್ಲಿಗ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಸೌಜನ್ಯಾ ತಂದೆ ಸದಾಶಿವ ಹೆಗ್ಡೆ, ತಾಯಿ ಸುಮತಿ ಹೆಗ್ಡೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.