ವಾಹನಗಳಲ್ಲಿ  ನಾಮಫ‌ಲಕ ವಿರುದ್ಧ  ವಿಶೇಷ ಅಭಿಯಾನ


Team Udayavani, Dec 1, 2017, 7:27 AM IST

01-6.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಬ್ಯಾಂಕ್‌ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಖಾಸಗಿ ವಾಹನಗಳಲ್ಲಿ “ಭಾರತ ಸರಕಾರ’ ಎಂದು ನಾಮ ಫಲಕ ಅಳವಡಿಸಲಾಗಿದೆ. ಜತೆಗೆ ಖಾಸಗಿ ವಾಹನಗಳಲ್ಲಿ ಸಂಘಟನೆ, ಸಂಸ್ಥೆಗಳ ನಾಮಫ‌ಲಕ ಹಾಕಲಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ವಿಶೇಷ ಅಭಿಯಾನ ನಡೆಸುವ ಮೂಲಕ ಅದನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತ ಶಿವರಾಜ್‌ ಪಾಟೀಲ್‌ ತಿಳಿಸಿದ್ದಾರೆ.

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ ಗುರು ವಾರ ನಡೆದ ಸಾರಿಗೆ ಅದಾಲತ್‌ನ ಅಧ್ಯಕ್ಷತೆ ವಹಿಸಿದ್ದ ಅವರು, ಅಹವಾಲು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದರು. ಕಾಯ್ದೆಯಂತೆ ವಾಹನಗಳ ನಂಬರ್‌ ಪ್ಲೇಟ್‌ಗಳಲ್ಲಿ ನಾಮಫ‌ಲಕ ಹಾಕುವಂತಿಲ್ಲ. ನಾಮ ಫ‌ಲಕ ತೆಗೆಸಲು ವಿಶೇಷ ಅಭಿಯಾನ ನಡೆಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಇನ್ಶೂರೆನ್ಸ್‌ ಇಲ್ಲದಿದ್ದರೆ ವಾಹನ ಆರ್‌ಟಿಒ ವಶಕ್ಕೆ
ಬಹುತೇಕ ದ್ವಿಚಕ್ರವಾಹನಗಳು ಇನ್ಶೂರೆನ್ಸ್‌ ಇಲ್ಲದೆ ಓಡಾಟ ನಡೆಸುತ್ತಿವೆ. ಈ ಬಗ್ಗೆ ಸೂಕ್ತ ತಪಾಸಣೆ ಹಾಗೂ ಕ್ರಮ ಅಗತ್ಯ ಎಂದು ಸಭೆಯಲ್ಲಿ ಜಿ.ಕೆ. ಭಟ್‌ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್‌ ಪಾಟೀಲ್‌, ವಾಹನ ಗಳಿಗೆ ಇನ್ಶೂರೆನ್ಸ್‌ ಕಡ್ಡಾಯ ಇಲ್ಲವಾದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯುವ ಅಧಿಕಾರ ಆರ್‌ಟಿಒ ಅಧಿಕಾರಿಗಳಿಗೆ ಇದೆ ಎಂದರು. ಖಾಸಗಿ ಕಾರುಗಳು ಪಾಂಡಿಚೇರಿ ರಿಜಿಸ್ಟ್ರೇಶನ್‌ ಮೂಲಕ ನಕಲಿ ವಿಳಾಸ ನೀಡಿ ರಾಜ್ಯ ಸರಕಾರಕ್ಕೆ ತೆರಿಗೆ ವಂಚಿಸುತ್ತಿವೆ ಎಂದು ಆಕ್ಷೇಪ ಮನವಿ ಸಲ್ಲಿಸಿದ ಜಿ.ಕೆ. ಭಟ್‌, ಬಸ್‌ಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿದ್ದರೂ ಪಾಲಿಸಲಾಗುತ್ತಿಲ್ಲ ಎಂದು ದೂರಿದರು. ಬಸ್‌ಗಳಲ್ಲಿ ಪ್ರಯಾಣದ ಸ್ಥಳಗಳ ಕುರಿತು ಕನ್ನಡದಲ್ಲಿಯೇ ಕಡ್ಡಾಯವಾಗಿ ಬೋರ್ಡ್‌ ಹಾಕಲು ಸೂಚಿಸಲಾಗಿದ್ದು, ಖಾಸಗಿ ಬಸ್‌ಗಳ ಮಾಲಕರು ಕೂಡ ಇದಕ್ಕೆ ಸಹ ಕರಿಸ ಬೇಕು ಎಂದು ಹೇಳಿದರು.

ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳ ಸುಗಮ ಪ್ರಯಾಣದ ದೃಷ್ಟಿಯಿಂದ ಬಸ್‌ಗಳ ಫ‌ುಟ್‌ಬೋರ್ಡ್‌ಗಳನ್ನು 52 ಸೆಂ.ಮೀ. ಎತ್ತರಕ್ಕೆ ಸೀಮಿತಗೊಳಿಸುವಂತೆ ಕೆಲವು ತಿಂಗಳ ಹಿಂದಿನ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಪಾಲನೆ ಯಾಗಿಲ್ಲ ಎಂಬ ದೂರಿಗೆ, ಎಸಿಪಿ (ಸಂಚಾರ) ಮಂಜುನಾಥ್‌ ಪ್ರತಿಕ್ರಿಯಿಸಿ, ಪ್ರತಿನಿತ್ಯ ಈ ಬಗ್ಗೆ ಬಸ್‌ಗಳ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

ಹಿರಿಯ ಪರಿಸರವಾದಿ, ಸಾಹಿತಿ ಬಿ.ಎಸ್‌. ಹಸನಬ್ಬ ಮನವಿ ಸಲ್ಲಿಸಿ, ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ ಇರುವುದನ್ನು ಕಡ್ಡಾಯ ಗೊಳಿಸ ಬೇಕು. 15 ವರ್ಷ ಮೇಲ್ಪಟ್ಟ ಬಸ್‌ಗಳ ಸಂಚಾರ ವನ್ನು ನಿಲ್ಲಿಸಬೇಕು. ಬಸ್‌ಗಳ ಹಳೆಯ ಟಯರ್‌ಗಳನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದರು. 

ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಗಳಲ್ಲಿ ಬಾಡಿಗೆ ನಡೆಸುತ್ತಿರುವುದರಿಂದ ತೊಂದರೆಯಾಗುತ್ತಿವೆ. ಮಾತ್ರವಲ್ಲದೆ, ಒಬ್ಬ ವ್ಯಕ್ತಿ ಎರಡೆರಡು ರಿಕ್ಷಾ ಪರ್ಮಿಟ್‌ ಪಡೆದಿರುವ ಕುರಿತು ದೂರು ಸಲ್ಲಿ ಸಿದ್ದರೂ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. 

ಟಾಪ್ ನ್ಯೂಸ್

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಭಾಮೈದ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊ*ಲೆ ಮಾಡಿದ ಭಾಮೈದ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

6(2)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

5

Surathkal: ಬೀದಿದೀಪಗಳಿಗೇ ಇನ್ನೂ ಸಿಕ್ಕಿಲ್ಲ ವಿದ್ಯುತ್‌ ಸಂಪರ್ಕ

4

Pilikula: 10 ವರ್ಷಗಳ ಬಳಿಕ ನಡೆಯಲಿದೆ ಕಂಬಳ!

3

Mangaluru: ಮೂಕ ಪ್ರಾಣಿಗಳ ಪ್ರಾಣ ಹಿಂಡುವ ಪ್ಲಾಸ್ಟಿಕ್‌!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಭಾಮೈದ

Chikkamagaluru: ಬಾವನನ್ನು ಇಟ್ಟಿಗೆಯಿಂದ ಹೊಡೆದು ಕೊ*ಲೆ ಮಾಡಿದ ಭಾಮೈದ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

Davanagere: ಭೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.