ಪೆಟ್‌ ಕೋಕ್‌ ಸಾಗಣೆಗೆ ವಿಶೇಷ ವ್ಯವಸ್ಥೆ 


Team Udayavani, Feb 9, 2018, 11:09 AM IST

9-Feb-6.jpg

ಸುರತ್ಕಲ್‌: ಪೆಟ್‌ ಕೋಕ್‌ ಧೂಳು ಸಾಗಣೆ ವೇಳೆ ಪರಿಸರಕ್ಕೆ ಸೇರಿ ನಾಗರಿಕರ ಆರೋಗ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ದೂರಿಗೆ ಸ್ಪಂದಿಸಿರುವ ಎಂಆರ್‌ ಪಿಎಲ್‌ ಸಂಸ್ಥೆ ಹೊಸ ಪರಿಹಾರವನ್ನು ಹುಡುಕಿದೆ.

ಅದರಂತೆ ದೇಶದ ಮಿನಿ ರತ್ನ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ ಸ್ಥಾವರದೊಳಗೆ ಪೆಟ್‌ಕೋಕ್‌ ಸಾಗಿಸಲು 2018ರ ಡಿಸೆಂಬರ್‌ನಿಂದ ಗೂಡ್ಸ್‌ ರೈಲು ಸಂಚರಿಸಲಿದೆ.

ಈ ಹಿನ್ನೆಲೆಯಲ್ಲಿ ಸುಮಾರು 3.52 ಕಿ.ಮೀ. ವರೆಗೆ ರೈಲು ಹಳಿ (ರೈಲ್ವೇ ಸೈಡಿಂಗ್‌) ನಿರ್ಮಿಸುತ್ತಿದೆ. ಇದಕ್ಕಾಗಿ ಕೊಂಕಣ ರೈಲ್ವೇ ಜತೆ 2016ರ ಅಕ್ಟೋಬರ್‌ ನಲ್ಲಿ ಒಪ್ಪಂದ ಮಾಡಿಕೊಂಡಿರುವ ಎಂಆರ್‌ಪಿಎಲ್‌ 80.16 ಕೋ.ರೂ. ಪಾವತಿಸಿದೆ. ತೋಕೂರು ರೈಲ್ವೇ ಹಳಿ ಬಳಿಯಿಂದ ಎಂಆರ್‌ಪಿಎಲ್‌ವರೆಗೆ 3.52 ಕಿ.ಮೀ. ಉದ್ದದ ಹಳಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, 2018ರ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ.

ಪೆಟ್‌ ಕೋಕ್‌, ಪೊಲಿಪ್ರೊಪಿಲಿನ್‌, ಸಲ ರ್‌ ಬಿಟಮಿನ್‌ ಸಾಗಾಟಕ್ಕೆ ಈ ಹೊಸ ರೈಲ್ವೇ ಸಂಪರ್ಕ ಸಹಕಾರಿಯಾಗಲಿದೆ. ಇದರಿಂದ ಮಾಲಿನ್ಯಕಾರಕ ವಸ್ತುಗಳ ಸಾಗಣೆಗೆ ಬಳಸಲಾಗುತ್ತಿದ್ದ ಬೃಹತ್‌ ಗಾತ್ರದ ಲಾರಿಗಳಿಗೆ ವಿರಾಮ ಸಿಗಲಿದೆ. ಜತೆಗೆ ಹೆದ್ದಾರಿ ಮತ್ತು ಒಳ ರಸ್ತೆಯಲ್ಲಿ ವಾಹನ ಒತ್ತಡ ಗಣನೀಯವಾಗಿ ಕುಗ್ಗಲಿದೆ.

ಅತ್ಯಾಧುನಿಕ ಕಾಮಗಾರಿ
ಎಂಆರ್‌ಪಿಎಲ್‌ ಹಳಿ ಸಂಪರ್ಕ ಭಾಗದಲ್ಲಿ ನಾಲ್ಕು ಗ್ಯಾಸ್‌ ಪೈಪ್‌ಲೈನ್‌ ಸಾಗಣೆ ಸಹಿತ ಬಹುಪಯೋಗಿ 10 ಕಿರು
ಸೇತುವೆಗಳು ನಿರ್ಮಾಣವಾಗಲಿದೆ. ಈ ಪ್ರದೇಶ ನೀರು ನಿಲ್ಲುವ ಮತ್ತು ಒಸರುವ ಪ್ರದೇಶವಾದ ಕಾರಣ ಹಳಿ ನಿರ್ಮಾಣಕ್ಕೆ ರೈಲ್ವೇಯು ಅತ್ಯಾಧುನಿಕ ತಂತ್ರಜ್ಞಾನ ಬಳಸಲಿದೆ. ಟ್ರಕ್ಕುಗಳಲ್ಲಿ 20ರಿಂದ 25ಟನ್‌ ಮಾತ್ರ ಪೆಟ್‌ ಕೋಕ್‌ ಹೇರಲು ಅವಕಾಶವಿತ್ತು. ಆದರೆ ಗೂಡ್ಸ್‌ ವ್ಯಾಗನ್‌ ನಲ್ಲಿ 40ರಿಂದ 50 ಟನ್‌ಗೂ ಹೆಚ್ಚು ಸರಕು ಹಾಕಬಹುದಾಗಿದೆ. ಒಂದು ಬಾರಿಗೆ 1,400 ಟನ್‌ಗಳಷ್ಟು ಪೆಟ್‌ ಕೋಕ್‌ನ್ನು ಸಾಗಿಸಬಹುದು.

ಹಳಿ ನಿರ್ಮಾಣ
ಎಂಆರ್‌ಪಿಎಲ್‌ ಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಳಿ ನಿರ್ಮಿಸಲಾಗುತ್ತಿದೆ. ನೇರವಾಗಿ ಸರಕನ್ನು ಕಂಪೆನಿಯ ಒಳಭಾಗದಲ್ಲೇ ಲೋಡ್‌ ಮಾಡಿ ಬೇರೆಡೆ ಒಯ್ಯಲಾಗುತ್ತದೆ. ಇದರಿಂದ ಸಮಯ ಉಳಿತಾಯದ ಜತೆಗೆ ಪರಿಸರ ಮಾಲಿನ್ಯ ತಪ್ಪಲಿದೆ. 
– ಸುಧಾಕೃಷ್ಣ ಮೂರ್ತಿ
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ ರೈಲ್ವೇ ಉಡುಪಿ

170 ಕೋ.ರೂ. ವೆಚ್ಚ
ಎಂಆರ್‌ಪಿಎಲ್‌ಗೆ ಸುಮಾರು 170 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಕಾಮಗಾರಿ ನಡೆಯುತ್ತಿದೆ. 80 ಕೋಟಿ ರೂ. ಮೊತ್ತದ ಹಳಿ ಕಾಮಗಾರಿಯನ್ನು ಕೊಂಕಣ ರೈಲ್ವೇ ನಿರ್ವಹಿಸುತ್ತಿದೆ. ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಪಿಎಲ್‌ ಸ್ವತಃ ರೈಲ್ವೇಗೆ ಬೇಕಾದ ಪೂರಕ ಕಾಮಗಾರಿಯನ್ನು ಕೈಗೊಳ್ಳುತ್ತಿದೆ. ಇದರಿಂದ ಪೆಟ್‌ ಕೋಕ್‌ ಮತ್ತಿತರ ಸರಕು ಸಾಗಣೆಗೆ ಅನುಕೂಲವಲ್ಲದೇ, ಲಾರಿಗಳ ಒತ್ತಡವೂ ತಗ್ಗಲಿದೆ.
– ಪ್ರಶಾಂತ್‌ ಬಾಳಿಗಾ
ಜನರಲ್‌ ಮ್ಯಾನೇಜರ್‌, ಕಾರ್ಪೊರೇಟ್‌ ಸಂಪರ್ಕ, ಎಂಆರ್‌ಪಿಎಲ್‌

ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

modi (4)

ಇಲಾಖಾ ಮುಖ್ಯಸ್ಥರಿಗೆ “ಮನ್‌ ಕೀ ಬಾತ್‌’ ಕೇಳುವುದು ಕಡ್ಡಾಯ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.