ಥರ್ಮೋಕೋಲ್‌ ಬಳಸಿ ವಿನೂತನ ಭತ್ತ ಕೃಷಿ


Team Udayavani, Jun 20, 2018, 3:40 AM IST

tharma-agri-19-6.jpg

ಉಳ್ಳಾಲ: ಮುಂಗಾರು ಮಳೆ ಪ್ರಾರಂಭಗೊಳ್ಳುತ್ತಿದ್ದಂತೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಭತ್ತದ ಕೃಷಿಗೆ ಸಕಾಲವಾದರೂ ಕಾರ್ಮಿಕರ ಕೊರತೆಯಿಂದ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕಡಿಮೆ ಕಾರ್ಮಿಕರನ್ನು ಬಳಸಿ ಯಶಸ್ವಿಯಾಗಿ ಭತ್ತದ ಕೃಷಿ ಮಾಡಬಹುದು ಎನ್ನುವುದನ್ನು ಉಳ್ಳಾಲ ಉಳಿಯ ನಿವಾಸಿ, ಸಾವಯವ ಕೃಷಿಕ ವಿಜಯ ಕುಂದರ್‌ ಕಳೆದ ಎರಡು ವರ್ಷಗಳಿಂದ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಹಿರಿಯರಿಂದ ಬಂದ ಕೃಷಿ ಭೂಮಿಯಲ್ಲಿ ಬಾಲ್ಯದಿಂದಲೇ ಕೃಷಿ ಮಾಡಿಕೊಂಡು ಬರುತ್ತಿರುವ ಯುವಕ ವಿಜಯ್‌, ಸಾವಯವ ತರಕಾರಿ ಕೃಷಿ, ಹೈನುಗಾರಿಕೆ, ಭತ್ತದ ಕೃಷಿ ನಡೆಸಿ ಯಶಸ್ವಿಯಾದವರು. ಇಸ್ರೇಲ್‌ನಲ್ಲಿ ಐದು ವರ್ಷ ಉದ್ಯೋಗದಲ್ಲಿದ್ದಾಗ ಅವರು ಅಲ್ಲಿನ ಕೃಷಿ ಪದ್ಧತಿಯ ಕುರಿತು ಬಿಡುವಿನ ವೇಳೆ ಅಧ್ಯಯನ ನಡೆಸಿದವರು. ಊರಿಗೆ ಮರಳಿದ ಬಳಿಕ ಕೃಷಿಯಲ್ಲಿ ಅದನ್ನು ಅನುಷ್ಠಾನಿಸಿದರು. ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ನಡೆಸಿರುವ ಅವರು ಈಗ ಭತ್ತದ ಕೃಷಿಯಲ್ಲಿ ಥರ್ಮೋಕೋಲ್‌ ಬಳಸಿ ಕಡಿಮೆ ಅವಧಿಯಲ್ಲಿ ಕಡಿಮೆ ಕಾರ್ಮಿಕರನ್ನು ಬಳಸಿ ಕೃಷಿ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.

ಏನಿದು ಥರ್ಮೋಕೋಲ್‌ ಪ್ರಯೋಗ ?

ಗದ್ದೆ ಉಳುಮೆಯ ಬಳಿಕ ಬೀಜ ಬಿತ್ತಿ, ನೇಜಿ ತೆಗೆದು ನಾಟಿ ಮಾಡಲು ಸುಮಾರು 30 ದಿನ ಬೇಕಾಗುತ್ತದೆ. ಇದಕ್ಕಾಗಿ ಎರಡು ಬಾರಿ ಕೃಷಿ ಕೂಲಿ ಕಾರ್ಮಿಕರ ಅಗತ್ಯವಿರುತ್ತದೆ. ವಿಜಯ್‌ ಅವರು ಮೀನಿನ ಬೋಟ್‌ಗಳಲ್ಲಿ ಫ್ರೀಝರ್‌ಗೆ ಬಳಸಿ ಗುಜರಿಗೆ ಹಾಕಿರುವ ಥರ್ಮೋಕೋಲ್‌ ಶೀಟ್‌ ಗಳನ್ನು ಒಟ್ಟು ಸೇರಿಸಿ ಚಾಪೆ ನೇಜಿ ಮಾದರಿಯಲ್ಲಿ ಥರ್ಮೋಕೋಲ್‌ ಶೀಟ್‌ ಗಳನ್ನು ಗದ್ದೆಯಲ್ಲಿಟ್ಟು ಅದರ ಮೇಲೆ ಮಣ್ಣು ಹಾಕಿ ಬೀಜ ಬಿತ್ತನೆ ನಡೆಸುತ್ತಾರೆ. 10 ದಿನಗಳಲ್ಲಿ ಬಿತ್ತಿದ ಬೀಜ ನೇಜಿಯಾಗಿ ನಾಟಿ ನಡೆಸಲು ಯೋಗ್ಯವಾಗಿರುತ್ತದೆ ಎನ್ನುತ್ತಾರೆ ವಿಜಯ್‌.

ಥರ್ಮೋಕೋಲ್‌ ನಲ್ಲಿ ನೇಜಿ ಹಾಕುವುದರಿಂದ ಗದ್ದೆಯ ನೀರಿನಲ್ಲಿ ಥರ್ಮೋಕೋಲ್‌ ತೇಲುತ್ತಾ ಇರುತ್ತದೆ. ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ದೂಡಿಕೊಂಡೇ ಸರಿಸಲು ಅವಕಾಶವಿರುತ್ತದೆ. ಥರ್ಮೋಕೋಲ್‌ ನೀರಿನಲ್ಲಿ ತೇಲುವುದರಿಂದ ಹಕ್ಕಿಗಳು ನೇಜಿಯನ್ನು ಹಾಳು ಮಾಡಲು ಬರುವುದಿಲ್ಲ. ಇನ್ನೊಂದೆಡೆ ನೇಜಿಯೂ ಹಾಳಾಗುವುದಿಲ್ಲ. ನೇಜಿ ನಾಟಿ ಮಾಡುವ ಕೂಲಿ ಕಾರ್ಮಿಕರ ಬಳಿ ಬೇಕಾದಷ್ಟು ಥರ್ಮೋಕೋಲ್‌ ನೇಜಿ ಸಾಗಿಸಿ ಅಲ್ಲಿಂದಲೇ ನೇರವಾಗಿ ನಾಟಿ ಮಾಡಲು ಅನುಕೂಲವಾಗು ತ್ತದೆ ಎನ್ನುತ್ತಾರೆ ಅವರು.

ಕಡಿಮೆ ಕಾರ್ಮಿಕರು

ಒಂದು ಎಕ್ರೆ ಇರುವ ಗದ್ದೆಗೆ ನೇಜಿ ತೆಗೆಯಲು ಮತ್ತು ನಾಟಿ ಮಾಡಲು ಮೂರು ದಿನಗಳ ಕಾಲ 45 ಶ್ರಮ ವಿನಿಯೋಗವಾಗುತ್ತಿತ್ತು. ಹೊಸ ವಿಧಾನದಿಂದ  ಒಂದೇ ದಿನಕ್ಕೆ 8 ರಿಂದ 10 ಮಂದಿ ಕೃಷಿ ಕಾರ್ಯ ಮಾಡಿ ಮುಗಿಸಿದ್ದಾರೆ. ಮೂರನೇ ಬಾರಿ ಈ ಮಾದರಿಯಲ್ಲಿ ಕೃಷಿ ಮಾಡಲಾಗುತ್ತಿದೆ. ನೇಜಿ ನಾಟಿಗೆ ಮಾತ್ರ ಕಾರ್ಮಿಕರ ಬಳಕೆ ಮಾಡುತ್ತಿದ್ದೇನೆ. ಏಕಕಾಲದಲ್ಲಿ ಥರ್ಮೋಕೋಲ್‌ನಲ್ಲಿ ನೇಜಿ ಬಿತ್ತಿದ್ದ ಗದ್ದೆಯಲ್ಲೇ ನಾಟಿ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ವಿಜಯ್‌.

ನೇಜಿ ಕೊಳೆಯುವ ಭೀತಿಯಿಲ್ಲ 
ಸಾಧಾರಣವಾಗಿ ಮಳೆಗಾಲದಲ್ಲಿ ಬೀಜ ಬಿತ್ತಿದ್ದ ಬಳಿಕ ನೀರು ಹೆಚ್ಚಾದರೆ ನೇಜಿ ಕೊಳೆಯುವ ಭೀತಿ ಇರುತ್ತದೆ. ಆದರೆ ಥರ್ಮೋಕೋಲ್‌ ನಲ್ಲಿ ನೇಜಿ ಹಾಕುವ ಕಾರಣ ನೇಜಿ ಮುಳುಗುವ ಭೀತಿ, ಕೊಳೆಯುವ ಭೀತಿ ಇರುವುದಿಲ್ಲ. ಮಳೆ ಬಾರದಿದ್ದರೆ ನೇಜಿಗೆ ನೀರು ಹಾಯಿಸುವ ಕೆಲಸ ಮಾತ್ರ ಮಾಡಿದರೆ ಹಾಳಾಗುವ ಭೀತಿಯಿಲ್ಲ ಎನ್ನುತ್ತಾರೆ ವಿಜಯ್‌ ಅವರು.

ಕಾರ್ಮಿಕರ ಕೊರತೆ ನೀಗಿಸಬಹುದು
ಕಾರ್ಮಿಕರ ಕೊರತೆ ಮತ್ತು ಭತ್ತದ ಕೃಷಿ ಲಾಭದಾಯಕ ಅಲ್ಲ ಎನ್ನುವ ನಿಟ್ಟಿನಲ್ಲಿ ಅನೇಕರು ಕೃಷಿಯಿಂದ ದೂರವಾಗುತ್ತಿದ್ದಾರೆ. ಥರ್ಮೋಕೋಲ್‌ ಬಳಸಿ ಕೃಷಿ ನಡೆಸಿದರೆ ಕಾರ್ಮಿಕರ ಕೊರತೆಯನ್ನು ನೀಗಿಸಲು ಸಾಧ್ಯವಿದೆ. ಈ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡಲು ಸಿದ್ಧನಿದ್ದೇನೆ. 
– ವಿಜಯ್‌ ಕುಂದರ್‌ ಉಳಿಯ, ಸಾವಯವ ಕೃಷಿಕರು

ಸಣ್ಣ ರೈತರಿಗೆ ಅನುಕೂಲ
ವಿಜಯ್‌ ಅವರ ಸಾಧನೆ ವಿಶಿಷ್ಟವಾದುದು. ಥರ್ಮೋ ಕೋಲ್‌ ವಿಧಾನ ಸಣ್ಣ ರೈತರಿಗೆ ಅತ್ಯಂತ ಉಪಯೋಗವಾಗಿದ್ದು, ಇದರಿಂದ ಶ್ರಮ, ಸಮಯದ ಉಳಿತಾಯದೊಂದಿಗೆ ಮಳೆಗಾಲದಲ್ಲಿ ನೇಜಿ ನಷ್ಟವಾಗುವ ಭೀತಿಯನ್ನು ತಪ್ಪಿಸಬಹುದು. ಅತ್ಯಂತ ಸರಳ ಮತ್ತು ವಿನೂತನವಾದ ಮಾದರಿಯಾಗಿದೆ. ಈಗಾಗಲೇ ಇದರ ಅಧ್ಯಯನ ನಡೆಸಿ ಜಿಲ್ಲೆಯ ಮತ್ತು ಹೊರಜಿಲ್ಲೆಯ ಕೃಷಿ ಅಧಿಕಾರಿಗಳಿಗೆ ಮತ್ತು ರೈತರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
– ಮುರಳೀಧರ ಹಮ್ಮನ್ನವರ್‌, ಸಹಾಯಕ ಕೃಷಿ ಅಧಿಕಾರಿ,ಮಂಗಳೂರು

— ವಸಂತ್‌ ಎನ್‌. ಕೊಣಾಜೆ

ಟಾಪ್ ನ್ಯೂಸ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

9(1

Mangaluru: 10ಕ್ಕೂ ಅಧಿಕ ಅಪಾಯಕಾರಿ ಕ್ರಾಸಿಂಗ್‌

5

Bajpe: ಕೆಂಜಾರು ಹಾಸ್ಟೆಲ್‌  ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ

4

Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು

3

Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್‌

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

10(1

Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

1-delhi

Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?

9(1

Mangaluru: 10ಕ್ಕೂ ಅಧಿಕ ಅಪಾಯಕಾರಿ ಕ್ರಾಸಿಂಗ್‌

8

Kundapura: ರಸ್ತೆ, ಪೈಪ್‌ಲೈನ್‌ ಕಾಮಗಾರಿಯಿಂದ ಧೂಳು; ಹೈರಾಣಾದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.