Congress ವಕ್ತಾರರಂತೆ ಎಸ್‌ಪಿ ಹೇಳಿಕೆ : ಹರೀಶ್‌ ಪೂಂಜ


Team Udayavani, Jun 3, 2024, 11:55 PM IST

Congress ವಕ್ತಾರರಂತೆ ಎಸ್‌ಪಿ ಹೇಳಿಕೆ : ಹರೀಶ್‌ ಪೂಂಜ

ಮಂಗಳೂರು: ಇತ್ತೀಚೆಗೆ ಪೊಲೀಸರು ನನ್ನ ಬಂಧನಕ್ಕೆ ಆಗಮಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಎಸ್‌ಪಿ ರಿಷ್ಯಂತ್‌ ಸಿ.ಬಿ. ಕಾಂಗ್ರೆಸ್‌ ವಕ್ತಾರರಂತೆ ಹೇಳಿಕೆ ನೀಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಆರೋಪಿಸಿದ್ದಾರೆ.

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿಯವರು ಕಾಂಗ್ರೆಸ್ಸಿಗರು ಮತ್ತು ಮುಖ್ಯಮಂತ್ರಿಯವರನ್ನು ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳಿಕೆ ನೀಡಿದ್ದಾರೆ. ಬಂಧಿಸಲು 3 ವಾಹನಗಳಲ್ಲಿ 15ಕ್ಕೂ ಅಧಿಕ ಪೊಲೀಸರು ಬಂದಿದ್ದರೂ ಎಸ್‌ಪಿ ಕೇವಲ ಮೂವರು ಬಂದಿದ್ದರು ಎಂದಿದ್ದಾರೆ. ಎಷ್ಟು ಪೊಲೀಸರು ಬಂದಿದ್ದರು ಎಂಬುದಕ್ಕೆ ಸಿಸಿ ಕೆಮರಾ ದಾಖಲೆಗಳಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮನೆಯಲ್ಲಿ ಜನ ಸೇರಿಸಿದ್ದಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು ಎಂದು ಎಸ್‌ಪಿ ಹೇಳಿದ್ದಾರೆ. ನನ್ನ ಮನೆಯಲ್ಲಿ ಸಂಸದರು., ಜಿ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು, ಇತರ ಸಾರ್ವಜನಿಕರಿದ್ದರು. ಎಲ್ಲ ಜನಪ್ರತಿನಿಧಿಗಳ ಮನೆಗಳಲ್ಲಿಯೂ ಜನ ಸೇರುತ್ತಾರೆ. ಹಾಗಾದರೆ ಎಲ್ಲರ ಮನೆಗೂ ಇದೇ ರೀತಿ ಪೊಲೀಸರನ್ನು ನಿಯೋಜಿಸಲಾಗುತ್ತದೆಯೇ? ಯಾವುದೇ ನೋಟಿಸ್‌ ನೀಡದೆ ಬಂಧಿಸಲು ಬಂದ ಪೊಲೀಸರು ರಾತ್ರಿ ಯವರೆಗೂ ದೌರ್ಜನ್ಯ ನಡೆಸಿದ್ದರು. ಎಸ್‌ಪಿ ನಡೆ ಅಕ್ಷಮ್ಯ ಎಂದರು.

ದೇಶದ ಎಲ್ಲಿಯೂ ಪೊಲೀಸ್‌ ಠಾಣೆಯ ಎದುರು ಜನತೆ ಪ್ರತಿಭ ಟನೆ ನಡೆಸಿಲ್ಲವೆ? ಪ್ರತಿಭಟನೆ ಪ್ರಜಾಪ್ರ ಭುತ್ವದಲ್ಲಿ ಸಾರ್ವಜನಿಕರ ಹಕ್ಕು. ಅಮಾಯಕ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದಾಗ ಪ್ರತಿಭಟಿಸಿ ದ್ದೇವೆ. ಕಾನೂನು ಬಾಹಿರ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಹೇಳಿದರು.

ಯುವಮೋರ್ಚಾದ ಅಧ್ಯಕ್ಷ ಶಶಿರಾಜ್‌ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಆರು ತಿಂಗಳ ಹಿಂದೆ ಒಂದು ಸುಳ್ಳು ಕೇಸು ಹಾಕಿ ಅವರ ವಿರುದ್ಧ ರೌಡಿಶೀಟ್‌ ತೆರೆಯಲಾಗಿತ್ತು. ನಾವು ಕಾನೂನಿನ ಮೇಲೆ ಗೌರವ ಇಟ್ಟಿರುವಂತೆ ದೈವ ದೇವರ ಮೇಲೂ ನಂಬಿಕೆ ಇಟ್ಟಿದ್ದೇವೆ. ಶಶಿರಾಜ್‌ ಬಿಡು ಗಡೆಯಾದ ಮೇಲೆ ದೇವಸ್ಥಾ ನದಲ್ಲೇ ಪ್ರಮಾಣ ಮಾಡಿಸುತ್ತೇನೆ. ಅವರನ್ನು ರಾಜಕೀಯ ಷಡ್ಯಂತ್ರದಿಂದ ಬಂಧಿಸ ಲಾಗಿದೆ. ಕಾಂಗ್ರೆಸ್‌ ದ್ವೇಷದ ರಾಜಕಾ ರಣ ಮಾಡುತ್ತಿದ್ದು, ತನ್ನ ವಿರುದ್ಧದ ಎರಡೂ ಪ್ರಕರಣಕ್ಕೂ ಮೊದಲ ಬಾರಿಗೆ ಎಂಬಂತೆ ಮೂರೇ ದಿನಗಳಲ್ಲಿ ಚಾರ್ಜ್‌ ಶೀಟ್‌ ಹಾಕಲಾಗಿದೆ ಎಂದರು.

ನ್ಯಾಯವಾದಿ ಕೆ. ಶಂಭು ಶರ್ಮ ಮಾತನಾಡಿ, ಪೊಲೀಸರು ಯಾವುದೇ ನೋಟಿಸ್‌ ನೀಡಿಲ್ಲ. ಸಂಜೆಯವರೆಗೂ ಠಾಣೆಗೆ ಬರಲು ಒತ್ತಾಯಿಸುತ್ತಿದ್ದರು. ಶಾಸಕರಿಗೆ ದಿಗ್ಬಂಧನ ಹಾಕಿದ್ದರು. ಎಸ್‌ಪಿ ಜತೆ ಪೋನ್‌ನಲ್ಲಿ ಮಾತನಾಡುವಾಗಲೂ ಏರಿದ ಸ್ವರದಲ್ಲೇ ಮಾತನಾಡಿದರು. ಅನಂತರ ಠಾಣೆಗೆ ಬರುವಂತೆ ಮನವಿ ಮಾಡಿದರು. ಅದರಂತೆ ಠಾಣೆಗೆ ಹೋಗಿ ಹೇಳಿಕೆ ನೀಡಿ ಬಂದಿದ್ದಾರೆ. ಬಂಧಿಸಿ ಜಾಮೀನಿನಲ್ಲಿ ಬಿಟ್ಟದ್ದು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಈ ಪ್ರಕರಣ ದಲ್ಲಿ ಠಾಣೆಯಲ್ಲಿ ಜಾಮೀನು ನೀಡಲು ಬಾರದು. ಪೊಲೀಸರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ಡಾ| ಭರತ್‌ ಶೆಟ್ಟಿ ವೈ., ವೇದವ್ಯಾಸ ಕಾಮತ್‌, ಭಾಗೀ ರಥಿ ಮುರುಳ್ಯ, ಪ್ರತಾಪ ಸಿಂಹ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಕ್ಯಾ| ಬ್ರಿಜೇಶ್‌ ಚೌಟ ಉಪಸ್ಥಿತರಿದ್ದರು.

ದ್ವೇಷದ ರಾಜಕಾರಣ: ನಳಿನ್‌ ಕುಮಾರ್‌
ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ. ಪೂಂಜಾ ಅವರ ಮೇಲೆ ಕೇಸ್‌ ಹಾಕಿದಾಗ ಅವರ ಮನೆಗೆ ಹೋಗಿದ್ದೆವು. ಆಗ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರೂ ಶಾಂತಿ ಯುತವಾಗಿತ್ತು. ಶಾಸಕರು ಹೇಳಿಕೆ ಕೊಡುವಂತೆ ಪೊಲೀಸರು ಕೇಳಿದರು. ಅದನ್ನು ಅಲ್ಲಿಯೇ ತೆಗೆದುಕೊಳ್ಳುವಂತೆ ಹೇಳಿದೆವು. ಆದರೆ ಠಾಣೆಗೆ ಬರಬೇಕು ಎಂದರು. ಅನಂತರ ಠಾಣೆಗೆ ಹೋಗಿ ಹೇಳಿಕೆ ನೀಡಲಾಗಿದೆ. ಶಾಸಕರನ್ನು ಬಂಧಿಸಿದ್ದಲ್ಲ, ಕಾನೂನಿಗೆ ಗೌರವ ಕೊಟ್ಟು ಹೇಳಿಕೆ ಕೊಟ್ಟು ಬಂದಿದ್ದಾರೆ. ಒಬ್ಬೊಬ್ಬರೇ ಶಾಸಕರನ್ನು ಗುರಿಯಾಗಿಸಿ ದ್ವೇಷ ಸಾಧಿಸುವುದು ಕಾಂಗ್ರೆಸ್‌ನ ತಂತ್ರಗಾರಿಕೆ. ಅದನ್ನು ಈಗ ಪೂಂಜಾ ಅವರ ಮುಖಾಂತರ ಆರಂಭಿಸಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಟಾಪ್ ನ್ಯೂಸ್

During the Lok Sabha election, there was a discussion about caste-wise DCM, but….: hc mahadevappa

Lok Sabha ಚುನಾವಣೆ ವೇಳೆ ಜಾತಿವಾರು ಡಿಸಿಎಂ ಚರ್ಚೆ ನಡೆದಿತ್ತು, ಆದರೆ….: ಮಹಾದೇವಪ್ಪ

7-kodagu

Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Lokayukta ಭೂ ಮಾಪನ ಅಧಿಕಾರಿ, ಸರ್ವೇಯರ್‌ ಮನೆ, ಕಚೇರಿಗೆ ಲೋಕಾಯುಕ್ತ ಶೋಧ

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

Rain ಕರಾವಳಿಯಲ್ಲಿ ಬಿಡುವು ನೀಡಿದ ಮಳೆ

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

Ivan D’Souza”ನೀಟ್‌’ನಿಂದ ರಾಜ್ಯ ಹೊರಗೆ ಬರಲು ನಿಲುವಳಿ ಸೂಚನೆ

Captain Brijesh Chowta ಹಿಂದುತ್ವದ ಆಧಾರದಲ್ಲಿ ವಿಕಸಿತ ದಕ್ಷಿಣ ಕನ್ನಡ

Captain Brijesh Chowta ಹಿಂದುತ್ವದ ಆಧಾರದಲ್ಲಿ ವಿಕಸಿತ ದಕ್ಷಿಣ ಕನ್ನಡ

dc

Electrical failure: ವರದಿ ನೀಡುವಂತೆ ಮೆಸ್ಕಾಂ ಎಂ.ಡಿ.ಗೆ ಜಿಲ್ಲಾಧಿಕಾರಿ ಸೂಚನೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

During the Lok Sabha election, there was a discussion about caste-wise DCM, but….: hc mahadevappa

Lok Sabha ಚುನಾವಣೆ ವೇಳೆ ಜಾತಿವಾರು ಡಿಸಿಎಂ ಚರ್ಚೆ ನಡೆದಿತ್ತು, ಆದರೆ….: ಮಹಾದೇವಪ್ಪ

7-kodagu

Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.